ಮಂಡ್ಯ:ಕಳೆದ ವಿಧಾನಸಭೆ ಚುನಾವಣೆಯಲ್ಲಿ ಡಿಕೆಶಿ ಮತ್ತು ಎಚ್​ಡಿಕೆ ಒಟ್ಟಾಗಿ ನನ್ನನ್ನು ಸೋಲಿಸಿಬಿಟ್ಟರು. ಜನರಿಗೆ ಮುಖ ತೋರಿಸೋಕೆ ಆಗ್ದೆ ಬೆಂಗಳೂರು ಸೇರಿಕೊಂಡಿದ್ದ ನಾನು ಅಲ್ಲಿಂದಲೇ ಸ್ಕೆಚ್​ ಹಾಕಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್​ ಮತ್ತು ಜೆಡಿಎಸ್​ ಸಮ್ಮಿಶ್ರ ಸರ್ಕಾರವನ್ನು ಕೆಡವಿಬಿಟ್ಟೆ. ಆ ಮೂಲಕ ನನ್ನ ಸೋಲಿನ ಪ್ರತೀಕಾರ ತೀರಿಸಿಕೊಂಡೆ ಎಂದು ಬೀಗುತ್ತಿದ್ದ ಸಿ.ಪಿ.ಯೋಗೇಶ್ವರ್​, ಇದೀಗ ಎಚ್​ಡಿಕೆ ಮತ್ತು ನಾನು ಸ್ನೇಹಿತರು ಎಂದಿದ್ದಾರೆ!
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಸೋಮವಾರ ಚನ್ನಪಟ್ಟಣಕ್ಕೆ ಭೇಟಿ ನೀಡುತ್ತಿರುವ ಸಿಪಿವೈ, ಸ್ವಕ್ಷೇತ್ರಕ್ಕೆ ಭೇಟಿಗೂ ಮುನ್ನ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಕ್ಷೇತ್ರಕ್ಕೆ ಹೋಗಿ ಕಾಲಭೈರವೇಶ್ವರನಿಗೆ ಪೂಜೆ ಸಲ್ಲಿಸಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.ಇದನ್ನೂ ಓದಿರಿಸೆಕ್ಸ್​ಗಾಗಿ ಮಾರಾಮಾರಿ! ಮಚ್ಚುಬೀಸಿದ ಪರಸ್ತ್ರೀ, ಆತನ ಕುಟುಂಬಸ್ಥರು ಆಕೆಯ ಕಾಲನ್ನೆ ಕತ್ತರಿಸಿದರು…
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಪಿವೈ, ನನಗೆ ಸಚಿವ ಸ್ಥಾನ ನೀಡಿರುವುದಕ್ಕೆ ಯಾರ ಆಕ್ಷೇಪವೂ ಇಲ್ಲ. ಅಭಿಪ್ರಾಯಗಳಲ್ಲಿ ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿವೆ. ಪಕ್ಷದ ಹಿರಿಯರು ಅದನ್ನು ಸರಿ ಮಾಡುತ್ತಾರೆ. ನಾನು ಯಾವುದೇ ಖಾತೆಗೂ ಆಕಾಂಕ್ಷಿಯಲ್ಲ. ಸಿಎಂ ಯಾವುದೇ ಖಾತೆ ನೀಡಿದರೂ ನಿಭಾಯಿಸುವೆ ಎಂದರು.
ಕುಮಾರಸ್ವಾಮಿಯ ಆರೋಪ ಮತ್ತು ಟೀಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಯೋಗೇಶ್ವರ್​, ಕುಮಾರಸ್ವಾಮಿ ಬಗ್ಗೆ ಏನೂ ಹೇಳಲ್ಲ. ಅವರು ನಮ್ಮ ಸ್ನೇಹಿತರು ಎಂದರು. ಸಚಿವರಾಗುವ ಮುನ್ನ ಸದಾ ಒಂದಿಲ್ಲೊಂದು ಕಾರಣಕ್ಕೆ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಯೋಗೇಶ್ವರ್​, ಇದೀಗ ಅವರನ್ನು ನಮ್ಮ ಸ್ನೇಹಿತರು ಎಂದಿರುವುದು ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸ್ಕೆಚ್​ ಹಾಕಿ ಕುಮಾರಸ್ವಾಮಿ ಸರ್ಕಾರವನ್ನ ಕೆಡವಿದ್ದು ನಾನೇ… ಎಂದ ಯೋಗೇಶ್ವರ್​ ಆಡಿಯೋ ವೈರಲ್​

ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ವಿಜಯವಾಣಿ ವಿಶ್ಲೇಷಣೆ| ಒಡಕು ದನಿ ಅಡಗಿಸಿದ ಷಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 14 =
Remember me
