ಹಾವೇರಿ:ಊರಿಗೆ ತೆರುಳಲು ಬಸ್​ಗಾಗಿ ಕಾಯುತ್ತಿದ್ದ ಯುವತಿಯ ಮೊಬೈಲ್ ಕದ್ದು ಓಡುತ್ತಿದ್ದ ಕಳ್ಳನನ್ನು ಯುವತಿಯೇ ಬೆನ್ನತ್ತಿ ಹಿಡಿದ ಘಟನೆ ಹಾವೇರಿಯ ಬಸ್ ನಿಲ್ದಾಣದಲ್ಲಿ ನಡೆದಿದೆ.
ಯುವತಿ ಖದೀಮನನ್ನು ಬೆಂಡೆತ್ತಿ ಬೆವರಿಳಿಸುವ ವೇಳೆ ಬಸ್​ ನಿಲ್ದಾಣದಲ್ಲಿದ್ದ ಜನರು ಆಕೆಯ ನೆರವಿಗೆ ಬಂದರು. ಅಲ್ಲದೆ, ತಾನೊಂದು, ನೀನೊಂದು‌ ಎಂಬಂತೆ ಕಳ್ಳನಿಗೆ ಧರ್ಮದೇಟು ಸಹ ನೀಡಿದರು. ಈ ಘಟನೆ ನಿನ್ನೆ (ಸೆ.28) ರಾತ್ರಿ ನಡೆದಿದೆ.
ಇದನ್ನೂ ಓದಿ:ನಿಫಾ ವೈರಸ್​​​ ಸೋಂಕಿಗೆ ತುತ್ತಾಗಿದ್ದ ನಾಲ್ವರು ಸೋಂಕಿತರೂ ಗುಣಮುಖ, ನಿರ್ಬಂಧಗಳನ್ನು ವಾಪಸ್​​ ಪಡೆದ ಸರ್ಕಾರ
ಸಾರಿಗೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಖದೀಮನನ್ನು ಬಸ್​ ನಿಲ್ದಾಣದಲ್ಲಿ ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ ಮತ್ತು ಕತ್ತುಪಟ್ಟಿ ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನನ್ನು ಬಂಧಿಸಿ ಪೊಲೀಸರು ಠಾಣೆಗೆ ಕರೆದೊಯ್ದರು. ಮೊಬೈಲ್ ಕದ್ದು ಸಿಕ್ಕಿಬಿದ್ದ ಖದೀಮನನ್ನು ರಾಜು ಎಂದು ಗುರುತಿಸಲಾಗಿದೆ.
ಇದೇ ವೇಳೆ ಯುವತಿಯ ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
ನಟ ಸಿದ್ಧಾರ್ಥ್​ಗೆ ತಟ್ಟಿದ ಕಾವೇರಿ ಪ್ರತಿಭಟನೆಯ ಬಿಸಿ: ಕನ್ನಡಿಗರ ಪರವಾಗಿ ಕ್ಷಮೆ ಕೋರಿದ ಪ್ರಕಾಶ್​ ರಾಜ್

ಕಾವೇರಿ ವಿವಾದ; ಈಗಾಗಲೇ ವಶಕ್ಕೆ ಪಡೆದಿರುವ ಹೋರಾಟಗಾರರನ್ನು ಬಿಡುಗಡೆಗೊಳಿಸಬೇಕು: ಎಚ್​ಡಿಕೆ

ಕಾವೇರಿ ಹುಟ್ಟುವ ಕೊಡಗಿನಲ್ಲೇ ಬಂದ್ ಏಕಿಲ್ಲ? ಜನಜೀವನ ಎಂದಿನಂತೆ ಸಾಮಾನ್ಯ, ಎಲ್ಲವೂ ಓಪನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + six =
Remember me
