ಬೆಳಗಾವಿ:ಇಂದು(ಶುಕ್ರವಾರ) ತಡರಾತ್ರಿ ತನ್ನ 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಮಾಜಿ ಸಚಿವ ವಿನಯ್​ ಕುಲಕರ್ಣಿ ಕಾರಾಗೃಹದಲ್ಲೇ ರಾತ್ರಿ ಕಳೆಯುವಂತಾಗಿದೆ.
ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ ಕೊಲೆ ಕೇಸ್​ನಲ್ಲಿ ಗುರುವಾರ ಸಿಬಿಐ ಪೊಲೀಸರಿಂದ ಬಂಧನಕ್ಕೊಳಪಟ್ಟಿದ್ದ ವಿನಯ್​ ಕುಲಕರ್ಣಿ, ಸದ್ಯ ಬೆಳಗಾವಿಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.
ಹೆಚ್ಚಿನ ತನಿಖೆಗಾಗಿ ತನ್ನ ಕಸ್ಟಡಿಗೆ ಆರೋಪಿ ವಿನಯ್​ ಕುಲಕರ್ಣಿಯನ್ನು ನೀಡುವಂತೆ ಸಿಬಿಐ ಅಧಿಕಾರಿಗಳು ಶುಕ್ರವಾರ ಕೋರ್ಟ್​ಗೆ ಮನವಿ ಮಾಡಿದ್ದರು. ಸಿಬಿಐ ಅರ್ಜಿಗೆ ವಿನಯ್​ ಪರ ವಕೀಲರು ತಕರಾರು ಅರ್ಜಿ ಸಲ್ಲಿಸಿದ್ದರು. ಶುಕ್ರವಾರ ಬೆಳಗ್ಗೆ ವಾದ-ವಿವಾದ ಆಲಿಸಿದ್ದ ನ್ಯಾಯಾಲಯ, ತೀರ್ಪು ಕಾಯ್ದಿರಿಸಿತ್ತು. ಸಂಜೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು, ವಿನಯ್​ ಕುಲಕರ್ಣಿಯನ್ನು ಮೂರು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಪಡೆಯುವಂತೆ ಸೂಚಿಸಿದ್ದರು.
ಆದರೆ, ಕೇಂದ್ರ ಕಾರಾಗೃಹದ ನಿಯಮದ ಪ್ರಕಾರ ಸಂಜೆ 6.15ಕ್ಕೆ ಹಿಂಡಲಗಾ ಜೈಲಿನ ನಂತರ ಯಾರನ್ನೂ ವಿಚಾರಣೆ ಇಲ್ಲವೇ ಇನ್ನಾವುದೇ ಕಾರಣಕ್ಕೂ ಹೊರಬಿಡುವಂತಿಲ್ಲ. ಹೀಗಾಗಿ ಹಸ್ತಾಂತರಿಸುವ ಅವಕಾಶವಿಲ್ಲ. ಸಿಬಿಐ ಅಧಿಕಾರಿಗಳಿಗೆ ತನಿಖೆಯ ದೃಷ್ಟಿಯಿಂದ ಅನಿವಾರ್ಯ ಎಂದಾದರೆ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಅವರ ಆದೇಶದಂತೆ ಕ್ರಮ ಜರುಗಿಸಲಾಗುವುದು ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ರಾತ್ರಿ ವೇಳೆ ಕೈದಿಗಳನ್ನು ಹಸ್ತಾಂತರಿಸದಂತಿರುವ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿನ ನಿಯಮಾವಳಿಯಿಂದಾಗಿ ಸಿಬಿಐ ಅಧಿಕಾರಿಗಳು ಶನಿವಾರ ಬೆಳಗ್ಗೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಶುಕ್ರವಾರ ತಡರಾತ್ರಿ ತಮ್ಮ 55ನೇ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ ಸಚಿವರು ಕಾರಾಗೃಹದಲ್ಲಿಯೇ ರಾತ್ರಿ ಕಳೆಯುವಂತಾಗಿದೆ.
ಭಿಕ್ಷುಕನಾಗಿ ಚಿಂದಿ ಆಯುತ್ತಿದ್ದ ನಿವೃತ್ತ ಪೊಲೀಸಪ್ಪನಿಗೆ ಹೊಸ ಜೀವನ!

ವಾಟ್ಸ್​ಆ್ಯಪ್​ ವಿಡಿಯೋ ಕರೆ ಮಾಡಿದ್ದ ಯುವತಿ ಬೆತ್ತಲಾಗಿ ನಿಂತಿದ್ದಳು! ಮುಂದೆ ಆಗಿದ್ದೆಲ್ಲವೂ ಅವಾಂತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seventeen =
Remember me
