ಧಾರವಾಡ:ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್​ ಗೌಡ ಕೊಲೆ ಪ್ರಕರಣ ಸಂಬಂಧ ಎರಡನೇ ದಿನವೂ ಸಿಬಿಐ ವಿಚಾರಣೆ ಮುಂದುವರಿದಿದ್ದು, ಪತ್ನಿ ಮಲ್ಲಮ್ಮ ಅವರನ್ನು ಮತ್ತೊಮ್ಮೆ ವಿಚಾರಣೆ ನಡೆಸಿ, ಆರೋಪಿಗಳ ಕುರಿತಂತೆ ಪೂರಕ ಮಾಹಿತಿ ಪಡೆಯಲಾಯಿತು.
ಧಾರಾವಾಡ ಉಪನಗರ ಠಾಣೆಗೆ ಮಧ್ಯಾಹ್ನ ಹಾಜರಾಗಿದ್ದ ಮಲ್ಲಮ್ಮ, ಸಿಬಿಐ ಅಧಿಕಾರಿಗಳಿಂದ ವಿಚಾರಣೆ ಎದುರಿಸಿದರು. ನಿನ್ನೆಯೂ ಇವರು ವಿಚಾರಣೆಯನ್ನು ಎದುರಿಸಿದ್ದು, ಇಂದು ವಿಚಾರಣೆ ಅಂತ್ಯಗೊಂಡಿದೆ ಎನ್ನಲಾಗಿದೆ.
ಈ ನಡುವೆ ನಿನ್ನೆಯಷ್ಟೇ ಬಂಧನಕ್ಕೆ ಒಳಗಾಗಿದ್ದ ಆರೋಪಿ, ಕೆಎಎಸ್​ ಅಧಿಕಾರಿ ಸೋಮು ನ್ಯಾಮಗೌಡ ಅವರನ್ನು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ನಂತರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಧಾರವಾಡ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದಿದ್ದಾರೆ. ಈ ಮಧ್ಯೆ ಸಂಬಂಧಿಕರು ಸೋಮು ಅವರನ್ನು ನೋಡಲು ಠಾಣೆ ಬಳಿ ಆಗಮಿಸಿದ್ದರು.
ಇದನ್ನೂ ಓದಿ:ಜಿಪಂ ಸದಸ್ಯ ಯೋಗೀಶ್‌ ಗೌಡರ ಬರ್ಬರ ಹತ್ಯೆ: ಸಿಬಿಐ ಬಲೆಗೆ ಕೆಎಎಸ್‌ ಅಧಿಕಾರಿ- ಬಂಧನದ ಹಿಂದಿದೆ ತಂತ್ರ!
ಹತ್ಯೆಯ ಪ್ರಮುಖ ಆರೋಪಿ ಬಸವರಾಜ ಮುತ್ತಗಿ ಅವರನ್ನು ಕೂಡ ಇಂದು ಸಿಬಿಐ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ವೇಳೆ ಸಾಕಷ್ಟು ವಿಚಾರಗಳನ್ನು ಹೇಳಿಕೊಂಡಿದ್ದೇನೆ. ತನಿಖೆ ಪ್ರಗತಿಯಲ್ಲಿ ಇರುವುದರಿಂದ ಬಹಿರಂಗವಾಗಿ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಅವರು ವಿಚಾರಣೆ ಬಳಿಕ ಪ್ರತಿಕ್ರಿಯಿಸಿದ್ದಾರೆ.
ಯೋಗೀಶ್​ ಗೌಡ ಕೊಲೆ ಪ್ರಕರಣ: ಪತ್ನಿಯ ಮುಖದಲ್ಲಿ ನಗು, ಅಳುತ್ತಿದ್ದ ಅಧಿಕಾರಿ..

ದೇಶದ ಒಟ್ಟು ಕೋವಿಡ್​ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚು ಇವೆರಡು ರಾಜ್ಯಗಳಲ್ಲೇ ಇವೆ!

ಪ್ರಾಣಿಗಳ ಥರ ಕಾಡಿದ್ರು, ಒಬ್ರೂ ನೆರವಿಗೆ ಬರಲಿಲ್ಲ; ಇದು ಕೋಟ್ಯಧಿಪತಿ ಉದ್ಯಮಿಯ ಸಂಕಟದ ಕಥೆ..

ಪ್ರವಾಸಿಗರೇ ಎಚ್ಚರ.. ಇಲ್ಲಿ ಮಾಸ್ಕ್​ ಧರಿಸದಿದ್ದರೆ 5 ಸಾವಿರ ರೂ. ದಂಡ ಇಲ್ಲವೇ 8 ದಿನ ಜೈಲುಶಿಕ್ಷೆ!

Sign in to your account
Please enter an answer in digits:twenty − 6 =
Remember me
