ಬೆಂಗಳೂರು: ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಮತ್ತೊಮ್ಮೆ ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದಾರೆ. ತಿಂಗಳ ಹಿಂದಷ್ಟೇ ತಮ್ಮ ಅಸಹನೆ ಹೊರಹಾಕಿದ್ದ ಅವರು, ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿಯೇ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಮನಮುಟ್ಟುವಂತೆ ತಿಳಿಸಿದ್ದಾರೆ.ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಬೇಕು, ಇಲ್ಲವೆಂದರೆ ಮನೆಗೆ ಕಳಿಸುತ್ತಾರೆ ಎಂದು ಖಚಿತ ಶಬ್ದಗಳಲ್ಲಿ ತಮ್ಮದೇ ಪಕ್ಷದ ನಾಯಕರನ್ನು ಎಚ್ಚರಿಸಿದರು.
ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಅರಸು ಅವರು ಹಿಂದುಳಿದ ವರ್ಗದ ಎಲ್ಲಾ ಜನಾಂಗದ ಬಗ್ಗೆ ಕಾಳಜಿ ಹೊಂದಿದ್ದರು. ಮೈಕ್ರೋ ಕಮ್ಯುನಿಟಿಗಳನ್ನ ಗುರುತಿಸಿ ಅವಕಾಶ ಕೊಡುತ್ತಿದ್ದರು. 5 ಸಾವಿರ ಜನ ಸಂಖ್ಯೆ ಇರುವ ಸಮುದಾಯವನ್ನು ಗುರುತಿಸಿ ಬೋರ್ಡ್ ಮೆಂಬರ್ ಮಾಡುತಿದ್ದರು. ಹಿಂದುಳಿದ ವರ್ಗದಲ್ಲಿ ಕೇವಲ ಒಂದು ಪ್ರಬಲ ಜಾತಿಯವರನ್ನ ಗುರುತಿಸಿ ಅಧಿಕಾರ ಕೊಡುವುದಲ್ಲ, ಎಲ್ಲಾ ಸಣ್ಣಪುಟ್ಟ ಜಾತಿಗಳನ್ನು ಗುರುತಿಸಬೇಕು ಎಂದು ಪಕ್ಷದ ಇತ್ತೀಚಿನ ಬೆಳವಣಿಗೆಯನ್ನು ತಾಳೆ ಹಾಕಿದರು.
ದೇವರಾಜ್ ಅರಸು ಕಾಲದಲ್ಲಿ ನಾವು ವಿರೋಧಿ ಬಣದಲ್ಲಿದ್ದವರು, ಆದರೂ ಕರೆದು ಮಾತನಾಡಿಸುತ್ತಿದ್ದರು. ನೀವು ಕಪಿಗಳು, ಕಪಿಚೇಷ್ಠಿ ಮಾಡುತ್ತಿದ್ದೀರಿ. ಇದರಿಂದ ವಿಪಕ್ಷಗಳಿಗೆ ಅನುಕೂಲ ಆಗಲಿದೆ. ಆದರೂ ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ ಎಂದು ಹೇಳುತ್ತಿದ್ದರು. ಈಗ ಕರೆದು ಮಾತನಾಡುವುದು ಇರಲಿ ವಿರೋಧಿಸುವವರನ್ನು ವಿರೋಧಿಗಳ ತರ ಅಲ್ಲ, ಶತ್ರುಗಳಂತೆ ನೋಡುತ್ತಾರೆ ಎಂದು ಬೇಸರಿಸಿದರು.
ಅರಸು ಅವರು ಸಣ್ಣ ಸಮುದಾಯಗಳನ್ನು ಗುರುತಿಸುತ್ತಿದ್ದರು, ಹಿಂದುಳಿದ ವರ್ಗ ಅಂದರೆ ಒಂದು ಜಾತಿಯಲ್ಲ. ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗಬೇಕು ಇಲ್ಲ ಅಂದರೆ ಮನೆಗೆ ಕಳಿಸುತ್ತಾರೆ, ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮ್ಮದ್ ಇಲ್ಲೆ ಇದ್ದಾರೆ , ಅವರ ಗಮನಕ್ಕೆ, ಕಾರ್ಯಕರ್ತರ ರಕ್ಷಣೆ ಮಾಡಬೇಕು ಇಲ್ಲ ಅಂದರೆ ಪಕ್ಷಕ್ಕೆ ಸಂಕಷ್ಟ ಬರಲಿದೆ ಎಂದಿದ್ದಾರೆ ತಮ್ಮ ಉದ್ದೇಶವನ್ನೂ ಬಹಿರಂಗವಾಗಿಯೇ ಹೇಳಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × 4 =
Remember me
