ಹುಬ್ಬಳ್ಳಿ:ಧಾರವಾಡ ಜಿಪಂ ಸದಸ್ಯ ಯೋಗೀಶ್​ಗೌಡರ ಕೊಲೆ ಕೇಸ್​ನಲ್ಲಿ ಸಿಬಿಐನಿಂದ ಬಂಧನಕ್ಕೊಳಪಟ್ಟಿರುವ ಆರೋಪಿಗಳು ವಿಚಾರಣೆ ವೇಳೆ ಮಹತ್ವದ ರಹಸ್ಯ ಬಾಯ್ಬಿಟ್ಟಿದ್ದು, ಈ ಮಾಹಿತಿಯೇ ಮಾಜಿ ಸಚಿವ ವಿನಯ್​ ಕುಲಕರ್ಣಿಗೆ ಕಂಟಕವಾಗಿ ಪರಿಣಮಿಸಿದೆ.
ಆರೋಪಿ ವಿನಯ್​ ಕುಲಕರ್ಣಿಯನ್ನು ನ.5ರಂದು ಬಂಧಿಸಿದ ಸಿಬಿಐ ಅಧಿಕಾರಿಗಳು, ಯೋಗೀಶ್​ಗೌಡರ ಹತ್ಯೆಯ ಸಂಚುಗಾರ ಮಾಜಿ ಸಚಿವ. ಇದನ್ನು ದೃಢಪಡಿಸುವ ಮಹತ್ವದ ಮಾಹಿತಿ ಸಿಕ್ಕಿದೆ ಎಂದು ಧಾರವಾಡದ ಪ್ರಧಾನ ಮುಖ್ಯ ನ್ಯಾಯಾಲಯ(ಕಿರಿಯ ವಿಭಾಗ)ಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ.
ಇತ್ತ ಕೊಲೆ, ಅತ್ತ ದಿಲ್ಲಿಗೆ:2016ರ ಜೂನ್​ 15ರಂದು ಬೆಳ್ಳಂಬೆಳಗ್ಗೆ ಧಾರವಾಡದಲ್ಲಿ ತನ್ನದೇ ಮಾಲೀಕತ್ವದ ಉದಯ ಜಿಮ್​ಗೆ ಎಂದಿನಂತೆ ಬಂದ ಯೋಗೀಶಗೌಡನನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಘಟನೆಗೆ ಮುನ್ನ ಮತ್ತು ಘಟನೆ ನಂತರ ವಿನಯ್​ ಕುಲಕರ್ಣಿ ದೆಹಲಿಗೆ ಪ್ರವಾಸ ಮಾಡಿದ್ದು, ಘಟನೆ ವೇಳೆ ತಾನು ಜಿಲ್ಲಾ ಕೇಂದ್ರದಲ್ಲಿ ಇರಲೇ ಇಲ್ಲ. ರಾಜಧಾನಿ ಮತ್ತು ದೆಹಲಿ ಮಧ್ಯೆ ಪ್ರವಾಸ ಮಾಡುತ್ತ ಏನೋ ಪ್ರಮುಖ ಕೆಲಸದಲ್ಲಿ ತೊಡಗಿಕೊಂಡಿದ್ದೆ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. 2016ರ ಜೂ. 12ರಂದು ದೆಹಲಿಗೆ ತೆರಳಿದ್ದ ಕುಲಕರ್ಣಿ 13ರಂದು ಬೆಂಗಳೂರಿಗೆ ವಾಪಸಾಗಿದ್ದರು. ಜೂ. 16ರಂದು ಪುನಃ ದೆಹಲಿಗೆ ತೆರಳಿ 18ರಂದು ರಾಜಧಾನಿಗೆ ವಾಪಸಾಗಿದ್ದರು. ಪ್ರಯಾಣದ ದಿನವೇ ವಿಮಾನ ಟಿಕೆಟ್​ ಪಡೆಯಲಾಗಿತ್ತು ಎಂಬುದನ್ನು ಸಿಬಿಐ ದಾಖಲೆ ಸಹಿತವಾಗಿ ಖಚಿತ ಪಡಿಸಿಕೊಂಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ.
