ಮೈಸೂರು:ಕೆಲಸಕ್ಕೆಂದು ದೂರದ ಆಫ್ರಿಕಾ ದೇಶಕ್ಕೆ ಹೋಗಿದ್ದ ಯುವಕನೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದು, ಪಾಲಕರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಎಫ್ರಾಹಿಂ (20) ಮೃತ ದುರ್ದೈವಿ. ಎಚ್​ಡಿ ಕೋಟೆ‌ ತಾಲೂಕಿನ ಟೈಗರ್ ಬ್ಲಾಕ್​ನ ನಿವಾಸಿ. ಹಕ್ಕಿಪಿಕ್ಕಿ ಸಮುದಾಯದ ಎಫ್ರಾಹಿಂ, ಅಮಿತ್ ಮತ್ತು ಮಂಜುಳ ದಂಪತಿಯ ಪುತ್ರ. ಈತ ಕುಟುಂಬದ ಪ್ರಮುಖ ಆಧಾರಸ್ತಂಭವಾಗಿದ್ದ.
ಇದನ್ನೂ ಓದಿ:ಕರ್ನಾಟಕ ಮಾದರಿ, ಅಭಿವೃದ್ಧಿ ರಹದಾರಿ: ಐದು ವರ್ಷಗಳ ನೀಲಿನಕ್ಷೆ ಮುಂದಿಟ್ಟ ರಾಜ್ಯಪಾಲ ಗೆಹಲೋತ್; 16ನೇ ವಿಧಾನಸಭೆಗೆ ವಿಧ್ಯುಕ್ತ ಚಾಲನೆ
ಎಫ್ರಾಹಿಂ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು. ಈ ಬಗ್ಗೆ ತಂದೆ-ತಾಯಿ ಜೊತೆ ದೂರವಾಣಿಯಲ್ಲಿಯೂ ಮಾತನಾಡಿದ್ದ. ಆತನನ್ನು ಜೊತೆಗಿದ್ದವರು ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಮಗನ ಸಾವಿನ ಸುದ್ದಿ ಕೇಳಿದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಅಂತಿಮ ದರ್ಶನ ಪಡೆಯಲು ಸಾಧ್ಯವಾಗುತ್ತಾ ಎಂಬ ಆತಂಕದಲ್ಲಿದ್ದಾರೆ. ಮೃತದೇಹವನ್ನು ಸ್ವಗ್ರಾಮಕ್ಕೆ ತರಿಸುವಂತೆ ಪಾಲಕರು ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.(ದಿಗ್ವಿಜಯ ನ್ಯೂಸ್​)
ಸ್ವಲ್ಪ ಅಲುಗಾಡಿದ್ರೂ ಆಂಬ್ಯುಲೆನ್ಸ್​ ಬೀಳ್ತಿತ್ತು! ನಿಯಂತ್ರಣ ತಪ್ಪಿ ಕಂದಕಕ್ಕೆ ಬೀಳುವಷ್ಟರಲ್ಲಿ ನಡೆಯಿತು ಪವಾಡ

ಗ್ಯಾರಂಟಿ ಸರ್ಕಾರಕ್ಕೆ ದಶ ದಿಶೆ: ಆರ್ಥಿಕ ಪರಿಸ್ಥಿತಿ ಸುಧಾರಣೆ, ಭ್ರಷ್ಟಾಚಾರ ಮಟ್ಟಹಾಕುವ ಸಂಕಲ್ಪ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 − 5 =
Remember me
