| ಯಂಕಣ್ಣ ಸಾಗರ್ ಬೆಂಗಳೂರು
ಆನ್​ಲೈನ್ ಲಿಂಕ್, ಕ್ಯೂಆರ್ ಕೋಡ್ ಕಳುಹಿಸಿ ಒಟಿಪಿ ನಂಬರ್ ಪಡೆದು ಅಮಾಯಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಿದ್ದ ಸೈಬರ್ ಖದೀಮರೀಗ ಮತ್ತಷ್ಟು ಅಪ್ಡೇಟ್ ಆಗಿದ್ದಾರೆ! ಒಟಿಪಿ ವಂಚನೆ ವಿಚಾರದಲ್ಲಿ ಜನರು ಜಾಗೃತಗೊಂಡ ಬಳಿಕ ಹೊಸ ಹೊಸ ಆಪ್​ಗಳನ್ನು ಸೃಷ್ಟಿಸಿ ಹೊಸ ವರಸೆ ಆರಂಭಿಸಿದ್ದಾರೆ.
ಲಾಕ್​ಡೌನ್ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿ ಅಥವಾ ಸಿಬ್ಬಂದಿ ಸೋಗಿನಲ್ಲಿ ಕರೆಮಾಡುವ ಸೈಬರ್ ಕಳ್ಳರು, ‘ಕ್ವಿಕ್ ಸಪೋರ್ಟ್’, ‘ಎನಿ ಡೆಸ್ಕ್’ ಮತ್ತು ‘ಟೀಮ್​ ವೀವರ್’ ಮತ್ತಿತರ ಆಪ್​ಗಳನ್ನು ಅಳವಡಿಸಿಕೊಳ್ಳುವಂತೆ ಮನವೊಲಿಸುತ್ತಾರೆ. ಇವರ ಸಲಹೆಗೆ ಮರುಳಾಗುವವರು ಆಪ್ ಡೌನ್​ಲೋಡ್ ಮಾಡಿಕೊಂಡರೆ ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯ ಸಂಪೂರ್ಣ ಹಣ ಕಳ್ಳರ ಪಾಲಾಗುತ್ತದೆ.
ಹೇಗೆ ವಂಚಿಸ್ತಾರೆ?:ಜನರು ಸಾಮಾಜಿಕ ಜಾಲತಾಣ, ಆನ್​ಲೈನ್ ಮಾರ್ಕೆಟ್ ವ್ಯವಹಾರ, ಶಾಪಿಂಗ್ ಮಾಲ್ ಇನ್ನಿತರ ಕಡೆ ಹಂಚಿಕೊಳ್ಳುವ ಫೋನ್ ನಂಬರ್ ಮತ್ತು ಹೆಸರು ಸಮೇತ ಮಾಹಿತಿಗಳು ಸೈಬರ್ ಕಳ್ಳರ ಪಾಲಾಗುತ್ತಿವೆ. ಆ ಫೋನ್ ನಂಬರ್​ಗೆ ಸಂದೇಶ ಕಳುಹಿಸಿ ಆನ್​ಲೈನ್ ಬ್ಯಾಂಕಿಂಗ್​ಗೆ ಲಿಂಕ್ ಆಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.
ಬಳಿಕ ಬ್ಯಾಂಕ್ ಅಧಿಕಾರಿ ಅಥವಾ ವ್ಯಾಲೆಟ್ (ಪೆಟಿಎಂ, ಗೂಗಲ್ ಪೇ, ಫೋನ್ ಪೇ) ಕಂಪನಿಯ ಹೆಸರಿನಲ್ಲಿ ಕರೆ ಮಾಡಿ, ‘ವ್ಯಾಲೆಟ್ ಅವಧಿ ಮುಗಿಯುತ್ತಿದೆ. ಆಪ್ ಡೌನ್​ಲೋಡ್ ಮಾಡಿಕೊಳ್ಳಿ’ ಎಂದು ಸೂಚಿಸುತ್ತಾರೆ. ಅವರ ಮಾತನ್ನು ನಂಬಿ (ಕ್ವಿಕ್ ಸಪೋರ್ಟ್, ಎನಿ ಡೆಸ್ಕ್, ಟೀಮ್ೕವರ್) ಆಪ್ ಡೌನ್​ಲೋಡ್ ಮಾಡಿಕೊಂಡರೆ, ಫೋನ್ ನಂಬರ್​ಗೆ ಲಿಂಕ್ ಆಗಿರುವ ಎಲ್ಲ ಬ್ಯಾಂಕ್ ಖಾತೆಗಳಲ್ಲಿನ ಹಣ ಬೇರೊಂದು ಖಾತೆಗೆ ವರ್ಗಾವಣೆಯಾಗುತ್ತದೆ.
