ನವದೆಹಲಿ:ಬಿಜೆಪಿಯವರು ಮಣಿಪುರದಲ್ಲಿ ಭಾರತ ಮಾತೆಯನ್ನೂ ಹತ್ಯೆ ಮಾಡಿದ್ದರು. ಈಗ ಹರಿಯಾಣಕ್ಕೆ ಬೆಂಕಿ ಹಚ್ಚಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಣಿಪುರ-ಹರಿಯಾಣದಲ್ಲಿ ಸಂಭವಿಸಿದ ಘರ್ಷಣೆ ಕುರಿತು ಮಾತನಾಡಿದ ರಾಹುಲ್​ ಬಿಜೆಪಿಯವರು ಭಾರತ ಮಾತೆಯ ರಕ್ಷಕರಲ್ಲ, ಹಂತಕರು ಎಂದು ಕಿಡಿಕಾರಿದ್ದಾರೆ.
ಭಾರತ ಒಂದು ಧ್ವನಿ. ಮಣಿಪುರದಲ್ಲಿ ನೀವು ಈಗಾಗಲೇ ಭಾರತ ಮಾತೆಯ ಧ್ವನಿಯನ್ನೂ ಕೊಂದಿದ್ದೀರಿ. ನನ್ನ ತಾಯಿ ಇಲ್ಲಿ ಕುಳಿತಿದ್ದಾರೆ. ನೀವು ದೇಶದ್ರೋಹಿಗಳು ನನ್ನ ಇನ್ನೊಬ್ಬ ತಾಯಿ ಭಾರತ ಮಾತೆಯನ್ನು ಮಣಿಪುರದಲ್ಲಿ ಕೊಂದಿದ್ದೀರ. ಆದ್ದರಿಂದ ಪ್ರಧಾನಿ ಮೋದಿ ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
भाजपा ने आज पूरे देश पर केरोसिन फेंक दिया है।मणिपुर पर फेंका, वहां आग लगा दी,हरियाणा पर छिड़का, वो भी जल रहा है।पूरे देश को जलाने में लगे हैं!ये भारत मां के रखवाले नहीं, भारत मां के हत्यारे हैं!pic.twitter.com/zKNlEgMv3V
ಇದನ್ನೂ ಓದಿ:ಕೇರಳ ರಾಜ್ಯದ ಹೆಸರು ಮರುನಾಮಕರಣಕ್ಕೆ ಆಗ್ರಹಿಸಿ ನಿರ್ಣಯ ಮಂಡಿಸಿದ ಎಡರಂಗ ಪಕ್ಷಗಳು
ಗಲಭೆ ಪೀಡಿತ ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇದುವರೆಗೂ ಭೇಟಿ ನೀಡಿಲ್ಲ. ಏಕೆಂದರೆ ಅವರು ಅದನ್ನು ಭಾರತದ ಭಾಗವೆಂದು ಪರಿಗಣಿಸಿಲ್ಲ. ನೀವು(ಬಿಜೆಪಿ) ಮಣಿಪುರವನ್ನು ದೇಶದಿಂದ ವಿಭಜಿಸಿದ್ದೀರಾ. ನೀವು ಮಣಿಪುರಕ್ಕೆ ಸೇನೆಯನ್ನು ಕಳಿಸುವ ಮೂಲಕ ಗಲಭೆಯನ್ನು ಹತ್ತೋಟಿಗೆ ತರಬಹುದು. ಆದರೆ, ಇದುವರೆಗೂ ಆ ಕೆಲಸ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾವಣನನ್ನೂ ರಾಮ ಕೊಲ್ಲಲಿಲ್ಲ. ಆದರೆ, ರಾವಣ ಅವನ ದುರಹಂಕಾರದಿಂದ ಕೊಲಲ್ಪಟ್ಟನು. ನೀವು ಮಣಿಪುರದಲ್ಲಿ ಬೆಂಕಿ ಹಚ್ಚಿ, ಹರಿಯಾಣದಲ್ಲೂ ಸಹ ಅದೇ ಕೆಲಸವನ್ನೂ ಮಾಡಿದ್ದೀರಾ. ಇಡೀ ದೇಶವನ್ನು ಸುಡುವಲ್ಲಿ ಬಿಜೆಪಿಯವರು ನಿರತರಾಗಿದ್ದಾರೆ ಎಂದು ರಾಹುಲ್​ ಗಾಂಧಿ ಲೋಕಸಭೆಯಲ್ಲಿ ಮಾತನಾಡುವ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 11 =
Remember me
