ಹುಬ್ಬಳ್ಳಿ:ಕೇವಲ ಐದು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಯುವಕನೊಬ್ಬ ಕೊಲೆಯಾಗಿರುವ ಆತಂಕಕಾರಿ ಘಟನೆ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ನಡೆದಿದೆ.
ನಿಂಗಪ್ಪ ಬೂದಪ್ಪ ನವಲೂರ (28) ಕೊಲೆಯಾದ ಮದುಮಗ. ತೋಟದ ಮನೆಯಲ್ಲಿ ಮಲಗಿದ್ದ ಸಮಯದಲ್ಲಿ ಕಣ್ಣಿಗೆ ಖಾರದಪುಡಿ ಎರಚಿ, ಕತ್ತು ಹಿಸುಕಿ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ:ಕೆಎಸ್​ಆರ್​ಟಿಸಿ ಬಸ್​ ಮೇಲೆ ಕಾಡಾನೆ ದಾಳಿ: ದಂತದಿಂದ ತಿವಿದ ಗಜ, ಸ್ವಲ್ಪದರಲ್ಲೇ ಪ್ರಯಾಣಿಕರು ಪಾರು
ನಿಂಗಪ್ಪ ಜೂನ್​ 7 ರಂದು ಹಸೆ ಮಣೆ ಏರಬೇಕಿತ್ತು. ತಾವರಗೆರೆ ಗ್ರಾಮದ ಯುವತಿ ಜೊತೆ ಆಕೆಯ ಮದುವೆ ನಿಶ್ಚಿಯವಾಗಿತ್ತು. ಮದುವೆ ದಿನ ಹತ್ತಿರ ಬಂದಿದ್ದರಿಂದ ನಿಂಗಪ್ಪ ಅವರ ಮನೆಯಲ್ಲಿ ಎಲ್ಲ ತಯಾರಿಗಳು ನಡೆಯುತ್ತಿದ್ದವು. ಆದರೆ, ಇದೀಗ ನಿಂಗಪ್ಪನ ಹತ್ಯೆಯಾಗಿರುವುದು ಕುಟುಂಬಕ್ಕೆ ಭಾರೀ ಆಘಾತವಾಗಿದೆ. ಮಗನನ್ನು ಕಳೆದುಕೊಂಡ ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಕೊಲೆಗೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಎರಡು ಹೃದಯಗಳನ್ನು ಒಂದು ಮಾಡಿದ ಹಾವು! ಯುವಕ-ಯುವತಿಯ ಪ್ರೀತಿಗೆ ಉರಗನ ನಂಟು

ರಾಜ್ಯದಲ್ಲಿ ಜೂನ್​ 6ರವರೆಗೆ ಮಳೆ ಸಾಧ್ಯತೆ: ವಿಳಂಬವಾಗಲಿದೆ ನೈಋತ್ಯ ಮುಂಗಾರು

ಆಂಬುಲೆನ್ಸ್ ಟೆಂಡರ್ ಬ್ಲಂಡರ್; ನಿಯಮಗಳನ್ನೇ ಬದಲಾಯಿಸಿದ ಆರೋಗ್ಯ ಇಲಾಖೆ ಅಧಿಕಾರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
