ಹುಬ್ಬಳ್ಳಿ:ಉಪಹಾರ ಮಾಡಲೆಂದು ಇಲ್ಲಿನ ಅಕ್ಷಯ ಪಾರ್ಕ್​ನ ಹೋಟೆಲ್​ವೊಂದಕ್ಕೆ ಬಂದಿದ್ದ ಇಬ್ಬರು ಯುವತಿಯರಿಗೆ ಫೋನ್​ ನಂಬರ್​ ಕೊಟ್ಟು ಫ್ರೆಂಡ್​ಶಿಪ್​ ಮಾಡುವಂತೆ ಚುಡಾಯಿಸಿದ್ದ ಐವರು ಪುಂಡರನ್ನು ಗೋಕುಲ ರೋಡ್​ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಹಳೇ ಹುಬ್ಬಳ್ಳಿಯ ಮಹ್ಮದ್​ ಯೂಸೂಫ್ ತಟಗಾರ, ನೂರ್​ ಅಹ್ಮದ್​ ಕಾಲೇಗಾರ, ಮಹಮ್ಮದ ಸಾದಿಕ್​ ಅತ್ತಾರ, ತಾಹೀರ್​ ಅಹ್ಮದ ಇಸಾಮದಿ ಹಾಗೂ ಶಾಹೀನ್​ಸಾ ಸಾಸವಾಡ ಬಂಧಿತ ಆರೋಪಿಗಳು.
ಯುವತಿಯರಿಬ್ಬರು ಹೋಟೆಲ್​ಗೆ ಆಗಮಿಸಿದ್ದರು. ಈ ವೇಳೆ ಹೋಟೆಲ್​ಗೆ ಬಂದ ಯುವಕರ ಗುಂಪು ಯುವತಿಯರನ್ನೇ ನೋಡುವುದು, ಚುಡಾಯಿಸುವುದು ಮಾಡುತ್ತಿದ್ದರು. ಚೀಟಿಯಲ್ಲಿ ಫೋನ್​ ನಂಬರ್​ ಬರೆದು ಕೊಟ್ಟು ಫ್ರೆಂಡ್​ಶಿಪ್​ ಮಾಡುವಂತೆ ಒತ್ತಾಯಿಸಿದ್ದರು. ನಂತರ ಬೈಕ್​ನಲ್ಲಿ ಹಿಂಬಾಲಿಸಿಕೊಂಡು ಹೋಗಿ ತೊಂದರೆ ಕೊಟ್ಟಿದ್ದಾರೆ.
ಈ ಕುರಿತು ಯುವತಿಯರು ಗೋಕುಲ ರೋಡ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇನ್​ಸ್ಪೆಕ್ಟರ್​ ಜೆ.ಎಂ. ಕಾಲಿಮಿರ್ಚಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಕಾಮಗಾರಿ ಅಪೂರ್ಣ, ತರಾತುರಿಯಲ್ಲಿ ಲೋಕಾರ್ಪಣೆಗೊಂಡ ರಾಜ್ಯದ ಎರಡನೇ ಗೋಶಾಲೆ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − 10 =
Remember me
