ಬೆಂಗಳೂರು:ನೂರಕ್ಕೂ ಹೆಚ್ಚು ಆಸನಗಳನ್ನು ಕರಗತ ಮಾಡಿಕೊಂಡು, ದೇಶಾದ್ಯಂತ 150ಕ್ಕೂ ಹೆಚ್ಚು ಯೋಗ ಪ್ರದರ್ಶನ ನೀಡಿ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟು 70ಕ್ಕೂ ಹೆಚ್ಚು ಚಿನ್ನದ ಪದಕಗಳನ್ನು ಗಳಿಸಿರುವ ಈಕೆ ಯೋಗಸಂಧ್ಯಾ ಎಂದೇ ಖ್ಯಾತಿ, ಅಲ್ಲದೆ ಈಕೆಯ ಇಷ್ಟೆಲ್ಲ ಸಾಧನೆಗಳ ಹಿಂದಿನ ಯೋಗಗುರು ತಂದೆ.
ಆರನೇ ತರಗತಿಯಲ್ಲಿ ಯೋಗಾಭ್ಯಾಸ ಪ್ರಾರಂಭಿಸಿದ ಈ ಬಾಲಕಿಯ ಹೆಸರು ಎಂ.ಎಸ್.ಸಂಧ್ಯಾ. ಈಕೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾನಗೋಡು ಗ್ರಾಮದ ಕೃಷಿ ಕುಟುಂಬದ ಅಪ್ಪಟ ಗ್ರಾಮೀಣ ಪ್ರತಿಭೆ.
ಈಕೆಗೆ ಇಂದು ಶಿವಮೊಗ್ಗದ ಪೆ.ಸೆ.ಟ್ ಕಾಲೇಜ್ ಆವರಣದಲ್ಲಿ ನಡೆದ 9ನೇ ಅಂತರಾಷ್ಟ್ರೀಯ ಯೋಗ ದಿನದಂದು ‘ಯೋಗರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್​​ನವರು ಪ್ರೇರಣಾ ಟ್ರಸ್ಟ್ ನ ಸಹಯೋಗದೊಂದಿಗೆ ಆಯೋಜಿಸಿದ್ದ ಈ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಇದನ್ನೂ ಓದಿ:ಠಾಣೆಗೆ ಭೇಟಿ ನೀಡುವಂತೆ ಡಿಸಿಪಿ-ಎಸ್‌ಪಿಗೆ ಡಿಜಿಪಿ ಡಾ.ಅಲೋಕ್ ಮೋಹನ್ ಕಟ್ಟಾಜ್ಞೆ
ಪ್ರಸ್ತುತ ದ್ವಿತೀಯ ವರ್ಷದ ಬಿ.ಸಿ.ಎ ಡಿಗ್ರಿ ಓದುತ್ತಿರುವ ಈಕೆ ಸಾಗರದಲ್ಲಿ 7 ವರ್ಷಗಳ ಹಿಂದೆಯೇ ‘ಶ್ರೀ ಗುರುಕುಲ ಯೋಗಕೇಂದ್ರ’ ಆರಂಭಿಸಿ ಯೋಗ ಶಿಕ್ಷಕಿ ಆಗಿ ನಗರದ ಆಸಕ್ತ ಮಕ್ಕಳಿಗೆ ಉಚಿತ ಯೋಗಾಸನ ಕಲಿಸುತ್ತಿದ್ದು, ಆ ವಿದ್ಯಾರ್ಥಿಗಳೂ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.

‘ಯೋಗಸಂಧ್ಯಾ’ ಎಂದೇ ಪ್ರಖ್ಯಾತವಾದ ಈಕೆ ಅತ್ಯಂತ ಕ್ಲಿಷ್ಟಕರವಾದ ಆಸನಗಳನ್ನು ಮಾಡುವ ದೇಶದ ಕೆಲವೇ ಕೆಲವು ಯೋಗಪಟುಗಳೊಂದಿಗೆ ಗುರುತಿಸಿಕೊಂಡಿದ್ದಲ್ಲದೆ ನೂರಕ್ಕೂ ಹೆಚ್ಚು ಆಸನಗಳನ್ನು ಕರಗತ ಮಾಡಿಕೊಂಡಿದ್ದಾರೆ. ದೇಶಾದ್ಯಂತ 150ಕ್ಕೂ ಹೆಚ್ಚು ಯೋಗ ಪ್ರದರ್ಶನ ನೀಡಿ ದೇಶದ ಅತ್ಯುನ್ನತ 10 ಯೋಗ ಪಟುಗಳ ಪೈಕಿ ಇವರೂ ಒಬ್ಬರಾಗಿದ್ದಾರೆ.
