ಬೆಂಗಳೂರು:ರಾತ್ರಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ ಮಾರನೇ ದಿನವೇ ಯುವತಿಯ ಮೃತದೇಹ ಮನೆಯ ಮುಂದೆಯೇ ಪತ್ತೆಯಾಗಿರುವ ಘಟನೆ ಬೆಂಗಳೂರಿನ ಮಹದೇವಪುರದ ಲಕ್ಷ್ಮಿ ಸಾಗರ ಲೇಔಟ್​ನಲ್ಲಿ ನಡೆದಿದೆ.
ಶೆಲ್ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡ್ತಿದ್ದ ಮಹಾನಂದಾ (21) ಮೃತ ದುರ್ದೈವಿ. ಈಕೆ ಕಲಬುರಗಿ ಮೂಲದ ಯುವತಿ. ಬೆಳಗ್ಗಿನ ಜಾವ ನಾಲ್ಕು ಗಂಟೆಗೆ ಮನೆ ಮುಂದೆಯೇ ಶವವಾಗಿ ಪತ್ತೆಯಾಗಿದ್ದಾಳೆ.
ಮಹಾನಂದಾಳನ್ನು ದುಷ್ಕರ್ಮಿಗಳು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಅದಕ್ಕೆ ಪೂರಕವಾಗಿ ಕತ್ತಿನ ಭಾಗದಲ್ಲಿ ಗುರುತು ಪತ್ತೆಯಾಗಿದೆ. ನಿನ್ನೆ ಕೆಲಸಕ್ಕೆ ಹೋಗದೆ ಮಹಾನಂದಾ ಮನೆಯಲ್ಲೇ ಇದ್ದಳು. ಕಲಬುರಗಿ ಮೂಲದ ಅಕ್ಕ-ತಂಗಿ ಇಬ್ಬರು ಶೆಲ್ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡ್ತಿದ್ರು. ನಿನ್ನೆ ರಾತ್ರಿ ಅಡುಗೆ ಮಾಡೋದಕ್ಕೆ ಅಂತ ಮಹಾನಂದಾ ಸ್ಟೌ ಮೇಲೆ ಅಕ್ಕಿ ಇಟ್ಟಿದ್ದಳು. ಬಳಿಕ ಮನೆಯಿಂದ ಹೊರಹೋಗಿ ಕಾಣೆಯಾಗಿದ್ದಳು.
ಇದನ್ನೂ ಓದಿ:ಹರಿಶ್ಚಂದ್ರ ಘಾಟ್​​​​​ನಲ್ಲಿ ಹಾಲು, ತುಪ್ಪ ಬಿಟ್ಟ ವಿಜಯ್ ರಾಘವೇಂದ್ರ ಕುಟುಂಬ; ಇಂದು ಮಧ್ಯಾಹ್ನವೇ ಚಿತಾಭಸ್ಮ ವಿಸರ್ಜನೆ
ರಾತ್ರಿಯಾದರೂ ತಂಗಿ ಮನೆಗೆ ಬಾರದ ಹಿನ್ನೆಲೆ ಮಹಾನಂದಾಳ ಅಕ್ಕ ದೂರು ನೀಡಿದ್ದಳು. ಬೆಳಗ್ಗೆ 5 ಗಂಟೆಗೆ ಎದ್ದು ನೋಡಿದಾಗ ಮನೆಯ ಬಳಿ ಸಹೋದರಿಯ ಮೃತದೇಹವನ್ನು ಕಂಡು ಮಹಾನಂದಾಳ ಅಕ್ಕ ಆಘಾತಕ್ಕೆ ಒಳಗಾಗಿದ್ದಾರೆ. ಯಾರೋ ದುಷ್ಕರ್ಮಿಗಳು ಮೃತದೇಹ ಎಸೆದು ಹೋಗಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಮಹದೇವಪುರ ಪೊಲೀಸರು ಹಾಗೂ ಸೀನ್ ಆಫ್ ಕ್ರೈಮ್ ಅಫೀಸರ್ಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ಹೊರಗೆ ಬಂದ ಮಹಾಬಲಿ: ವರ್ಷಕ್ಕೆ ಒಮ್ಮೆ ಮಾತ್ರ ಆಚೆ ಬರುವ ಈ ಕಪ್ಪೆಯ ವಿಶೇಷತೆ ತಿಳಿದ್ರೆ ಹುಬ್ಬೇರಿಸ್ತೀರಾ!

ವಿಶ್ವದ ಅತ್ಯಂತ ಬೆಲೆ ಬಾಳುವ ಟೀಪಾಟ್ ಬೆಲೆ 24 ಕೋಟಿ ರೂ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 16 =
Remember me
