ರಾಯಚೂರು:ಮೈಕ್ ಹಚ್ಚ ಬೇಡಿ ಎಂದು ಬುದ್ಧಿವಾದ ಹೇಳಲು ಬಂದ ದೇವದುರ್ಗದ ಲೇಡಿ ತಹಸೀಲ್ದಾರ್​ಗೆ ಆವಾಜ್ ಹಾಕಿದ ಯುವಕರು, ಸುಪ್ರೀಂಕೋರ್ಟ್ ಕಾನೂನಿನ ಪಾಠ ಮಾಡಿದ್ದಾರೆ. ಆ ವಿಡಿಯೋ ವೈರಲ್​ ಆಗಿದೆ.
ದೇವದುರ್ಗ ಪಟ್ಟಣದ ಶಾಂತಿ ನಗರದಲ್ಲಿ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಮೂರ್ತಿ ಪ್ರತಿಷ್ಠಾಪನ ಸ್ಥಳದಲ್ಲಿ ಮೈಕ್ ಹಚ್ಚಿ ಹೆಚ್ಚು ಸೌಂಡ್ ಕೊಡಲಾಗಿತ್ತು. ಸೋಮವಾರ ಇಲ್ಲಿಗೆ ಬಂದ ಪ್ರಭಾರಿ ತಹಸೀಲ್ದಾರ್​ ಸಂತೋಷಿ ರಾಣಿ ಅವರು ಮೈಕ್​ ಬಳಸದಂತೆ ತಿಳಿಹೇಳಿದ್ದಾರೆ. ಇದಕ್ಕೆ ಬಗ್ಗೆ ಯುವಕರು ತಹಸೀಲ್ದಾರ್​ ಅವರನ್ನೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿರಿಪೊಲೀಸ್​ ಕಮಿಷನರ್​ಗೆ ಡಿಕೆಶಿ ಅವಾಜ್​!
ವರ್ಷದಲ್ಲಿ ಹನ್ನೊಂದು ದಿನ ಕೂರಿಸುವ ಗಣೇಶನಿಗೆ ನಿರ್ಬಂಧ ಹಾಕುವ ನೀವುಗಳು ಮಸೀದಿಯಲ್ಲಿ ವರ್ಷ ಪೂರ್ತಿ ಮೈಕ್ ಹಾಕಿ ಗದ್ದಲ ಮಾಡುವವರಿಗೆ ಏಕೆ ನಿರ್ಬಂಧ ಹಾಕಲ್ಲ? ಸುಪ್ರೀಂ ಕೋರ್ಟ್​ ಆದೇಶ ಗೊತ್ತೈತಿ ನಿಮ್ಗೆ… ಎಂದು ಯುವಕರು ತಹಸೀಲ್ದಾರ್​ರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಮೇಲೆ ಕೇಸ್​ ಫೈಲ್​ ಮಾಡ್ತೀರಾ ಮಾಡಿ, ಗಣೇಶ ಪ್ರತಿಷ್ಠಾಪನೆ ವಿಚಾರವಷ್ಟೇ ನಿಮ್ಮ ಡ್ಯೂಟಿನಾ? ನಿಮಗೆ ಬೇರೆ ಕೆಲಸ ಇಲ್ವಾ? ಆ ಕೆಲಸಗಳನ್ನು ಮೊದಲು ಮಾಡಿ ಎಂದು ಆವಾಜ್ ಹಾಕಿದರು.
ಯುವಕರ ಆವಾಜ್​ಗೆ ಸೈಲಂಟ್ ಆಗಿ ನಿಂತ ತಹಸೀಲ್ದಾರ್​, ಸ್ಥಳಕ್ಕೆ ಪೊಲೀಸರನ್ನು ಕರೆಸಿದರು. ಪೊಲೀಸರ ಬಳಿಯೂ ಅರೆಸ್ಟ್ ವಾರೆಂಟ್ ಕೊಡ್ರೆ ನಾವೆಲ್ಲರೂ ಬರ್ತೇವೆ.. ನಾವು ಗಣೇಶ ಹಬ್ಬ ಮಾಡೋಕು ನೀವು ಯಾಕೆ ಅಡ್ಡಿ ಮಾಡೋದು? ನಾವು ನಮ್ಮ ಸಂಸ್ಕೃತಿಯನ್ನು ಆಚರಣೆ ಮಾಡುತ್ತಿದ್ದೇವೆ… ಎಂದು ಅವಾಜ್​ ಹಾಕಿದರು. ಈ ವಿಡಿಯೋ ವೈರಲ್​ ಆಗಿದೆ.
ನೋಡ ನೋಡುತ್ತಿದ್ದಂತೆ ಗಣೇಶ ಮೂರ್ತಿ ಜತೆಯಲ್ಲೇ ಬಾಲಕರಿಬ್ಬರು ನೀರುಪಾಲು

ದೇವರಿಗೆ ಕೈಮುಗಿಯುತ್ತಿದ್ದಾಗಲೇ ವ್ಯಕ್ತಿಯ ಕುತ್ತಿಗೆ ಕೊಯ್ದು ಬರ್ಬರ ಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 9 =
Remember me
