ಬೆಂಗಳೂರು:ರಮೇಶ್​ ಜಾರಕಿಹೊಳಿ ಸಿಡಿ ಕೇಸ್​ನ ಯುವತಿ ಪರವಾಗಿ ವಕೀಲ ಜಗದೀಶ್​ ಕೆ.ಎನ್.​ ಮಹದೇವ್ ನೇತೃತ್ವದ ತಂಡ ಪೊಲೀಸ್​​ ಕಮಿಷನರ್ ಕಚೇರಿಗೆ ಶುಕ್ರವಾರ ಮಧ್ಯಾಹ್ನ ದೂರು ನೀಡಿದೆ.
ಶುಕ್ರವಾರ ಬೆಳಗ್ಗೆ 3ನೇ ವಿಡಿಯೋ ರಿಲೀಸ್​ ಮಾಡಿದ್ದ ‘ಸಂತ್ರಸ್ತ’ ಯುವತಿ, ರಾಜ್ಯದ ಜನತೆ, ಎಲ್ಲ ಸಂಘಟನೆಗಳು, ರಾಜಕೀಯ ಪಕ್ಷದವರು ಬೆಂಬಲ ವ್ಯಕ್ತಪಡಿಸುತ್ತಿರುವುದರಿಂದ ಇಷ್ಟು ದಿನ ಕಾಡುತ್ತಿದ್ದ‌ ಜೀವ ಭಯ ನನ್ನನ್ನು ದೂರವಾಗಿದೆ. ನನ್ನಪರ ವಕೀಲರಾದ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿವೆ ಎಂದಿದ್ದಳು. ಅದರಂತೆ ವಕೀಲ ಜಗದೀಶ್ ನೇತೃತ್ವದಲ್ಲಿ 6 ಜನರ ವಕೀಲರ ತಂಡ ಕಮಿಷನರ್​ ಕಚೇರಿಗೆ ಆಗಮಿಸಿ ದೂರು ನೀಡಿದೆ. ಆ ದೂರಿನ ಪ್ರತಿ ವಿಜಯವಾಣಿಗೆ ಲಭ್ಯವಾಗಿದೆ.
ನಮ್ಮನ್ನು ನಂಬಿ ಯುವತಿ ಲಿಖಿತ ದೂರು ಕಳುಹಿಸಿದ್ದಾಳೆ. ಅದನ್ನು ಬೆಂಗಳೂರು ಪೊಲೀಸ್​ ಆಯುಕ್ತರಿಗೆ ತಲುಪಿಸಿದ್ದೇವೆ. ಆಕೆ ಸದ್ಯ ಪ್ರಾಣ ಭೀತಿಯಲ್ಲಿರುವುದರಿಂದ ಪತ್ರ ಹೇಗೆ ಕಳುಹಿಸಿದಳು ಎಂಬ ಮೂಲವನ್ನು ಹೇಳಲು ಸಾಧ್ಯವಿಲ್ಲ. ಯುವತಿಗೆ ತಾನು ಸೇಫ್​ ಅನಿಸಿದರೆ ಆಕೆಯೇ ಮುಂದೆ ಬಂದು ಸ್ವತಃ ಹೇಳಿಕೆ ನೀಡಲು ಸಿದ್ಧವಾಗಿದ್ದಾಳೆ ಎಂದು ವಕೀಲ ಜಗದೀಶ್​ ಹೇಳಿದ್ದಾರೆ.


ಯುವತಿ ಪರ ವಕೀಲರ ಸ್ಫೋಟಕ ಹೇಳಿಕೆ: ಪೊಲೀಸ್​ ಆಯುಕ್ತರ ಮುಂದೆ ಸಿಡಿ ಲೇಡಿ ಬರ್ತಾಳಂತೆ! ಆದರೆ…

ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಲೇಡಿ ದೂರು! 3ನೇ ವಿಡಿಯೋದಲ್ಲಿ ಸ್ಫೋಟಕ ತಿರುವು

ಅಕ್ಕಿ ಪಡೆಯಲು ಬಾಗಿಲು ತೆಗೆದ ಯುವತಿಯನ್ನ ಬೆತ್ತಲೆ ಮಾಡಿ ಚಿತ್ರೀಕರಿಸಿದ! ಮುಂದೆ ಆಗಿದ್ದೆಲ್ಲವೂ ಅವಾಂತರ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven + 12 =
Remember me
