ಚಿಕ್ಕಬಳ್ಳಾಪುರ:ಅಂಗಡಿ ಮುಂದೆ ಎಂಜಲು ಉಗಿದ ಗ್ರಾಹಕನನ್ನು ಮಾಲೀಕನೇ ಚಾಕುವಿನಿಂದ ಮನಸೋಇಚ್ಛೆ ಇರಿದು ಕೊಂದ ಘಟನೆ ಚಿಂತಾಮಣಿ ತಾಲೂಕು ಉಲಪ್ಪನಹಳ್ಳಿಯಲ್ಲಿ ಸಂಭವಿಸಿದೆ.
ಉಲ್ಲಪನಹಳ್ಳಿಯ ಮುನಿಕೃಷ್ಣ (24) ಕೊಲೆಯಾದವ. ಅಂಗಡಿ ಮಾಲೀಕ 26 ವರ್ಷದ ಚೇತನ್ ಆರೋಪಿ. ಪ್ರತಿದಿನ ಚೇತನ್​ನ ಅಂಗಡಿಯಲ್ಲಿ ಮುನಿಕೃಷ್ಣ ಟೀ ಕುಡಿಯುತ್ತಿದ್ದ. ಅದೇ ರೀತಿ ಬುಧವಾರ ಬೆಳಗ್ಗೆಯೂ ಟೀ ಕುಡಿಯಲು ಬಂದಿದ್ದ. ಈ ವೇಳೆ ಪಾನ್ ಪರಾಗ್ ತೆಗೆದುಕೊಂಡ ಯುವಕ ಅಂಗಡಿ ಮುಂದೆಯೇ ಎಂಜಲು ಉಗಿದ. ಇದನ್ನು ಕಂಡು ಗರಂ ಆದ ಚೇತನ್​, ಮುನಿಕೃಷ್ಣನನ್ನು ತರಾಟೆಗೆ ತೆಗೆದುಕೊಂಡ. ಈ ವೇಳೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು.ಇದನ್ನೂ ಓದಿರಿಸಾಯುತ್ತಿದ್ದ ನಾಯಿಗೆ ನೀರು ಕುಡಿಸಲು ಬಂದವ ಸ್ಥಳದಲ್ಲೇ ಶವವಾದ!
ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಕುಪಿತಗೊಂಡ ಚೇತನ್, ​ ಚಾಕುವಿನಿಂದ ಗ್ರಾಹಕ ಮುನಿಕೃಷ್ಣನ ಹೊಟ್ಟೆ, ಎದೆ ಭಾಗಕ್ಕೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಮುನಿಕೃಷ್ಣನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗಮಧ್ಯೆ ಕೊನೆಯುಸಿರೆಳೆದ.
ಈ ಘಟನೆಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಭಯದ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತೆಯಾಗಿ ಪೊಲೀಸ್​ ಬಂದೋಬಸ್ತ್​ ಕಲ್ಪಿಸಲಾಗಿದೆ. ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಋತುಮತಿ ಆಗದ ಯುವತಿಯನ್ನು ತುಂಬಾ ಇಷ್ಟಪಟ್ಟು ಮದುವೆಯಾದ… ಬಳಿಕ ಆಗಿದ್ದೆಲ್ಲವೂ ದುರಂತ!

VIDEO|ಶಿರಾ ಬೈ ಎಲೆಕ್ಷನ್​: ಮತ ಕೇಳೋಕೆ ಬಂದ ಮಾಜಿ ಶಾಸಕರಿಗೆ ಹಿಗ್ಗಾಮುಗ್ಗಾ ತರಾಟೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 16 =
Remember me
