ಬೆಂಗಳೂರು:2020ರ ಮಾ. 5ರಂದು ಮಂಡನೆಯಾಗುವ ರಾಜ್ಯ ಬಜೆಟ್​ಗೆ ಪೂರಕವಾಗಿ ಯೋಜನಾ ಆಯೋಗವೂ ಸರ್ಕಾರಕ್ಕೆ ಭರಪೂರ ಶಿಫಾರಸುಗಳನ್ನು ಮಾಡಿದೆ. ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ 14 ಇಲಾಖೆಗಳೊಂದಿಗೆ ಸಭೆ ನಡೆಸಿ ಸರ್ಕಾರಕ್ಕೆ ಮಾಡಿದ ಶಿಫಾರಸಿನ ಕುರಿತು ಬುಧವಾರ ಸುದ್ದಿಗಾರರಿಗೆ ವಿವರಣೆ ನೀಡಿದರು.
ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಸಂಬಂಧಿಸಿದಂತೆ ಇಲಾಖೆಗಳ ಕಾರ್ಯಕ್ಷಮತೆ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದು, ಮುಂದೆ ಮಾಡಬೇಕಾದ ಕಾರ್ಯಗಳ ಬಗ್ಗೆ ಶಿಫಾರಸು ಮಾಡಿದ್ದೇವೆ ಎಂದು ತಿಳಿಸಿದರು. ಬೆಂಗಳೂರು ವಿಮಾನ ನಿಲ್ದಾಣದ ನಂತರ 10 ವರ್ಷಗಳಲ್ಲಿ ಯಾವುದೇ ವಿಮಾನ ನಿಲ್ದಾಣ ನಿರ್ವಿುಸಿಲ್ಲ. ಮುಂದಿನ ಮೂರು ವರ್ಷಗಳಲ್ಲಿ ಮೂರು ಜಿಲ್ಲೆಗಳಿಗೆ ಒಂದರಂತೆ 10 ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಯೋಜನೆಯನ್ನು ತಡಮಾಡದೆ ಅನುಷ್ಠಾನಗೊಳಿಸುವಂತೆ ಆಯೋಗ ಸಲಹೆ ಮಾಡಿದೆ ಎಂದು ಹೇಳಿದರು.
ಬೆೆಂಗಳೂರಿನಲ್ಲಿ 2ನೇ ನಿಲ್ದಾಣ ಮಾಡಲು ಸ್ಥಳ ಹುಡುಕಾಟ ನಡೆದಿದೆ. ಕೋಲಾರವು ಗಡಿಭಾಗವಾಗಿರುವುದರಿಂದ, ಸ್ಮಾರ್ಟ್ ಸಿಟಿಯಾದ ತುಮಕೂರಲ್ಲಿ ನಿಲ್ದಾಣ ನಿರ್ವಿುಸಿದರೆ ಚೆನ್ನೈ- ಬೆಂಗಳೂರು- ಮುಂಬೈ ಕಾರಿಡಾರ್ ಯೋಜನೆಗೆ ಅನುಕೂಲ. ಕಲಬುರಗಿ ವಿಮಾನ ನಿಲ್ದಾಣದ ರೀತಿ ಬೀದರ್ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ವಿುಸಲು ಯೋಜನಾ ಇಲಾಖೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಇನ್ನೊಂದು ತಿಂಗಳಲ್ಲಿ 20 ಕೋಟಿ ರೂ. ಅನುದಾನ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
ಹೊಸ ವಿಮಾನ ನಿಲ್ದಾಣ ಬರುವ ಕಡೆ ಇಂಡಸ್ಟ್ರಿಯಲ್ ಟೌನ್​ಶಿಪ್, ನಾಲೆಜ್ ಸಿಟಿ ಅಥವಾ ಇನ್ನೋವೇಶನ್ ಸಿಟಿಗಳನ್ನು ಪಿಪಿಪಿ ಮಾದರಿಯಲ್ಲಿ ನಿರ್ವಿುಸಿ ಅಭಿವೃದ್ಧಿ ಕೇಂದ್ರಗಳನ್ನಾಗಿ ಮಾಡಬಹುದಾಗಿದೆ ಎಂದು ಯೋಜನಾ ಆಯೋಗ ತಿಳಿಸಿದೆ.