ಬೆಂಗಳೂರಿನ ಮೌರ್ಯ ಹೋಟೆಲ್​ನ 555ನೇ ನಂಬರ್​ನ ಕೊಠಡಿಯನ್ನು ವಿನಯ್​ ಕುಲಕರ್ಣಿ 2016ರ ಜೂ. 8ರಿಂದ 20ರವರೆಗೆ ಕಾಯ್ದಿರಿಸಿಕೊಂಡಿದ್ದನ್ನು ಸಿಬಿಐ ಪತ್ತೆ ಹಚ್ಚಿದೆ. ಕೊಲೆ ಕೃತ್ಯವನ್ನು ವಹಿಸಿಕೊಂಡಿದ್ದ ತನ್ನ ಜತೆಗಾರರಿಗಾಗಿ ಈ ಕೊಠಡಿ ಕಾಯ್ದಿರಿಸಿದ್ದರು. ಅಲ್ಲಿ ಕೊಲೆಗಾರರೊಂದಿಗೆ ಭೇಟಿಯಾಗಿದ್ದರು ಎಂದು ಗೊತ್ತಾಗಿದೆ.
ನಿಜವಾದ ಹಂತಕರ ಬದಲಿಗೆ, ತಾವೇ ಹತ್ಯೆಯ ಆರೋಪಿಗಳು ಎಂದು ಬಸವರಾಜ ಮುತ್ತಗಿ, ವಿಕ್ರಂ ಬಳ್ಳಾರಿ, ಕೀತಿರ್ಕುಮಾರ ಕುರಹಟ್ಟಿ, ಸಂದೀಪ ಸವದತ್ತಿ, ವಿನಾಯಕ ಕಟಗಿ, ಮಹಾಬಳೇಶ್ವರ ಉರ್ಫ್​ ಮುದುಕಪ್ಪ ಹೊಂಗಲ್​ ಸ್ಥಳೀಯ ಪೊಲೀಸರ ಎದುರು ಹಾಜರಾಗಲು ವಿನಯ ಕುಲಕರ್ಣಿ ವ್ಯವಸ್ಥೆ ಮಾಡಿದ್ದರು. ಕುಲಕರ್ಣಿ ಮತ್ತು ಅವರ ಸಿಬ್ಬಂದಿ, ಜತೆಗಾರರ ಫೋನ್​ ಕರೆಯ ವಿವರಗಳು ಇದನ್ನು ಸ್ಪಷ್ಟವಾಗಿ ಖಚಿತಪಡಿಸುತ್ತವೆ ಎಂದು ಸಿಬಿಐ ಹೇಳಿದೆ. ಕೊಲೆ ಸಂಚನ್ನು ಕಾರ್ಯಗತಗೊಳಿಸಲೆಂದೇ ರಿಯಲ್​ ಎಸ್ಟೇಟ್​ ಒಪ್ಪಂದದ ಕಟ್ಟುಕತೆ ಸೃಷ್ಟಿಸಲಾಗಿತ್ತು ಎಂದು ಸಿಬಿಐ ಹೇಳಿದೆ.
ಆರ್​ ಆರ್​ ನಗರ- ಶಿರಾದಲ್ಲಿ ಗೆಲುವು ಯಾರಿಗೆ? ಹೊರಬಿತ್ತು ಮತದಾನೋತ್ತರ ಸಮೀಕ್ಷೆಯ ಫಲಿತಾಂಶ

ಗಂಡನ ಆಟೋದಲ್ಲಿ ಸುತ್ತುತ್ತಾಳೆ, ಕ್ಷಣಾರ್ಧದಲ್ಲಿ ಲಕ್ಷ-ಲಕ್ಷ ಹಣ ತರ್ತಾಳೆ! ಬೆಚ್ಚಿಬೀಳಿಸುತ್ತೆ ಈ ದಂಪತಿಯ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 13 =
Remember me
