ಬೆಂಗಳೂರು:ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳು ಪ್ರಿಯತಮನ ಮೇಲೆ ಬಿಸಿ ನೀರು ಎರಚಿರುವ ಘಟನೆ ನಗರದ ಚಾಮರಾಜಪೇಟೆಯಲ್ಲಿ ನಡೆದಿದೆ.
ಮೇ 25ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಲಬುರಗಿ ಮೂಲದ ಭೀಮಾಶಂಕರ ಆರ್ಯ ಎಂಬಾತನಿಗೆ ಗಾಯವವಾಗಿದೆ. ಕಲಬುರಗಿ ಜಿಲ್ಲೆ ಅಫಜಲಪುರ ಮೂಲದ ಯುವತಿಯಿಂದ ಈ ಕೃತ್ಯ ನಡೆದಿದೆ.
ಇದನ್ನು ಓದಿ:ನಟ ಬಾಲಯ್ಯ ವಿಡಿಯೋ ಮೂಲಕ ಪೊಲೀಸರಿಗೆ ತಿರುಗೇಟು ಕೊಟ್ಟ ನಟಿ ಡಿಂಪಲ್​ ಹಯಾತಿ!
ಗಾಯಾಳು ಭೀಮಾಶಂಕರ ಮತ್ತು ಯುವತಿ ನಡುವೆ ಪ್ರೀತಿ ಹುಟ್ಟಿತ್ತು. ಆದರೆ, ಆರೋಪಿ ಯುವತಿಗೆ ಈ ಮೊದಲೇ ಮದುವೆಯಾಗಿದೆ ಎಂಬ ವಿಚಾರ ಗೊತ್ತಾದ ಬಳಿಕ ಆಕೆಯಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ. ಈ ನಡುವೆ ಬೇರೆ ಯುವತಿಯೊಂದಿಗೆ ಭೀಮಾಶಂಕರನಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಯಾಗಿ ಮತ್ತೆ ಬೆಂಗಳೂರಿಗೆ ಬಂದಿದ್ದ.
ಮೇ 25 ರಂದು ಮಾತನಾಡಬೇಕು ಎಂದು ಭೀಮಾಶಂಕರನನ್ನ ಯುವತಿ ರೂಮಿಗೆ ಕರೆದಿದ್ದಳು. ಸಂಜೆ ಏಳು ಗಂಟೆ ಸುಮಾರಿಗೆ ರೂಮಿಗೆ ಬಂದಿದ್ದನು. ಈ ವೇಳೆ ಮದುವೆಯಾದ ವಿಚಾರ ಪ್ರಸ್ತಾಪಿಸಿದ್ದ. ಇದೇ ಸಂದರ್ಭದಲ್ಲಿ ಸೈಲೆಂಟಾಗಿ ಬಿಸಿ ನೀರು ಕಾಯಿಸಿ ತಂದು ಭೀಮಾಶಂಕರನ ಮುಖಕ್ಕೆ ಎರಚಿ, ಬಿಯರ್ ಬಾಟಲ್​ನಿಂದ ಮುಖಕ್ಕೆ ಹೊಡೆದು ಮನೆ ಲಾಕ್ ಮಾಡಿಕೊಂಡು ಪರಾರಿಯಾಗಿದ್ದಾಳೆ.
ಇದನ್ನೂ ಓದಿ:ಪರಿಷತ್​ಗೆ ಶುರುವಾಯ್ತು ಪೈಪೋಟಿ: ಏಳು ಸ್ಥಾನಕ್ಕೆ ಎರಡೂವರೆ ಡಜನ್ ಆಕಾಂಕ್ಷಿಗಳು
ತೀವ್ರ ಗಾಯಗೊಂಡ ಭೀಮಾಶಂಕರ್​ ಕಿರುಚಾಡ ತೊಡಗಿದ. ಈ ವೇಳೆ ಮನೆ ಮಾಲೀಕ ಸೈಯದ್ ಮನೆಗೆ ಆಗಮಿಸಿ ಗಾಯಾಳು ಭೀಮಾಶಂಕರ್​ನನ್ನು ವಿಕ್ಟೋರಿಯ ಅಸ್ಪತ್ರೆಗೆ ದಾಖಲಿಸಿದ. ಬಿಸಿ ನೀರು ಬಿದ್ದು ಶೇಕಡ 40 ರಿಂದ 50 ರಷ್ಟು ಗಾಯಗಳಾಗಿವೆ. ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಭೀಮಾಶಂಕರನಿಂದ ದೂರು ದಾಖಲಾಗಿದ್ದು, ಆರೋಪಿ ಮಹಿಳೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ದುಪ್ಪಟ್ಟ ಹಾಕದವರೇ ಟಾರ್ಗೆಟ್​: ಸಿಕ್ಕಿಬಿದ್ದ ಸೈಕೋ ಶರವಣನ್​, ನಿಟ್ಟುಸಿರು ಬಿಟ್ಟ ಮಹಿಳೆಯರು

2 ತಿಂಗಳಲ್ಲಿ ಮೂರು ಮರಿಗಳು ಸೇರಿ 6 ಚೀತಾ ಸಾವು: ಕೇಂದ್ರ ಸರ್ಕಾರ ಕೊಟ್ಟ ಉತ್ತರ ಹೀಗಿದೆ….

ಸೇತುವೆಯಿಂದ ಕಣಿವೆಗೆ ಬಿದ್ದ ಬಸ್​: 10 ಮಂದಿ ದುರಂತ ಸಾವು, 20ಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 14 =
Remember me
