ಬೆಂಗಳೂರು:ಡ್ರ್ಯಾಗರ್​ ಹಿಡಿದು ಹಾಡಹಗಲಲ್ಲೇ ನಡುರಸ್ತೆಯಲ್ಲೇ ಯುವತಿಗೆ ಕಿರುಕುಳ ನೀಡಿದ ಆಘಾತಕಾರಿ ಘಟನೆ ನಗರದ ಪುಲಿಕೇಶಿನಗರದ ವಿವೇಕಾನಂದನಗರ ರೆಸಿಡೆನ್ಸಿ ಬಳಿ ನಡೆದಿದೆ.
ಯುವತಿಗೆ ಕಿರುಕುಳ ನೀಡುತ್ತಿದ್ದ ವೇಳೆ ಮತ್ತೊಬ್ಬ ಮಹಿಳೆ ಆಕೆಯನ್ನು ರಕ್ಷಣೆ ಮಾಡಿದ್ದಾರೆ. ಈ ಘಟನೆಯಿಂದ ಇದೀಗ ಸ್ಥಳೀಯ ನಿವಾಸಿಗಳಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಬೆಂಗಳೂರಿನಲ್ಲಿ ಹಗಲಿನಲ್ಲಿಯೇ ಮಹಿಳೆಯರು ಓಡಾಡಲು ಅಸಾಧ್ಯವಾಗುತ್ತಿದೆಯಾ? ನಗರದಲ್ಲಿ ಕಾನೂನು ಸುವ್ಯವಸ್ಥೆಯೇ ಇಲ್ಲದಂತಾಯ್ತಾ? ಎಂಬ ಪ್ರಶ್ನೆಗಳು ಮೂಡಿವೆ.
ಇದನ್ನೂ ಓದಿ:ಆಘಾತದಿಂದ ಹೊರ ಬಾರದ ಪರಾಜಿತರು: ಹಂಗಾಮಿ ಸಿಎಂ ಬೊಮ್ಮಾಯಿ ಬಳಿ ಬೇಸರ ನಿವೇದನೆ
ಸಿಸಿಟಿವಿಯಲ್ಲಿ ಯುವತಿಗೆ ಕಿರುಕುಳ ನೀಡಿರುವ ದೃಶ್ಯ ದಾಖಲಾಗಿದೆ. ಡ್ರ್ಯಾಗರ್ ಹಿಡಿದು ಯುವತಿಗೆ ಕಿರುಕುಳ ನೀಡಿದ್ದಲ್ಲದೆ, ಆಕೆಯ ಮೊಬೈಲ್ ಅನ್ನು ಕಸಿಯುವ ಪ್ರಯತ್ನವನ್ನು ಕೂಡ ದುಷ್ಕರ್ಮಿ ಮಾಡಿದ್ದಾನೆ. ಡ್ರ್ಯಾಗರ್ ಹಿಡಿದು ಯುವತಿಯ ಬೆನ್ನಟ್ಟುತ್ತ ಬಂದಿದ್ದ ಅಪರಿಚಿತನನ್ನು ಕಂಡ ಕೂಡಲೇ ಮತ್ತೊಬ್ಬ ಮಹಿಳೆ ನೆರವಿಗೆ ಧಾವಿಸಿ ರಕ್ಷಣೆ ಮಾಡಿದ್ದಾರೆ.
ಆ ಏರಿಯಾದಲ್ಲಿ ಸರಿಯಾಗಿ ಹೊಯ್ಸಳ ಸಿಬ್ಬಂದಿ ಗಸ್ತು ತಿರುಗುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಇದೇ ರೀತಿ ಘಟನೆಗಳು ಮರುಕಳಿಸಿದರೆ ಯುವತಿಯರು ಓಡಾಡುವುದು ತುಂಬಾ ಕಷ್ಟವಾಗುತ್ತದೆ ಎಂದಿದ್ದಾರೆ. ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಈ ಕೂಡಲೇ ಎಚ್ಚೆತ್ತುಕೊಳ್ಳಬೇಕಿದೆ.(ಏಜೆನ್ಸೀಸ್​)
ಶಿವಮೊಗ್ಗದಲ್ಲಿ ಹಣಕ್ಕಾಗಿ ಯುವತಿಯನ್ನು ಅಪಹರಿಸಿದ ದುಷ್ಕರ್ಮಿಗಳು: 20 ಲಕ್ಷ ರೂ.ಗೆ ಬೇಡಿಕೆ

ಅಮ್ಮನನ್ನು ಕಳೆದುಕೊಳ್ಳುವ ನೋವು..

VIDEO| ಬುರ್ಖಾ ತೊಟ್ಟು ಮೆಕ್ಕಾ ಮದೀನಾಗೆ ಹೊರಟ ಸಂಜನಾ ಗರ್ಲಾನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 2 =
Remember me
