ಬೆಂಗಳೂರು:ಪಾರ್ಕಿನಲ್ಲಿ ಯುವಕ ಯುವತಿ ಬಳಿ ಸಾವಿರ ರೂಪಾಯಿ ವಸೂಲಿ ‌ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಬಂಧಿತ ಆರೋಪಿ. ಈತ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಬಿಬಿಎಂಪಿಯಿಂದ ಕುಂದಲಹಳ್ಳಿ ಕೆರೆ ಭದ್ರತೆಗೆ ನಿಯೋಜನೆ ಆಗಿದ್ದ. ಇಂದು ಬೆಳಗ್ಗೆ ಸಂತ್ರಸ್ತ ಹುಡುಗ ಮತ್ತು ಹುಡುಗಿ ವಾಯುವಿಹಾರಕ್ಕೆಂದು ಹೊರಟ್ಟಿದ್ದರು. ಈ ವೇಳೆ ದಿಢೀರ್​ ಎಂಟ್ರಿ ಕೊಟ್ಟ ಮುಂಜನಾಥ್​ ಬೆದರಿಕೆ ಹಾಕಿ ಆ ಜೋಡಿಯಿಂದ 1000 ರೂ. ವಸೂಲಿ ಮಾಡಿದ್ದರು.
ಈ ಘಟನೆಯಿಂದ ಮನನೊಂದ ಯುವತಿ ಟ್ವಿಟರ್​ ಮೂಲಕ ಬೆಂಗಳೂರು ನಗರದ ಪೊಲೀಸ್​ ಆಯುಕ್ತರಿಗೆ ದೂರು ಸಲ್ಲಿಸಿದ್ದಾಳು. ಹಣ ವಸೂಲಿ ಮಾಡಿದ ಸಿಬ್ಬಂದಿಯ ಬೈಕ್​ ಫೋಟೋ ಸಮೇತ ಯುವತಿ ದೂರು ನೀಡಿದ್ದಳು. ನಾವೇನು ತಪ್ಪು ಮಾಡದಿದ್ದರೂ ನಮ್ಮ ಮೇಲೆ ನೈತಿಕ ಪೊಲೀಸ್​ ಗಿರಿ ತೋರಲಾಗಿದೆ ಎಂದು ಆರೋಪ ಮಾಡಿದ್ದಳು.
ಸಿಬ್ಬಂದಿ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಯಾವ ಕಾರಣಕ್ಕಾಗಿ ಅವರಿಂದ ಪೊಲೀಸ್​ ಸಿಬ್ಬಂದಿ ಹಣ ವಸೂಲಿ ಮಾಡಿದರು. ಅಲ್ಲಿ ಏನು ತಪ್ಪು ನಡೆದಿದೆ. ಇಂತಹದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕೂಡಲೇ ಪೊಲೀಸ್​ ಆಯುಕ್ತರು ಆ ಪೊಲೀಸ್​ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದಲ್ಲಿ ಪೊಲೀಸ್​ ಇಲಾಖೆ ಮತ್ತಷ್ಟು ನಂಬಿಕೆಯನ್ನು ಕಳೆದುಕೊಳ್ಳುತ್ತದೆ ಎಂದು ನೆಟ್ಟಿಗರು ಆಗ್ರಹಿಸಿದ್ದರು.
ಇದೀಗ ಆರೋಪಿಯನ್ನು ಬಂಧಿಸಲಾಗಿದ್ದು, ಬೆಂಗಳೂರು ಪೊಲೀಸರ ತ್ವರಿತ ಕ್ರಮಕ್ಕೆ ನೆಟ್ಟಿಗರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆರಂಭದಲ್ಲಿ ಪೊಲೀಸ್​ ಸಿಬ್ಬಂದಿ ಎಂದು ಭಾವಿಸಿದ್ದರು. ಆದರೆ, ಬಂಧಿತ ಆರೋಪಿ ಪೊಲೀಸ್​ ಕಾನ್ಸ್​ಟೇಬಲ್​ ಅಲ್ಲ, ಆತ ಓರ್ವ ಹೋಂ ಗಾರ್ಡ್​ ಎಂದು ಎಚ್​ಎಎಲ್​ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.​(ದಿಗ್ವಿಜಯ ನ್ಯೂಸ್​)
ಬೆಂಗಳೂರಿನಲ್ಲಿ ಪೊಲೀಸಪ್ಪನಿಂದ ದಾದಾಗಿರಿ: ಹುಡುಗ-ಹುಡುಗಿ ಜೊತೆಯಲ್ಲಿ ಕುಳಿತಿದ್ದಕ್ಕೆ 1000 ರೂ. ವಸೂಲಿ!

ಬಳ್ಳಾರಿ ನಗರ ಕ್ಷೇತ್ರದ KRPP ಅಭ್ಯರ್ಥಿ ಘೋಷಣೆ: ಸಹೋದರನ ವಿರುದ್ಧ ಪತ್ನಿಯನ್ನೇ ಕಣಕ್ಕಿಳಿಸಿದ ಜನಾರ್ದನ ರೆಡ್ಡಿ

ಎರಡು ಪಕ್ಷದ ಜತೆಗೆ ಸರ್ಕಾರ ಮಾಡಿ ಅನುಭವ ಇದೆ; ಸಮ್ಮಿಶ್ರ ಸರ್ಕಾರಿಂದ ಬಡತನ ಹೋಗಲಾಡಿಸಲು ಸಾಧ್ಯವಿಲ್ಲ ಎಂದ ಎಚ್​ಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
