ತುಮಕೂರು:ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಸಿಕ್ಕಿಬಿದ್ದರೆ ದಂಡವೂ ಬೀಳುತ್ತದೆ. ಇಷ್ಟೆಲ್ಲಾ ಗೊತ್ತಿದ್ದರೂ ಈ ಕಿರಾತಕ, ಚಲಿಸುತ್ತಿರುವ ರೈಲಿನಲ್ಲಿ ಸಿಗರೇಟ್​ ಸೇದಿ ಪುಂಡಾಟ ಮೆರೆದಿದ್ದಾನೆ. ಈ ವಿಷಯ ಇತರ ಪ್ರಯಾಣಿಕರ ಗಮನಕ್ಕೆ ಬರುತ್ತಿದ್ದಂತೆಯೇ ಅವರು ತಕರಾರು ಎತ್ತಿದ್ದಾರೆ.
ಅವನ ಬಳಿಗೆ ತೆರಳಿ, ಇದು ಸಾರ್ವಜನಿಕ ಸ್ಥಳ. ಇಲ್ಲಿ ಸಿಗರೇಟ್​ ಸೇದಬಾರದು ಎಂದು ತಿಳಿ ಹೇಳಿದ್ದಾರೆ. ಆದರೆ ಈ ಯುವಕ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಅನ್ನದೇ ಸಾರ್ವಜನಿಕರ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ಸಂದರ್ಭ ಯುವಕ ಆವಾಜ್​​ ಹಾಕಿದ್ದು ಅಲ್ಲಿದ್ದ ಪ್ರಯಾಣಿಕರಿಗೆ ಬೆದರಿಸಿದ್ದಾನೆ.
ಬೆಂಗಳೂರಿನಿಂದ ಬೆಳಗಾವಿ ಕಡೆಗೆ ತೆರಳುತ್ತಿದ್ದ ರೈಲಿನಲ್ಲಿ ಘಟನೆ ನಡೆದಿದ್ದು ಯುವಕನ ಪುಂಡಾಟದ ವಿಡಿಯೋ ಪ್ರಯಾಣಿಕರ ಮೊಬೈಲ್​​ನಲ್ಲಿ ಸೆರೆಯಾಗಿದೆ. ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಈ ಘಟನೆ ನಡೆದಿದ್ದು ಯುವಕರ ಪುಡಾಂಟಕ್ಕೆ ಅನಾಹುತಗಳು ಆದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Sign in to your account
Please enter an answer in digits:1 × two =
Remember me
