ಹಾಸನ:ರಾಜ್ಯದಲ್ಲಿ ಮತದಾನ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ಕಂಡುಬಂದಿದ್ದು, ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಹಲವರು ನಾನಾ ರೀತಿಯಲ್ಲಿ ಹುರಿದುಂಬಿಸಲು ಪ್ರಯತ್ನ ನಡೆಸುತ್ತಿದ್ದಾರೆ.
ಮತ ಚಲಾಯಿಸಲು ಹಲವರು ನಿರಾಸಕ್ತಿ ತೋರುತ್ತಿರುವ ನಡುವೆಯೇ ಶತಾಯುಷಿಗಳು, ರೋಗಿಗಳು, ವಯೋವೃದ್ಧರು, ವಿಕಲಾಂಗರು, ಅದರಲ್ಲೂ ಎರಡೂ ಕೈಗಳು ಇರದವರು ಕೂಡ ಅಪಾರ ಆಸಕ್ತಿಯಿಂದ ಬಂದು ಮತ ಚಲಾಯಿಸಿದ್ದಾರೆ. ಇವರೊಂದಿಗೆ ಕೆಲವರು ಚುನಾವಣೆ ದಿನವೇ ಮದುವೆ ಇದ್ದರೂ ಮದುವೆ ಮುಗಿಸಿಕೊಂಡು ಮತ ಚಲಾಯಿಸುತ್ತಿದ್ದಾರೆ.
ಇದನ್ನೂ ಓದಿ:ಯಾಕೆ ಎಲ್ಲರೂ ಮತ ಚಲಾಯಿಸಬೇಕು?; ಮತದಾನ ಕಡಿಮೆಯಾದಷ್ಟೂ ಆಗುವ ಅಪಾಯ ಏನು?
ರಾಜ್ಯದಲ್ಲಿ ಮದುವೆ ಮುಗಿದ ತಕ್ಷಣ ಮತಗಟ್ಟೆಗೆ ಬಂದು ಮತವನ್ನು ಚಲಾಯಿಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಹಾಸನ ಜಿಲ್ಲೆ ಸಕಲೇಶಪುರದ ಮಹೇಶ್ವರಿನಗರ ನಿವಾಸಿ ರೋಹಿತ್ ಇಂದು ತಮ್ಮ ಮದುವೆ ಇದ್ದರೂ ಮತ ಚಲಾಯಿಸುವುದನ್ನು ತಪ್ಪಿಸಲಿಲ್ಲ.
ಧರ್ಮಸ್ಥಳದಲ್ಲಿ ಇಂದು ಮದುವೆಯಾದ ಇವರು, ಮದುವೆ ಮುಗಿಯುತ್ತಿದ್ದಂತೆ ಸಕಲೇಶಪುರ ಪಟ್ಟಣದ ಮತಗಟ್ಟೆ 85ಕ್ಕೆ ಪತ್ನಿ ನಂದಿನಿ ಜತೆ ಆಗಮಿಸಿ ಮತ ಚಲಾಯಿಸಿದ್ದಾರೆ. ಇವರ ಮತಾಭಿಮಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಎಲೆಕ್ಟ್ರಿಕ್ ದ್ವಿಚಕ್ರವಾಹನಗಳ ಬೆಲೆಯಲ್ಲಿ ಭಾರಿ ಇಳಿಕೆ; ಕಾರಣ ಇದು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 3 =
Remember me
