ಬೆಂಗಳೂರು:ಐದು ವರ್ಷದ ಬಾಲಕಿಯೊಬ್ಬಳನ್ನು ಅರೆಬೆತ್ತಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಯೋಗ ಶಿಕ್ಷಕನಿಗೆ 1ನೇ ತ್ವರಿತಗತಿ ನ್ಯಾಯಾಲಯ ಐದು ವರ್ಷ ಶಿಕ್ಷೆ, 30 ಸಾವಿರ ರೂ. ದಂಡ ವಿಧಿಸಿದೆ. ಅತ್ತಿಗುಪ್ಪೆಯ ಬಿನ್ನಿ ಲೇಔಟ್ ನಿವಾಸಿ ಸ್ವಾಮಿ ನಿರಂಜನ್ (73) ಶಿಕ್ಷೆಗೆ ಗುರಿಯಾದ ಶಿಕ್ಷಕ.
ಜಯನಗರದ ಧ್ಯಾನ ಮಂದಿರದಲ್ಲಿ ಸ್ವಾಮಿ ನಿರಂಜನ್, ಧ್ಯಾನ ಮತ್ತು ಯೋಗಾಸನ ತರಬೇತಿ ನೀಡುತ್ತಿದ್ದ. ಸಂತ್ರಸ್ತೆಯ ತಾಯಿ ಅದೇ ಧ್ಯಾನ ಮಂದಿರದಲ್ಲಿ ಸೇವಾ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. 2018ರ ಆಗಸ್ಟ್ 4ರಂದು ಶಾಲೆ ಮುಗಿದ ಬಳಿಕ ಬಾಲಕಿಯನ್ನು ತಾಯಿ ಆಶ್ರಮಕ್ಕೆ ಕರೆ ತಂದು ಅತಿಥಿ ಕೋಣೆಯಲ್ಲಿ ಬ್ಯಾಗ್ ಇರಿಸಿದ್ದರು.
ಕೋಣೆಗೆ ಬಾಲಕಿ ಹೋದಾಗ ನಿರಂಜನ್​ ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದರು. ಈ ಸಂಬಂಧ ಬಾಲಕಿ ತಾಯಿ ಚಂದ್ರಾ ಲೇಔಟ್ ಠಾಣೆಗೆ ದೂರು ನೀಡಿದ್ದರು. ಪೋಕ್ಸೋ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಸರ್ಕಾರಿ ಅಭಿಯೋಜಕಿ ಪಿ.ಕೃಷ್ಣವೇಣಿ ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಕೆ.ಎನ್. ರೂಪಾ, ಅಪರಾಧಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಬೆಂಗಳೂರು ನಗರ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.
ಮಗನಿಗೆ ಉಗ್ರರ ನಂಟು, ನೊಂದ ತಂದೆ ಹೃದಯಾಘಾತಕ್ಕೀಡಾಗಿ ಸಾವು..
ರೆಸಾರ್ಟಲ್ಲಿ ಯುವತಿಯ ಕೊಲೆ, ಬಿಜೆಪಿ ಮಾಜಿ ಸಚಿವನ ಪುತ್ರ ಅರೆಸ್ಟ್; ವಾರದ ಹಿಂದೆ ನಾಪತ್ತೆ ಆಗಿದ್ದ ಉದ್ಯೋಗಿ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eighteen =
Remember me
