ಬೆಂಗಳೂರು:ಕೆಲಸಕ್ಕೆ ಸೇರಿದ ಒಂದೇ ವಾರದಲ್ಲಿ ಜುವೆಲ್ಲರಿ ಮಳಿಗೆಯಲ್ಲಿ ನಕಲಿ ಆಭರಣಗಳನ್ನಿಟ್ಟು 58.60 ಲಕ್ಷ ಮೌಲ್ಯದ ವಜ್ರ, ಚಿನ್ನಾಭರಣಗಳನ್ನು ದೋಚಿದ್ದ ಮಹಿಳೆಯನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಬೀದರ್‌ನ ವಾಣಿ ವಾಡೇಕರ್ (22)ಬಂಧಿತ ಆರೋಪಿತೆ. ಈಕೆಯಿಂದ 58.60 ಲಕ್ಷ ರೂ.ಮೌಲ್ಯದ ಡೈಮಂಡ್ ಇರುವ 36.455 ಗ್ರಾಂ ಸರ, 54 ಗ್ರಾಂ ತೂಕದ ಚೈನ್, ಒಂದು ಜತೆ 8.817 ಗ್ರಾಂ ವಜ್ರದ ಇಯರಿಂಗ್‌ಗಳು, 21.34 ಗ್ರಾಂ ಚಿನ್ನದ ಸರ ವಶಪಡಿಸಿಕೊಳ್ಳಲಾಗಿದೆ. ಮಳಿಗೆಯ ಮ್ಯಾನೇಜರ್ ಮೊಹಮ್ಮದ್ ಅ್ಜಲ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತೆಯನ್ನು ಬಂಧಿಸಿದ್ದಾರೆ.
ಆರೋಪಿತೆಯು ಯಲಹಂಕದ ಆರ್.ಎಂ.ಜೆಡ್ ಗ್ಯಾಲೆರಿಯಾ ಮಾಲ್‌ನಲ್ಲಿರುವ ತನಿಷ್ಕ್ ಜುವೆಲ್ಲರಿಯಲ್ಲಿ ಸೇಲ್ಸ್ ಆಫೀಸರ್ ಆಗಿ ಡಿ.10 ರಂದು ಕೆಲಸಕ್ಕೆ ಸೇರಿಕೊಂಡಿದ್ದಳು. ಕೆಲಸಕ್ಕೆ ಸೇರಿದ ಒಂದೇ ವಾರದಲ್ಲಿ ಜುವೆಲ್ಲರಿ ಶಾಪ್‌ನಲ್ಲಿ ತನ್ನ ಕೈಚಳಕ ತೋರಿ ಚಿನ್ನ ತೋರಿಸುವ ಕೆಲಸ ಮಾಡುತ್ತಲೇ ಚಿನ್ನಾಭರಣವನ್ನು ಎಗರಿಸಿಕೊಂಡು ಹೋಗಿದ್ದಾಳೆ.
ಸ್ಟಾಕ್ ಚೆಕ್ ಮಾಡಿದಾಗ ಚಿನ್ನದ ಜಾಗದಲ್ಲಿ ನಕಲಿ ಚಿನ್ನ ಪತ್ತೆಯಾಗಿದ್ದು ಸಿಸಿ ಕ್ಯಾಮರಾ ಪರಿಶೀಲಿಸಿದ್ದಾಗ ಈಕೆಯ ಕೈಚಳಕ ಕಂಡುಬಂದಿದೆ. ಚಿನ್ನ ಮತ್ತು ವಜ್ರದ ಆಭರಣಗಳ ಜಾಗದಲ್ಲಿ ನಕಲಿ ಆಭರಣಗಳನ್ನಿಟ್ಟು ಯಾರಿಗೂ ಅನುಮಾನ ಬಾರದಂತೆ ಪಂಗನಾಮ ಹಾಕುತ್ತಿದ್ದಳು. ಆರೋಪಿತೆ ವಿರುದ್ಧ ಪ್ರಕರಣ ದಾಖಲಿಸಿರುವ ಯಲಹಂಕ ಪೊಲೀಸರು ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ಮಾಹಿತಿ ನೀಡಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × four =
Remember me
