ಬೆಂಗಳೂರು:ಪ್ರೇಯಸಿಯ ಹುಟ್ಟುಹಬ್ಬ ಆಚರಣೆ ಮಾಡಿದ ಬಳಿಕ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಹಾಗೂ ಪ್ರಿಯಕರ ಪ್ರಶಾಂತ್​ ವಿಚಾರಣೆ ವೇಳೆ ಮತ್ತಷ್ಟು ಭಯಾನಕ ಸಂಗತಿ ಬೆಳಕಿಗೆ ಬಂದಿದೆ
ನವ್ಯ (24) ಕೊಲೆಯಾದ ಯುವತಿ. ಪ್ರಿಯಕರ ಪ್ರಶಾಂತ್​ನಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದಾಳೆ. ಅದ್ಧುರಿಯಾಗಿ ಹುಟ್ಟುಹಬ್ಬ ಆಚರಿಸಿದ ಬೆನ್ನಲ್ಲೇ ನವ್ಯಾಳ ಕೊಲೆಯಾಗಿದೆ.
ಇದನ್ನೂ ಓದಿ:ಇದು ಜಾಬ್​ ಟೆರರಿಸಂ! ಗ್ರಾಹಕರು ಸೇವಿಸುವ ಮದ್ಯದಲ್ಲಿ ತನ್ನದೇ ರಕ್ತ ಮಿಶ್ರಣ ಮಾಡಿದ ಪರಿಚಾರಿಕೆ

ಮೊದಲೇ ದೂರು ದಾಖಲಾಗಿತ್ತುಈ ಮೊದಲೇ ಇಬ್ಬರ ಪ್ರೇಮ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು ಎಂಬುದು ತಿಳಿದುಬಂದಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ನವ್ಯ ತಾಯಿ‌ಯಿಂದ ಎನ್​ಸಿಆರ್​ ದಾಖಲಾಗಿತ್ತು. ನವ್ಯಾಗೆ ಪ್ರಶಾಂತ್​ ತುಂಬಾ ಕಾಟ ಕೊಡುತ್ತಿದ್ದಾನೆ ಎಂದು ಆರೋಪಿಸಿ ಮೂರು ತಿಂಗಳ‌ ಹಿಂದೆಯೇ ತಾಯಿ ದೂರು ನೀಡಿದ್ದರು.
ಪ್ರೀತಿಯಲ್ಲಿ ಜಗಳ, ವಿರಹ ಮಾಮೂಲಿಇದಾದ ಬಳಿಕ ಪ್ರಶಾಂತ್​ನನ್ನು ಕರೆದು ಕೋರಮಂಗಲ ಪೊಲೀಸರು ಬುದ್ಧಿವಾದ ಹೇಳಿದ್ದರು. ಇನ್ನೆಂದು ನವ್ಯಾ ಸಹವಾಸಕ್ಕೆ ಹೋಗುವುದಿಲ್ಲ ಎಂದು ಪ್ರಶಾಂತ್ ಹೇಳಿದ್ದ. ಆದರೆ ಪ್ರೀತಿಯಲ್ಲಿ ಜಗಳ, ವಿರಹ ಎಲ್ಲ ಮಾಮೂಲಿ ಎಂಬುದು ಎಲ್ಲರಿಗು ತಿಳಿದಿರುವ ಸಾಮಾನ್ಯ ಸಂಗತಿ. ನವ್ಯಾ ಮತ್ತು ಪ್ರಶಾಂತ್​ ಮತ್ತೆ ಪರಸ್ಪರ ಸಂಪರ್ಕದಲ್ಲಿದ್ದರು.