ಇದನ್ನೂ ಓದಿ:ಅನಗತ್ಯವಾಗಿ ಮಹಾಪ್ರಾಣ ಪ್ರಯೋಗಿಸಬೇಡಿ..: ನಟ ಜಗ್ಗೇಶ್​ಗೆ ‘ಮೇಷ್ಟ್ರ’ ಕನ್ನಡ ಪಾಠ!
ಯೋಗ ಆರಂಭಿಸಿದ ಕೆಲವೇ ವರ್ಷಗಳಲ್ಲಿ ಕರ್ನಾಟಕ ಮಾತ್ರವಲ್ಲದೆ, ದೆಹಲಿ, ಮಹಾರಾಷ್ಟ್ರ, ಛತ್ತೀಸ್​ಗಢ, ಪಂಜಾಬ್, ಹರಿಯಾಣ, ಗೋವ, ತಮಿಳುನಾಡು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಿ 70ಕ್ಕೂ ಹೆಚ್ಚು ಬಂಗಾರದ ಪದಕಗಳನ್ನು ಗಳಿಸಿದ್ದಾರೆ.
ಬಿರುದುಗಳು:ಈಕೆ ಯೋಗ ಧ್ರುವತಾರೆ, ಯೋಗ ಸಿಂಧೂರಿ, ಮಂಡ್ಯ ಯೋಗ ಕುಮಾರಿ, ಹರಿಹರ ಯೋಗರತ್ನ, ಯೋಗ ಮಯೂರಿ, ಯೋಗರತ್ನ, ಹವ್ಯಕ ಪಲ್ಲವ ಎನ್ನುವ ಬಿರುದುಗಳಿಗೂ ಭಾಜನರಾಗಿದ್ದಾರೆ.
ಇದನ್ನೂ ಓದಿ:ನಾಚಿಕೆ-ಅವಮಾನ ಸಹಿಸಿಕೊಂಡು ಬಯಲಲ್ಲೇ ದೇಹದ ಒತ್ತಡ ನಿವಾರಿಸಿಕೊಂಡೆ: ಟಾಯ್ಲೆಟ್ ಇರದೆ ಪಟ್ಟ ಕಷ್ಟದ ಬಗ್ಗೆ ರಾಷ್ಟ್ರಪತಿಗೇ ಪತ್ರ ಬರೆದ ಮಹಿಳೆ
ಎನ್​ವೈಎಸ್​ಎಫ್​ (ನ್ಯಾಷನಲ್ ಯೋಗಾಸನ ಸ್ಪೋರ್ಟ್ಸ್ ಫೆಡರೇಷನ್) ನಡೆಸಿದ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ಕಳೆದ ವರ್ಷ ಗುಜರಾತಿನ ಅಹಮದಾಬಾದ್​​ನಲ್ಲಿ ನಡೆದ 36ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೊಟ್ಟ ಮೊದಲ ಬಾರಿಗೆ ಯೋಗವನ್ನು ಕೂಟದ ಭಾಗವಾಗಿ ನಡೆಸಿದ್ದು ಇದರಲ್ಲಿ 3 ವಿಭಾಗದಲ್ಲಿ ಭಾಗವಹಿಸಿ ದೇಶದ ಅತ್ಯುನ್ನತ 10 ಯೋಗಪಟುಗಳ ಪೈಕಿ ಇವರೂ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
ಎಸ್​ಜಿಎಫ್ಐ ಸಂಸ್ಥೆ ನಡೆಸುವ ಯೋಗ ಸ್ಪರ್ಧೆಯಲ್ಲಿ ಸಂಧ್ಯಾ ಈವರೆಗೆ 17 ಬಾರಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ. 2018ರಲ್ಲಿ ಛತ್ತೀಸ್​ಗಢದಲ್ಲಿ ನಡೆದ ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಕರ್ನಾಟಕಕ್ಕೆ ಏಕೈಕ ಬಂಗಾರದ ಪದಕ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ.

