ಬೆಂಗಳೂರು:ಖತರ್ನಾಕ್​ ಲೇಡಿಯೊಬ್ಬಳು ಫೇಸ್​ಬುಕ್​ ಮೂಲಕ ವ್ಯಕ್ತಿಯೊಬ್ಬನನ್ನು ಪರಿಚಯ ಮಾಡಿಕೊಂಡು, ಪ್ರೇಮದ ಬಲೆಗೆ ಬೀಳಿಸಿ, ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿರುವ ಪ್ರಕರಣ ರಾಜ್ಯ ರಾಜಧಾನಿಯ ಚಂದ್ರಲೇಔಟ್​ನಲ್ಲಿ ಬೆಳಕಿಗೆ ಬಂದಿದೆ.
ಸಂತೋಷ್​​ ಎಂಬಾತನಿಗೆ ಫೇಸ್​ಬುಕ್​ನಲ್ಲಿ ಯುವತಿಯೊಬ್ಬಳ ಪರಿಚಯವಾಗಿತ್ತು. ಬಳಿಕ 2018ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಕೆಲಸ ಕೊಡಿಸಿದ್ದ. ಇದೇ ಪರಿಚಯದ ಮೇಲೆ ಸಂತೋಷ್ ಮತ್ತು ಯುವತಿ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಮದುವೆಯಾಗಲು ಸಹ ನಿರ್ಧರಿಸಿದರು.
ಆದ್ರೆ ಯುವತಿಗೆ ಈ ಮೊದಲೇ ಮದುವೆಯಾಗಿದ್ದು, ಅದನ್ನು ಮುಚ್ಚಿಟ್ಟು ಸಂತೋಷ್ ಜೊತೆ ಮದುವೆಯಾದಳು. ಯುವತಿಯ ಅಕ್ಕ ಮತ್ತು ಬಾವ ಅರುಣ್​ ಸೇರಿ ಇಬ್ಬರಿಗೂ ಮದುವೆ ಮಾಡಿಸಿದ್ದರು. ನಾದಿನಿ ಜೊತೆ ಮದುವೆ ಮಾಡಿಸಲು ಯುವತಿಯ ಬಾವ ಅರುಣ್​, ಸಂತೋಷ್​ ಬಳಿ ಐದು ಲಕ್ಷ ರೂಪಾಯಿ ಹಣ ಪೀಕಿದ್ದ. ಇದಾದ ಬಳಿಕ ಯುವತಿಯ ಅಕ್ಕನ ಸರದಿ. 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿಗೆ ಸ್ಕೇಚ್ ಹಾಕಿದ್ದಳು.
ಇದನ್ನೂ ಓದಿ:ಪುಟ್ಟ ಮಕ್ಕಳನ್ನು ಮಡಿಲಲ್ಲಿ ಕಟ್ಟಿಕೊಂಡು ನರೇಗಾ ಕೂಲಿ ಕೆಲಸಕ್ಕೆ ಬರುವ ಮಹಿಳೆಯರ ನೆರವಿಗೆ ‘ ಕೂಸಿನ ಮನೆ’
ಮದುವೆ ಮಾಡಿಸಲು ಚಿನ್ನದ ಆಭರಣ ಮಾಡಿಸುವಂತೆ ಯುವತಿಯ ಅಕ್ಕ, ಸಂತೋಷ್​ಗೆ ಹೇಳಿದ್ದಳು. ಬಾವ ಮತ್ತು ಅಕ್ಕನ ಸರದಿಯಾಗ್ತಿದ್ದಂತೆ ಯುವತಿಯ ಬೇಡಿಕೆ ಎದುರಾಯ್ತು. ಮದುವೆಗೂ ಮುಂಚೆ ಐಫೋನ್​ಗೆ ಬೇಡಿಕೆ ಇಟ್ಟಳು. ಮನ ಮೆಚ್ಚಿದ ಹುಡುಗಿ ಕೇಳಿದಳು ಎಂದು 2.60 ಲಕ್ಷ ರೂ. ಮೌಲ್ಯದ ಐಫೋನ್‌ ಅನ್ನು ಸಂತೋಷ್​ ಕೊಡಿಸಿದ್ದ.
ಹಣ, ಆಭರಣ ಹಾಗೂ ಮೊಬೈಲ್ ಫೋನ್ ಬಳಿಕ ಮದುವೆ ತಯಾರಿ ಶುರುವಾಯ್ತು. 2022 ರಂದು ನವೆಂಬರ್​ನಲ್ಲಿ ಮದ್ದೂರಮ್ಮ ದೇವಾಲಯದಲ್ಲಿ ಇಬ್ಬರಿಗೂ ಮದುವೆ ಮಾಡಲಾಯಿತು. ಆದರೆ, ಮದುವೆಯಾಗಿ ಸಂಸಾರ ನಡೆದಿದ್ದು ಕೇವಲ ಮೂರು ತಿಂಗಳು ಮಾತ್ರ. ಶಾಸ್ತ್ರೋಕ್ತವಾಗಿ ಮದುವೆಯಾದರೂ ದೈಹಿಕ ಸಂಪರ್ಕಕಕ್ಕೆ ಅವಕಾಶ ನೀಡಿಲ್ಲ ಮತ್ತು ಮೋಸ ಮಾಡುವ ಉದ್ದೇಶದಿಂದಲೇ ಮದುವೆಯಾಗಿದ್ದಾರೆ ಎಂದು ದೂರು ನೀಡಿದ.
ಮದುವೆಯಾದ ಬಳಿಕ ಯುವತಿ ಎಸ್ಕೇಪ್ ಆದ ನಂತರವು ಬಾವ ಅರುಣ್, ಸಂತೋಷ್​ನಿಂದ ಹಣ ಪೀಕಿದ್ದು, ಕಿಲಾಡಿ ಯುವತಿ, ಆಕೆಯ ಅಕ್ಕ ಮತ್ತು ಬಾವನ ವಿರುದ್ಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಸಂತೋಷ್​ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಎಫ್​ಐಆರ್​ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಒಂದೇ ಕುಟುಂಬದ ನಾಲ್ವರ ಸಾವು; ರಾತ್ರಿ ಮಲಗಿದ್ದವರು ಬೆಳಗ್ಗೆ ಶವವಾಗಿ ಪತ್ತೆ!

ಚಿನ್ನದ ಬೆಲೆ ಏರಿಕೆ, ಬೆಳ್ಳಿ ಯಥಾಸ್ಥಿತಿ; ಬೆಂಗಳೂರು ಸೇರಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನಾಭರಣ ಬೆಲೆ ಹೀಗಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 5 =
Remember me
