ಶಿವಮೊಗ್ಗ:ಯುವಕನೊಬ್ಬ ಸಾವಿಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧವೇ ದೂರು ದಾಖಲಾಗಿರುವ ಘಟನೆ ಶಿವಮೊಗ್ಗದ ಹೊಳೆಹೊನ್ನೂರಿನಲ್ಲಿ ನಡೆದಿದೆ.
ಪೊಲೀಸರ ಕಿರುಕುಳ ತಾಳಲಾರದೇ ಯುವಕ ನೇಣಿಗೆ ಶರಣಾದನಾ ಎಂಬ ಪ್ರಶ್ನೆ ಮೂಡಿದೆ. ಯಾವುದೇ ದೂರು ಇಲ್ಲದಿದ್ದರೂ ಯುವಕನನ್ನು ಠಾಣೆಗೆ ಕರೆದೊಯ್ದು ಪೊಲೀಸರು ಥಳಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಸಾವಿನ ಹಾದಿ ಹಿಡಿದ್ದಾನೆ ಎಂದು ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಇದೀಗ ಯುವಕನ ಆತ್ಮಹತ್ಯೆ ಸಂಬಂಧ ಶಿವಮೊಗ್ಗದ ಹೊಳೆಹೊನ್ನೂರು ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸ್ ಸಿಬ್ಬಂದಿ ಬಿಲಾಲ್, ಲಿಂಗೇಗೌಡ, ಸುದರ್ಶನ್ ಹಾಗೂ ವಿಶ್ವನಾಥ್ ವಿರುದ್ಧ ಕೇಸು ದಾಖಲಾಗಿದೆ. ಪೊಲೀಸರ ವಿರುದ್ಧ ದೂರು ಮೃತ ಯುವಕನ ಪತ್ನಿ ಕಮಲಾಕ್ಷಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಮತ್ತಷ್ಟು ಬಿಕಿನಿ ಫೋಟೋಗಳನ್ನು ಹರಿಬಿಟ್ಟ ಅನಸೂಯ! ಸ್ಟಾರ್​ ನಿರೂಪಕಿಯ ಹಾಟ್​ ಅವತಾರಗಳು ವೈರಲ್​
ಮೃತ ಯುವಕನನ್ನು ಮಂಜುನಾಥ್​ (28) ಎಂದು ಗುರುತಿಸಲಾಗಿದೆ. ಈತ ಕನ್ನೆಕೊಪ್ಪ ಗ್ರಾಮದ ನಿವಾಸಿ. ಜೂನ್ 11ರಂದು ಕಾರಣವಿಲ್ಲದೆ ಹೊಳೆಹೊನ್ನೂರು ಪೊಲೀಸರು ಮಂಜುನಾಥ್​ನನ್ನು ಕರೆದೊಯ್ದಿದ್ದರು. ದೂರು ನೀಡದಿದ್ದರೂ ಅಥವಾ ದಾಖಲಾಗದಿದ್ದರೂ ಮಂಜುನಾಥ್​ಗೆ ನಿರಂತರವಾಗಿ ಡ್ರಿಲ್ ಮಾಡಿದ್ದರು. ಠಾಣೆಯಲ್ಲಿ ಸಿಕ್ಕಾಪಟ್ಟೆ ಥಳಿಸಿದ ಬಳಿಕ ಮಂಜುನಾಥ್​ನನ್ನು ಬಿಟ್ಟು ಕಳುಹಿಸಲಾಗಿತ್ತು.
ಈ ಘಟನೆಯಿಂದ ಮನನೊಂದಿದ್ದ ಮಂಜುನಾಥ್ ಮರ್ಯಾದೆಗೆ ಅಂಜಿ ಮನೆಯಿಂದ ಹೊರಗೆ ಎಲ್ಲೂ ಹೋಗದೆ ಕಳೆದ ನಾಲ್ಕು ದಿನದಿಂದ ಮನೆಯಲ್ಲಿಯೇ ಉಳಿದಿದ್ದ. ಅಂತಿಮವಾಗಿ ಜೂನ್ 15ರ ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದ. ಠಾಣೆಯಲ್ಲಿ ಪೊಲೀಸರ ಕಿರುಕುಳದಿಂದಲೇ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಕಮಲಾಕ್ಷಿ ದೂರು ನೀಡಿದ್ದಾರೆ.
ಇದನ್ನೂ ಓದಿ:ಅನ್ನಭಾಗ್ಯಕ್ಕೆ ತೆಲಂಗಾಣ ಅಕ್ಕಿ: 36 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಲಭ್ಯ; ಕೇಂದ್ರದ ದರದಲ್ಲಿಯೇ ಖರೀದಿ?
ಪೊಲೀಸರು ಆರಂಭದಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದರು. ಬಳಿಕ ಗ್ರಾಮಸ್ಥರು ಗಲಾಟೆ ನಡೆಸಿದಾಗ, ಕೊನೆಗೂ ನಿನ್ನೆ ರಾತ್ರಿ ನಾಲ್ವರು ಪೊಲೀಸ್​ ಸಿಬ್ಬಂದಿ ವಿರುದ್ಧ ಹೊಳೆಹೊನ್ನೂರು ಠಾಣಾ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಪ್ರಕರಣ ತನಿಖೆ ಮುಂದುವರಿದಿದೆ.(ದಿಗ್ವಿಜಯ ನ್ಯೂಸ್​)
ಸೌಜನ್ಯ ಸಾವು ಪ್ರಕರಣ: ಆರೋಪಿ ದೋಷ ಮುಕ್ತನೆಂದು ಕೋರ್ಟ್ ತೀರ್ಪು, ನಮಗೂ ಜಯ ಸಿಕ್ಕಿದೆ ಎಂದ ಸೌಜನ್ಯ ತಾಯಿ

ಸರ್ಕಾರಿ ಬ್ಯಾಂಕುಗಳು ಲಾಭದ ಹಳಿಗೆ ಬಂದಿದ್ದು ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − six =
Remember me