ದಿನಸಿ ಹೆಸರಲ್ಲಿ  57 ಸಾವಿರ ರೂ. ಧೋಖಾ:ಬೆಂಗಳೂರಿನ ಅನ್ನಪೂಣೇಶ್ವರಿನಗರದ ಉದ್ಯಮಿ ಜಗನ್ನಾಥ್ ಎಂಬು ವರಿಗೆ ಅನಾಮಿಕ ವ್ಯಕ್ತಿಯೊಬ್ಬ ಕರೆ ಮಾಡಿ ಕೊರಿಯರ್ ಸರ್ವೀಸ್ ಮೂಲಕ ದಿನಸಿ ಸಾಮಗ್ರಿ ಖರೀದಿಸಿದರೆ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂದು ನಂಬಿಸಿದ್ದಾನೆ. ಬಳಿಕ ‘ಎನಿ ಡೆಸ್ಕ್’ ಆಪ್ ಡೌನ್​ಲೋಡ್ ಮಾಡಿಕೊಳ್ಳುವಂತೆ ಹೇಳಿದ್ದ. ಆತನ ಮಾತು ನಂಬಿದ ಜಗನ್ನಾಥ್ ಆಪ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಬ್ಯಾಂಕ್ ಖಾತೆಯಿಂದ 57 ಸಾವಿರ ರೂ. ಕಡಿತವಾಗಿದೆ. ಕರೆ ಮಾಡಿದ್ದ ವ್ಯಕ್ತಿ ಸಂಪರ್ಕಕ್ಕೆ ಸಿಗದೇ ಇದ್ದಾಗ, ಸೈಬರ್ ವಂಚಕರ ಕೃತ್ಯ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ:ವಿಜಯಪುರ ಎಎಸ್‌ಪಿಗೆ ಗಂಭೀರ ಗಾಯ
ಜ್ಞಾನಭಾರತಿ ಲೇಔಟ್ ನಿವಾಸಿ ವಿವೇಕಾನಂದ ಎಂಬುವರಿಗೆ ‘ನಿಮ್ಮ ಪೆಟಿಎಂ ಕೆವೈಸಿ ಅವಧಿ ಮುಕ್ತಾಯ ವಾಗಿದೆ’ ಎಂಬ ಸಂದೇಶ ಬಂದಿತ್ತು. ಇದಾದ ಕೆಲ ನಿಮಿಷಗಳ ಬಳಿಕ ಶಿವಕುಮಾರ್ ಎಂಬ ಹೆಸರಿನಲ್ಲಿ ಕರೆ ಮಾಡಿದ್ದ ವ್ಯಕ್ತಿ ತನ್ನನ್ನು ಪೆಟಿಎಂ ಕಸ್ಟಮರ್ ಕೇರ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡಿದ್ದ. ಪೆಟಿಎಂ ಕೆವೈಸಿ ಅವಧಿ ಮುಕ್ತಾಯವಾಗುತ್ತಿದೆ. ‘ಕ್ವಿಕ್ ಸಪೋರ್ಟ್’ ಆಪ್ ಡೌನ್​ಲೋಡ್ ಮಾಡಿಕೊಳ್ಳುವಂತೆ ಸೂಚಿಸಿದ್ದರಿಂದ ಆಪ್ ಡೌನ್​ಲೋಡ್ ಮಾಡಿಕೊಂಡಿದ್ದಾರೆ. ತದನಂತರ ಕೆನರಾ ಬ್ಯಾಂಕ್ ಖಾತೆಯಿಂದ 75 ಸಾವಿರ ರೂ. ಹಾಗೂ ಎಸ್​ಬಿಐ ಖಾತೆಯಿಂದ 1 ಲಕ್ಷ ರೂ. ವರ್ಗಾವಣೆಯಾಗಿದೆ.
ಸೈಬರ್ ಕಳ್ಳರು ಸೂಚಿಸುವ ಆಪ್​ಗಳನ್ನು ಡೌನ್​ಲೋಡ್ ಮಾಡಿಕೊಂಡಾಗ ಬ್ಯಾಂಕ್ ವಿವರ, ಆಧಾರ್ ಕಾರ್ಡ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ನಂಬರ್, ಸಿವಿವಿ ನಂಬರ್ ಹಾಗೂ ಕಾರ್ಡ್ ಅವಧಿ ಮುಕ್ತಾಯಗೊಳ್ಳುವ ಇಸ್ವಿ ಮತ್ತು ತಿಂಗಳ ವಿವರ ನಮೂದಿಸಲು ಸೂಚಿಸುತ್ತದೆ. ಈ ಎಲ್ಲ ಮಾಹಿತಿಯನ್ನು ಆಪ್​ನಲ್ಲಿ ನಮೂದಿಸಿದರೆ, ಗ್ರಾಹಕರ ಆನ್​ಲೈನ್ ಬ್ಯಾಂಕಿಂಗ್ ಸೈಬರ್ ಕಳ್ಳರ ನಿಯಂತ್ರಣಕ್ಕೆ ಹೋಗುತ್ತದೆ. ಹೀಗೆ, ಗ್ರಾಹಕರಿಂದ ಒಟಿಪಿ ನಂಬರ್ ಪಡೆಯದೆಯೇ ಹಣ ಎಗರಿಸುವ ಆಪ್​ಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಈ ರೀತಿ ರಾಜಧಾನಿಯಲ್ಲಿ ನಾಲ್ವರು ವಂಚನೆಗೆ ಒಳಗಾಗಿದ್ದಾರೆ. ಪಶ್ಚಿಮ ವಿಭಾಗದ ಸೈಬರ್ ಕ್ರೖೆಂ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ:ಜಗತ್ತು ಕರೊನಾ ವಿರುದ್ಧ ಹೋರಾಡ್ತಿದ್ರೆ ‘ಕೆಲವರು’ ಭಯೋತ್ಪಾದನೆ ಹರಡುತ್ತಿದ್ದಾರೆ: ಪಾಕ್‌ಗೆ ಮೋದಿ ಚಾಟಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + one =
Remember me
