ದೊಡ್ಡಬಳ್ಳಾಪುರ:ಲಾಕ್​ಡೌನ್​ ನಡುವೆಯೂ ಗೆಳೆಯನ ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ಮೋಜು-ಮಸ್ತಿಗೆಂದು ಬೈಕ್​ನಲ್ಲಿ ಹೋಗಿದ್ದ 8 ಮಂದಿ ಪೈಕಿ ಮೂವರು ಜಲಸಮಾಧಿಯಾಗಿದ್ದಾರೆ. ಬರ್ತ್​ ಡೇ ಬಾಯ್​ ಕೂಡ ಸಾವಿಗೀಡಾಗಿದ್ದು, ಸಂಭ್ರಮಾಚರಣೆ ದುರಂತ ಅಂತ್ಯ ಕಂಡಿದೆ.
ಬೆಂಗಳೂರಿನ ರಾಮಮೂರ್ತಿನಗರದ ಚಂದ್ರು(20), ರಾಜು(19) ಮತ್ತು ನವೀನ್ ಕುಮಾರ್(24) ಮೃತ ದುರ್ಧೈವಿಗಳು.
ಇದನ್ನೂ ಓದಿರಿಕ್ವಾರಂಟೈನ್​ ಕೇದ್ರದಲ್ಲಿ ಮತ್ತೊಂದು ಸಾವು, ಮುಂದುವರಿದ ಆತ್ಮಹತ್ಯೆ ಸರಣಿ…
ಸೋಮವಾರ ನವೀನ್ ಕುಮಾರ್​ ಜನ್ಮದಿನ. ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡಲೆಂದು ರಾಮಮೂರ್ತಿ ನಗರದಿಂದ ನವೀನ್​ ಸೇರಿ ನಾಲ್ವರು ಯುವಕರು ಹಾಗೂ ನಾಲ್ವರು ಯುವತಿಯರು 4 ಬೈಕ್​ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿಗೆ ಲಾಂಗ್ ಡ್ರೈವ್ ಬಂದಿದ್ದರು.
ಆರಂಭದಲ್ಲಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ ಇವರು, ಲಾಕ್​ಡೌನ್​ ಹಿನ್ನೆಲೆ ದೇವಾಲಯದ ಬಾಗಿಲು ಹಾಕಿದ್ದರಿಂದ ಹೊರಗೇ ನಿಂತು ಕೈ ಮುಗಿದು ಬಳಿಕ ತಿಪ್ಪಗಾನಹಳ್ಳಿ ಕೆರೆ ಬಳಿ ಮೋಜು ಮಾಡಲು ಹೋಗಿದಾಗ ಅವಘಡ ಸಂಭವಿಸಿದೆ.
ಇದನ್ನೂ ಓದಿರಿಕದ್ದುಮುಚ್ಚಿ ಪ್ರವಾಸಕ್ಕೆ ಹೋಗಿದ್ದವರ ಜೀಪ್​ ಪ್ರಪಾತಕ್ಕೆ ಉರುಳಿತು…
ತಿಪ್ಪಗಾನಹಳ್ಳಿ ಕೆರೆಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಆಟವಾಡಲೆಂದು 8 ಮಂದಿಯೂ ಇಳಿದಿದ್ದಾರೆ. ಆ ವೇಳೆ ಮೂವರು ಯುವಕರು ನೀರುಪಾಲಾಗಿದ್ದಾರೆ. ತಮ್ಮ ಕಣ್ಣೆದುರಲ್ಲೇ ಸ್ನೇಹಿತರು ನೀರುಪಾಲಾಗುತ್ತಿದ್ದರೂ ಉಳಿಸಿಕೊಳ್ಳಲು ಆಗದ ಐವರು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿರಿರೇಷ್ಮೆನಗರಿಗೂ ವಕ್ಕರಿಸಿದ ಕರೊನಾ… ಮಗು, ಕೆಎಸ್​ಆರ್​ಟಿಸಿ ಬಸ್​ ಚಾಲಕನಿಗೂ ಸೋಂಕು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 5 =
Remember me