ತದಡಿ ಅಭಿವೃದ್ಧಿ:ಗದಗ, ಕೊಪ್ಪಳ, ಕೊಡಗು, ಚಿಕ್ಕಮಗಳೂರಿ ನಲ್ಲೂ ವಿಮಾನ ನಿಲ್ದಾಣ ಸ್ಥಾಪನೆಯಾದರೆ, ಈ ಜಿಲ್ಲೆಗಳಲ್ಲೂ ವಿವಿಧ ಕೈಗಾರಿಕೆ ಹೂಡಿಕೆ ಹಾಗೂ ಪ್ರವಾಸೋದ್ಯಮಕ್ಕೆ ಆಕರ್ಷಿಸಬಹುದು. ಬೆಂಗಳೂರು- ಮೈಸೂರು ನಡುವೆ 1 ಗಂಟೆಯಲ್ಲಿ ತಲುಪಲು ಹಾಗೂ ಬೆಂಗಳೂರು- ಕಲಬುರಗಿ ಸಂಪರ್ಕವನ್ನು ಕಡಿಮೆ ಅವಧಿಯಲ್ಲಿ ತಲುಪಲು ಭೌತಿಕ ಮತ್ತು ಆರ್ಥಿಕ ವಿಷಯವನ್ನೊಳಗೊಂಡ ವಿವರವಾದ ಪ್ರಸ್ತಾವನೆ ಕಳಿಸಲು ತಿಳಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ತದಡಿಯಲ್ಲಿ ಯಾವುದೇ ಪರಿಸರ ಸಂಬಂಧ ಸಮಸ್ಯೆ ಇಲ್ಲದಿರುವುದರಿಂದ ಬಂದರು, ವಿಮಾನ ನಿಲ್ದಾಣ, ರೈಲು ಸಂಪರ್ಕವನ್ನು ಪಿಪಿಪಿ ಮಾದರಿಯಲ್ಲಿ ಸೇರಿಸಿದರೆ ಆ ಭಾಗದ ಅಭಿವೃದ್ಧಿಗೆ ಅನುಕೂಲವಾಗುತ್ತದೆ ಎಂದು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಲಾಗಿದೆ.
ಯೋಜನಾ ಮಂಡಳಿಗೆ ನೀತಿ ಆಯೋಗದ ಲೇಪನ?
ರಾಜ್ಯ ಯೋಜನಾ ಆಯೋಗ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಉದ್ದೇಶದಿಂದ, ಆಯೋಗದ ಸ್ವರೂಪ ಬದಲಿಸಲು ಪುಟ್ಟಸ್ವಾಮಿ ಚಿಂತನೆ ನಡೆಸಿದ್ದಾರೆ. ಕೇಂದ್ರದಲ್ಲಿರುವ ನೀತಿ ಆಯೋಗದಂತೆ ರೂಪಿಸುವ ಬಗ್ಗೆ ಚರ್ಚೆ ನಡೆಸಿರುವುದನ್ನು ಬಹಿರಂಗಪಡಿಸಿದ್ದಾರೆ. ಗುಜರಾತ್, ಕೇರಳ, ತಮಿಳುನಾಡು ಸೇರಿ ವಿವಿಧ ರಾಜ್ಯಗಳಲ್ಲಿ ಆಯೋಗದ ಕಾರ್ಯನಿರ್ವಹಣೆ ಅಧ್ಯಯನ ನಡೆಸಲು ಸಹ ಅವರು ಉದ್ದೇಶಿಸಿದ್ದಾರೆ.
ಪ್ರಮುಖ ಶಿಫಾರಸುಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + four =
Remember me
