ಯಾದಗಿರಿ:ಉಡುಪಿ ಜಿಲ್ಲೆಯ ಯುವಕ ಶರತ್​ ಮೃತಪಟ್ಟರೂ ಯುವ ಜನಾಂಗ ಮಾತ್ರ ಇನ್ನು ಎಚ್ಚೆತ್ತುಕೊಳ್ಳದೇ ಹುಚ್ಚಾಟ ಮುಂದುವರಿಸಿರುವುದು ಕಳವಳಕಾರಿಯಾಗಿದೆ. ಭಾರೀ ಮಳೆಯಿಂದ ರಾಜ್ಯದಲ್ಲಿ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಫೋಟೋ-ವಿಡಿಯೋ ಕ್ರೇಜ್​ಗೆ ಮುಂದಾಗಿರುವ ಯುವ ಜನಾಂಗ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದಾರೆ.
ಯಾದಗಿರಿ ಜಿಲ್ಲೆಯ ಕೊಟಗೇರಾ ಗ್ರಾಮದ ಹೊರವಲಯದಲ್ಲಿರುವ ಸೂರಜ್​ ಮಿನಿ ಫಾಲ್ಸ್​ನಲ್ಲಿ ಯುವಕರು ದುಸ್ಸಾಹಸಕ್ಕೆ ಇಳಿಯುತ್ತಿರುವ ಆಘಾತಕಾರಿ ಪ್ರಸಂಗ ಬೆಳಕಿಗೆ ಬಂದಿದೆ. ಪ್ರಾಣದ ಹಂಗು ತೊರೆದು ಪೋಟೋ ಕ್ರೇಜ್​ಗಾಗಿ ಯುವಕ-ಯುವತಿಯರು ಮಿನಿ ಫಾಲ್ಸ್ ಆಳಕ್ಕೆ ಇಳಿತ್ತಿದ್ದಾರೆ.
ಇದನ್ನೂ ಓದಿ:ಡೆಂಗ್ಯೂ ಏರಿಕೆ; ಆ್ಯಂಟಿ ಲಾರ್ವಾ ಸಿಂಪಡಿಸಲು ಡ್ರೋನ್‌ಗಳನ್ನು ಬಳಸಲು ಮುಂದಾದ ದೆಹಲಿ ಮುನ್ಸಿಪಾಲಿಟಿ
ಸತತ ಮಳೆಯಿಂದಾಗಿ ಸೂರಜ್​​ ಫಾಲ್ಸ್​ ಮೈದುಂಬಿ ಹರಿಯುತ್ತಿದ್ದು, ಫಾಲ್ಸ್​ನ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಕಳೆದ ಒಂದು ವಾರದಿಂದ ಪ್ರವಾಸಿಗರು ದಂಡು ಹರಿದು ಬರುತ್ತಿದೆ. ಫೋಟೋಗಾಗಿ ಬಂಡೆಗಳ ಮೇಲಿಂದ ಕೆಳಗಿಳಿದು ದುಸ್ಸಾಹಸಕ್ಕೆ ಮುಂದಾಗುತ್ತಿದ್ದಾರೆ.
ಬಂಡೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಬೃಹತ್​ ಬಂಡೆಗಳಲ್ಲಿ ಪಾಚಿ ಕಟ್ಟಿದೆ. ಸ್ವಲ್ಪ ಯಾಮಾರಿದ್ರೂ ಕಾಲು ಜಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಉಡುಪಿಯಲ್ಲೂ ಶರತ್​ ಇದೇ ಪಾಚಿಗೆ ಕಾಲು ಜಾರಿ ಮೃತಪಟ್ಟಿದ್ದ. ಆತನ ವಿಡಿಯೋ ಎಲ್ಲೆಡೆ ವೈರಲ್​ ಆಗಿತ್ತು. ಇಷ್ಟಾದರೂ ಸಹ ಕೆಲವರು ಇನ್ನು ಬುದ್ಧಿ ಕಲಿಯದಿರುವುದು ವಿಪರ್ಯಾಸವೇ ಸರಿ.(ದಿಗ್ವಿಜಯ ನ್ಯೂಸ್​)
ಹರಿಯಾಣದಲ್ಲಿ ಕೋಮುಗಲಭೆಗೆ ಮೂವರು ಬಲಿ: 144 ಸೆಕ್ಷನ್​ ಜಾರಿ, ಇಂಟರ್ನೆಟ್ ಸೇವೆ​ ಸ್ಥಗಿತ

ಸೇತುವೆ ನಿರ್ಮಾಣದ ವೇಳೆ 100 ಅಡಿ ಎತ್ತರದಿಂದ ಕ್ರೇನ್​ ಕುಸಿದು 16 ಕಾರ್ಮಿಕರು ದುರಂತ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