ಫೋಟೋ ಹಚ್ಚೆ ಹಾಕಿಸಿಕೊಂಡಿದ್ದಹುಟ್ಟುಹಬ್ಬ ಆಚರಿಸಲು ತನ್ನ ರೂಮಿಗೆ ಕರೆದು ಆಕೆಯನ್ನು ಪ್ರಶಾಂತ್​ ಹತ್ಯೆ ಮಾಡಿದ್ದಾನೆ. ನವ್ಯಾ ಮೇಲೆ ತನ್ನ ಪ್ರಾಣವನ್ನೇ ಇಟ್ಟುಕೊಂಡಿದ್ದ ಪ್ರಶಾಂತ್, ಕೊನೆಗೆ ಆಕೆಯ ಪ್ರಾಣವನ್ನೇ ತೆಗೆದುಬಿಟ್ಟಿದ್ದಾನೆ. ತನ್ನ ಮೈಮೇಲೆ ನವ್ಯಾಳ ಫೋಟೋವನ್ನು ಹಚ್ಚೆ ಹಾಕಿಸಿಕೊಂಡಿದ್ದ. ಆಕೆಯ ಹೆಸರನ್ನು ದೇಹದ ತುಂಬೆಲ್ಲ ಬರೆಸಿಕೊಂಡಿದ್ದ.
ಇದನ್ನೂ ಓದಿ:ಬಾವಲಿ.. ಹಾವಳಿಯಷ್ಟೇ ಅಲ್ಲ..: ಶಕ್ತಿಶಾಲಿ ಸಸ್ತನಿಗಳ ಕೌತುಕಮಯ ಜೀವನದತ್ತ ಒಂದು ಇಣುಕು ನೋಟ
ಕೊಲೆ‌ ಬಳಿಕ ಪ್ರಶಾಂತ್ ತಲೆಗೆ ಹೊಳೆದಿದ್ದೇನು?ನವ್ಯಾಳನ್ನು ಕೊಂದ ಬಳಿಕ ಐದು ಗಂಟೆಗಳ ಕಾಲ ಪ್ರಶಾಂತ್​ ಮೃತದೇಹದ ಜೊತೆಗಿದ್ದ. ಈ ವೇಳೆ ನವ್ಯಾಳ ಮೃತದೇಹವನ್ನು ತುಂಡು ತುಂಡಾಗಿ ಮಾಡಿ ಎಸೆಯುವ ಪ್ಲಾನ್​ ಮಾಡಿಕೊಂಡಿದ್ದ. ಅಷ್ಟೇ ಅಲ್ಲ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಯೋಚಿಸಿದ್ದ. ಆದರೆ, ಅದ್ಯಾವುದನ್ನೂ ಮಾಡದೇ ಪೊಲೀಸರ ಮುಂದೆ ಶರಣಾದ.

ಅನುಮಾನನವ್ಯಾ ರೆಸ್ಟ್ ರೂಮ್​​ಗೆ ಹೋದಾಗಲೇ ಪ್ರಶಾಂತ್​ಗೆ ಅನುಮಾನ ಶುರುವಾಗಿತ್ತು. ಏಕೆಂದರೆ, ಮೊಬೈಲ್ ಅನ್ನು ತನ್ನ ಜತೆ ನವ್ಯಾ ತೆಗೆದುಕೊಂಡು ಹೋಗಿದ್ದಳು. ಹೊರ ಬಂದ ಬಳಿಕ ಮೊಬೈಲ್ ಕೊಡುವಂತೆ ಕೇಳಿದ್ದ. ಕೊಡದಿದ್ದಾಗ ತಾನೇ ಚಾಕುವಿನಿಂದ ಚುಚ್ಚಿಕೊಳ್ಳೋದಾಗಿ ಬೆದರಿಸಿದ್ದ. ಕೊನೆಗೆ ನವ್ಯಾಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ.
ಸದ್ಯ ಆರೋಪಿ ಪ್ರಶಾಂತ್​ನನ್ನು ರಾಜಗೋಪಾಲನಗರ ಠಾಣೆಯೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)

ನನಗೆ ಪೂರ್ಣಾ ಜೊತೆ ಲವ್ ಅಫೇರ್ ಇದೆ ಆದರೆ… ನಟ, ನಿರ್ದೇಶಕ ರವಿಬಾಬು ಶಾಕಿಂಗ್​ ಹೇಳಿಕೆ

ಮದುವೆಗೂ ಮುನ್ನ ನಟನೊಂದಿಗೆ ಸಂಬಂಧ: ಖುಷ್ಬೂ ಬಗ್ಗೆ ಶಾಕಿಂಗ್​ ಕಾಮೆಂಟ್​ ಮಾಡಿದ ತೆಲುಗು ನಟಿ

ಮಹಿಳೆಯರ ಖಾಸಗಿ ಅಂಗಗಳ ಬಗ್ಗೆ ಮಾತಾಡಿದ್ರೆ ಗುಂಡು ಹಾರಿಸುತ್ತೇನೆಂದ ನಟಿ ರಾಧಿಕಾ ಆಪ್ಟೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − seven =
Remember me