ಮೈಸೂರಿನ ಯೋಗ ವೈದ್ಯಕೀಯ ಮಹಾವಿದ್ಯಾಲಯದ ಅಂತಾರಾಷ್ಟ್ರೀಯ ಯೋಗ ದಿನದ ಸ್ಪರ್ಧೆಯಲ್ಲಿ ಪ್ರಥಮ, ನೆಲಮಂಗಲದಲ್ಲಿ ಜ್ಞಾನಗಂಗಾ, ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್, ಮಲ್ಲೇಶ್ವರದಲ್ಲಿ ಅಂತಾರಾಷ್ಟ್ರೀಯ ಕೃಷಿ ಯೋಗ ಸಂಸ್ಥೆ ಏರ್ಪಡಿಸಿದ್ದ ಆಲ್ ಇಂಡಿಯಾ ಚಾಂಪಿಯನ್​ಶಿಪ್​ನಲ್ಲಿ ಪ್ರಥಮ, 4 ಚಿನ್ನ, 1 ಬೆಳ್ಳಿ ಪದಕ, ಆಲ್ ಇಂಡಿಯಾ ಮುಕ್ತ ಯೋಗ ಚಾಂಪಿಯನ್ ಸ್ಪರ್ಧೆಯಲ್ಲಿ 5 ಚಿನ್ನದ ಪದಕ, ನಂತರ ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದಲ್ಲಿ ಕೂಡ ಪದಕ ಗೆದ್ದಿದ್ದಾರೆ.
ಈಕೆ ಕೇವಲ ತನ್ನ ವಯಸ್ಸಿನ ಯೋಗಪಟುಗಳೊಂದಿಗಲ್ಲದೆ ತನಗಿಂತ ಹಿರಿಯ ಪಟುಗಳೊಂದಿಗೂ ಪ್ರದರ್ಶನದಲ್ಲಿ ಗೆಲುವು ಸಾಧಿಸಿ ಬೆರಗುಗೊಳಿಸಿದ್ದಲ್ಲದೆ ಮೈಯಲ್ಲಿ ಎಲುಬುಗಳು ಇಲ್ಲವೇನೋ ಎಂಬಂತೆ ಯೋಗ ಮಾಡುತ್ತಾರೆ.
ಮಗಳ ಸಾಧನೆಗಾಗಿ ಪಣತೊಟ್ಟಿರುವ ಪೋಷಕರು:ಮಗಳ ಆಸಕ್ತಿ ಗುರುತಿಸಿದ ಇವರ ತಂದೆ ತಮ್ಮ ಸ್ವಂತ ಖರ್ಚಿನಲ್ಲಿ ಎಲ್ಲಾ ಕಡೆ ಭಾಗವಹಿಸುವ ಮೂಲಕ ಮಗಳ ಸಾಧನೆಗೆ ಬೆನ್ನೆಲುಬಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಬರುವ ಯೋಗಾಸಕ್ತರು ಇವರ ಮನೆಯಲ್ಲೇ ಉಳಿದು ಈಕೆಯ ಬಳಿ ಯೋಗ ಕಲಿಯುತ್ತಾರೆ. ಈಕೆಯ ಬಳಿ ಕಲಿತ ಬೆಳಗಾವಿಯ 3 ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ಯೋಗಪಟುಗಳಾಗಿ ಗುರುತಿಸಿಕೊಂಡಿದ್ದಾರೆ.
30 ದಿನ ರಜೆ ಕೊಡಿ, ಇಲ್ಲಂದ್ರೆ ಒತ್ತಡದಲ್ಲಿ ಏನಾದ್ರೂ ಆದ್ರೆ ನೀವೇ ಜವಾಬ್ದಾರಿ: ಎಸ್​ಪಿಗೆ ಡಿವೈಎಸ್​ಪಿ ಪತ್ರ

ಆಸ್ಪತ್ರೆಯಲ್ಲಿದ್ದ ಸಂಬಂಧಿಯನ್ನು ನೋಡಲು ಬಂದವರೇ ಇನ್ನಿಲ್ಲ!; ತಾಯಿ ಸಾವು, ಮಗ-ಮೊಮ್ಮಗಳಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 4 =
Remember me
