ಹಾವೇರಿ:ಹಾವೇರಿಯಲ್ಲಿ ಜೋಡಿ ಕೊಲೆಯಾಗಿದ್ದು, ಜನತೆ ಮತ್ತೆ ಬೆಚ್ಚಿಬಿದ್ದಿದ್ದಾರೆ. ಇತ್ತೀಚೆಗೆ ನಗರದಲ್ಲಿ 11 ವರ್ಷದ ಬಾಲಕನ ಕೊಲೆಯಾಗಿತ್ತು. ಇದೀಗ ಮತ್ತಿಬ್ಬರನ್ನು ಭೀಕರವಾಗಿ ಕೊಲ್ಲಲಾಗಿದೆ.
ಹಾವೇರಿ ತಾಲೂಕಿನ ಯತ್ತಿನಹಳ್ಳಿ ಗ್ರಾಮದ ಮನೆಯಲ್ಲಿ ಮಂಗಳವಾರ ರಾತ್ರಿ ಜೋಡಿ ಕೊಲೆಯಾಗಿದ್ದು, ಬುಧವಾರ ಬೆಳಕಿಗೆ ಬಂದಿದೆ. ಕೊಲೆಯಾದವರನ್ನು ನಿಂಗಪ್ಪ ಬೆಣ್ಣೆಪ್ಪ ಶಿರಗುಪ್ಪಿ(30) ಹಾಗೂ ಗಣೇಶ ದಿನೇಶ ಕುಂದಾಪುರ(16) ಎಂದು ಗುರುತಿಸಲಾಗಿದೆ.ಇದನ್ನೂ ಓದಿರಿಕಬಡ್ಡಿ ಕ್ರೀಡಾಪಟುಗಳಿದ್ದ ಕಾರು ಅಪಘಾತ: ಆಟಗಾರರಿಬ್ಬರು ಸ್ಥಳದಲ್ಲೇ ಸಾವು, ಮೂವರ ಸ್ಥಿತಿ ಗಂಭೀರ
ನಿಂಗಪ್ಪ ಬೆಣ್ಣೆಪ್ಪ ಶಿರಗುಪ್ಪಿ ಹಾಗೂ ಗಣೇಶ ದಿನೇಶ ಕುಂದಾಪುರ ಇಬ್ಬರೂ ಮನೆಯಲ್ಲಿ ಮಲಗಿದ್ದರು. ಈ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಳು. ಘಟನಾ ಸ್ಥಳಕ್ಕೆ ಹಾವೇರಿ ಶಹರ ಠಾಣೆ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ಇನ್ನು ತಿಳಿದುಬಂದಿಲ್ಲ. ಹಳೇ ದ್ವೇಷದ ಶಂಕೆ ವ್ಯಕ್ತವಾಗಿದೆ.
ಊರೂರು ಸುತ್ತುತ್ತಿರೋ ‘ಸಿಡಿ ಲೇಡಿ’ ಈಗ ಎಲ್ಲಿದ್ದಾಳೆ? ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಕದ್ದ ಕಾರಿನಲ್ಲಿದ್ದ ವಸ್ತು ನೋಡಿ ಬೆಚ್ಚಿದ ಖದೀಮರು, ಕಾರಿನಲ್ಲೇ ಚಿನ್ನಾಭರಣ ಬಿಟ್ಟು ಎಸ್ಕೇಪ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
