ಮೈಸೂರು:ಆತನ ವಯಸ್ಸಿನ್ನೂ 22. ದಾಂಪತ್ಯ ಜೀವನಕ್ಕೆ ಕಾಲಿಡುವ ಕಾತರದಲ್ಲಿದ್ದ ಆತ ತನಗೆ ಮದುವೆ ಮಾಡಿ ಎಂದು ಪಾಲಕರನ್ನು ಪೀಡಿಸುತ್ತಿದ್ದ. ಮಗನ ಆಸೆ ಈಡೇರಿಸಲೆಂದು ಹೆಣ್ಣು ಹುಡುಕಾಟ ಆರಂಭಿಸಿದ್ದ ಪಾಲಕರು, ಮೊದಲು ಮನೆ ಕಟ್ಟೋಣ. ಆ ನಂತರ ಮದುವೆ ಮಾಡಿದರಾಯ್ತು… ಅಂದುಬಿಟ್ಟರು. ಮುಂದೆ ದೊಡ್ಡ ದುರಂತವೇ ಸಂಭವಿಸಿಬಿಟ್ಟಿತು!
ಹೌದು, ಮನೆಯವರು ಮದುವೆ ಮಾಡಲು ತಡ ಮಾಡುತ್ತಾರೆ ಎಂದು ನೊಂದ ಆ ಯುವಕ ಸಾವಿನ ಕದ ತಟ್ಟಿದ್ದಾನೆ. ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿ ಮಹಮದ್ ಸಲ್ಮಾನ್ (22) ಮೃತ.
ಮದುವೆ ಮಾಡುವಂತೆ ಮಹಮದ್‌ ಸಲ್ಮಾನ್ ಹಲವು ಬಾರಿ ಪಾಲಕರನ್ನು ಒತ್ತಾಯಿಸಿದ್ದ. ಆತನ ಒತ್ತಡಕ್ಕೆ ಬೇಸತ್ತ ಪಾಲಕರು ಹುಡುಗಿಯನ್ನು ನೋಡಲು ಆರಂಭಿಸಿದ್ದರು. ಈ ಮಧ್ಯೆ ಮನಸ್ಸು ಬದಲಾಯಿಸಿದ ಪಾಲಕರು ಸದ್ಯಕ್ಕೆ ಮದುವೆ ಬೇಡ ಎಂದಿದ್ದರು. ಮೊದಲು ಮನೆ ಕಟ್ಟುವ, ಆಮೇಲೆ ಮದುವೆ ಮಾಡುತ್ತೇವೆ ಎಂದಿದ್ದರು. ಇದೇ ಕಾರಣಕ್ಕೆ ಮನನೊಂದ ಯುವಕ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾನೆ. ಮಂಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2 ಕಿ.ಮೀ. ಓಡಾಡಿ ಸಿಕ್ಕಸಿಕ್ಕವರಿಗೆ ಇರಿದ, ರಾತ್ರಿಯಿಡೀ ಪೊಲೀಸರಿಗೂ ಟಾರ್ಚರ್​ ಕೊಟ್ಟ! ಈತನ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಿ

ಮಲಗಿದ್ದವರ ಮೇಲೆ ಕಲ್ಲುಚಪ್ಪಡಿ ಬಿದ್ದು ಅಪ್ಪ-ಮಗ ಸಾವು, ತಾಯಿ-ಮಗಳ ಸ್ಥಿತಿ ಗಂಭೀರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 3 =
Remember me
