ಬೆಂಗಳೂರು:ಹುಡುಗ-ಹುಡುಗಿ ಜೊತೆಯಲ್ಲಿ ಕುಳಿತುಕೊಂಡರು ಅಂತಾ ಪೊಲೀಸ್​ ಮಹಾಶಯನೊಬ್ಬ ಅವರಿಂದ 1000 ರೂ. ವಸೂಲಿ ಮಾಡಿರುವ ಘಟನೆ ನಗರದಲ್ಲಿ ನಡೆದಿದ್ದು, ಈ ರೀತಿಯ ದಾದಾಗಿರಿಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸಂತ್ರಸ್ತ ಹುಡುಗ ಮತ್ತು ಹುಡುಗಿ ವಾಯುವಿಹಾರಕ್ಕೆಂದು ಹೊರಟ್ಟಿದ್ದರು. ಈ ವೇಳೆ ದಿಢೀರ್​ ಎಂಟ್ರಿ ಕೊಟ್ಟ ಪೊಲೀಸಪ್ಪ ಬೆದರಿಕೆ ಹಾಕಿ ಆ ಜೋಡಿಯಿಂದ 1000 ರೂ. ವಸೂಲಿ ಮಾಡಿದ್ದಾರೆ. ನಗರದ ಕುಂದಲಹಳ್ಳಿ ಪಾರ್ಕ್​ ಬಳಿ ಈ ಘಟನೆ ನಡೆದಿದೆ.
ಈ ಘಟನೆಯಿಂದ ಮನನೊಂದ ಯುವತಿ ಟ್ವಿಟರ್​ ಮೂಲಕ ಬೆಂಗಳೂರು ನಗರದ ಪೊಲೀಸ್​ ಆಯುಕ್ತರಿಗೆ ದೂರು ಸಲ್ಲಿಸಿದ್ದಾಳೆ. ಹಣ ವಸೂಲಿ ಮಾಡಿದ ಪೊಲೀಸಪ್ಪನ ಬೈಕ್​ ಸಮೇತ ಯುವತಿ ದೂರು ನೀಡಿದ್ದಾಳೆ. ನಾವೇನು ತಪ್ಪು ಮಾಡದಿದ್ದರೂ ನಮ್ಮ ಮೇಲೆ ನೈತಿಕ ಪೊಲೀಸ್​ ಗಿರಿ ತೋರಲಾಗಿದೆ.
ಇದೀಗ ಪೊಲೀಸಪ್ಪ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಯಾವ ಕಾರಣಕ್ಕಾಗಿ ಅವರಿಂದ ಪೊಲೀಸ್​ ಸಿಬ್ಬಂದಿ ಹಣ ವಸೂಲಿ ಮಾಡಿದರು. ಅಲ್ಲಿ ಏನು ತಪ್ಪು ನಡೆದಿದೆ. ಇಂತಹದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಪೊಲೀಸ್​ ಆಯುಕ್ತರು ಆ ಪೊಲೀಸ್​ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸ್​ ಇಲಾಖೆ ಮತ್ತಷ್ಟು ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಯೂಟ್ಯೂಬ್​ ನೋಡಿ ಕಳ್ಳತನ ಕಲಿತು ಹೊಸ ವರ್ಷದಂದೇ 40 ಲಕ್ಷ ರೂ. ಎಗರಿಸಿದ್ದ ಖತರ್ನಾಕ್​ ಜೋಡಿ ಅಂದರ್!​

ದೇಶದಲ್ಲಿ ಸ್ಥಿರ, ನಿರ್ಭೀತ, ನಿರ್ಣಾಯಕ ಸರ್ಕಾರವಿದ್ದು, ದೊಡ್ಡ ಕನಸುಗಳನ್ನು ನನಸಾಗಿಸುವತ್ತ ಕೆಲ್ಸ ಮಾಡ್ತಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

159 ಅಲ್ಪ ಸಂಖ್ಯಾತ ಮಹಿಳೆಯರಿಗೆ ಕುಕ್ಕರ್ ವಿತರಿಸಿದ ಶಾಸಕ ಉದಯ್ ಗರುಡಾಚಾರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
