ಬೆಂಗಳೂರು:ತುಂಬಾ ರೇಗಿಸುತ್ತಿದ್ದ ಅಂತ ಜೊತೆಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಗರದ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಆರ್​.ಎಮ್​.ಝೆಡ್ ಬಳಿ ನಡೆದಿದೆ.
ಮಲ್ಲಿಕಾರ್ಜುನ (24) ಕೊಲೆಯಾದ ಯುವಕ. ಸ್ನೇಹಿತನನ್ನು ಕೊಲೆ ಮಾಡಿದ್ದ ರಾಜರಥ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಮಲ್ಲಿಕಾರ್ಜುನ್ ಮತ್ತು ಆರೋಪಿ ರಾಜರಥ ಇಬ್ಬರು ಆರ್​ಎಮ್ ಝೆಡ್​ನ ಲೈಫ್ ಸ್ಟೈಲ್ಸ್ ಮಾಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಬಟ್ಟೆಗಳು ಹಾಗೂ ಹಣಕಾಸಿನ ವಿಚಾರಕ್ಕೆ ಸದಾ ರಾಜರಥನನ್ನು ಮಲ್ಲಿಕಾರ್ಜುನ ರೇಗಿಸ್ತಿದ್ದ.
ಇದನ್ನೂ ಓದಿ:ಸಂಘೀ ಪಕ್ಷಕ್ಕೆ ಸೇರಿದ JDSನಲ್ಲಿ ನಾವಿರಲ್ಲ ಎಂದ ರಾಜ್ಯ ಕಾರ್ಯದರ್ಶಿ ಅಬ್ದುಲ್ ಖಾದರ್ ಶಾಹಿದ್!
ಸದಾ ರೇಗಿಸುವುದನ್ನು ಸಹಿಸದ ರಾಜರಥ, ಮಲ್ಲಿಕಾರ್ಜನನ ಜತೆ ಜಗಳಕ್ಕೆ ಇಳಿದಿದ್ದ. 26ನೇ ತಾರೀಖು ಸಂಜೆ ಮಾಲ್ ಬಳಿಯೇ ಕತ್ತರಿಯಿಂದ ಎದೆಗೆ ಇರಿದು ರಾಜರಥ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತ ಆರೋಪಿಯ ವಿಚಾರಣೆ ಮುಂದುವರಿದಿದೆ.
ನೃತ್ಯ ಮಾಡುತ್ತಾ ಹೃದಯಾಘಾತದಿಂದ ಕುಸಿದು ಬಿದ್ದು ಪ್ರಾಣ ಬಿಟ್ಟ ಯುವಕ

ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬೆಳ್ಳಿ ದರ ಹೀಗಿದೆ ನೋಡಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
