ಬೆಂಗಳೂರು:ಮದುವೆಯಾದ ಮೂರೇ ದಿನಕ್ಕೆ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದರೆ ನಾನಾ ಕಾರಣಗಳನ್ನು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ.
ನಗರದ ಕೆ.ಆರ್.ಪುರಂನಲ್ಲಿ ಈ ಘಟನೆ ನಡೆದಿದೆ. ಸಂತ್ರಸ್ತೆ ಧರಣಿ ಮತ್ತು ಸುರೇಶ್​ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರಂತೆ. ಕಳೆದ ಫೆಬ್ರವರಿ 13ರಂದು ಸುರೇಶ್​ ಜೊತೆ ಮದುವೆ ಆಗಿದೆ ಎಂದು ಧರಣಿ ಹೇಳುತ್ತಿದ್ದಾರೆ. ನಾವಿಬ್ಬರು ಫೆ. 13 ರಿಂದ ಫೆ. 17 ರವರೆಗೂ ಒಟ್ಟಿಗೆ ಇದ್ದೆವು. 18 ರಂದು ತನ್ನ ಮನೆಗೆ ಕರೆದುಕೊಂಡು ಹೋಗ್ತೀನಿ ಎಂದವನು ನಾಪತ್ತೆಯಾಗಿದ್ದಾನೆ ಎಂದು ಧರಣಿ ಆರೋಪ ಮಾಡಿದ್ದಾಳೆ.
ಇದನ್ನೂ ಓದಿ: ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋದ ತಂದೆ: ಅಸಹಾಯಕಳಾಗಿದ್ದ ವಿದ್ಯಾರ್ಥಿನಿಗೆ ಪೊಲೀಸ್​ ಅಧಿಕಾರಿ ನೆರವು
ಇದೀಗ ಹೊಸ ವರಸೆ ತೆಗೆದಿರುವ ಸುರೇಶ್​​, ನಾನು ವಿವಾಹವಾಗಲೇ ಇಲ್ಲ. ಆಕೆಯ ಜತೆ ಸ್ನೇಹಿತನಾಗಿ ಮಾತ್ರ ಇದ್ದೆ. ಅವಳ ಜತೆಗಿರುವ ಮದುವೆ ಫೋಟೋಗಳು ಕಿರುಚಿತ್ರದ ಫೋಟೋಗಳು ಎನ್ನುತ್ತಿದ್ದಾನಂತೆ.
ಅಂದಹಾಗೆ ಧರಣಿ 2016ರಲ್ಲೇ ಮೊದಲ ವಿವಾಹವಾಗಿದ್ದರಂತೆ. ನಂತರ ಪತಿ ಬಿಟ್ಟು ದೂರವಾಗಿದ್ದಳಂತೆ. ಈ ವಿಚಾರ ಸುರೇಶ್​​ಗೆ ಗೊತ್ತಿದ್ದರೂ ಮದುವೆ ಆಗಿದ್ದಾನೆ. ಈಗ ನೋಡಿದರೆ ನನ್ನನ್ನು ಬಿಟ್ಟುಹೋಗಿದ್ದಾನೆ ಎಂದು ಆರೋಪ ಮಾಡಿರುವ ಧರಣಿ, ಕೆ.ಆರ್.ಪುರಂ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.(ದಿಗ್ವಿಜಯ ನ್ಯೂಸ್​)
ಮದ್ವೆ ಹಿಂದಿದೆ ಅದೊಂದು ಪ್ಲಾನ್​: ಪವಿತ್ರಾ ಲೋಕೇಶ್​ ವಿರುದ್ಧ ಮಾಜಿ ಪತಿ ಸುಚೇಂದ್ರ ಪ್ರಸಾದ್ ಗಂಭೀರ ಆರೋಪ​

ತಪ್ಪಾದ ಪರೀಕ್ಷಾ ಕೇಂದ್ರಕ್ಕೆ ಬಿಟ್ಟು ಹೋದ ತಂದೆ: ಅಸಹಾಯಕಳಾಗಿದ್ದ ವಿದ್ಯಾರ್ಥಿನಿಗೆ ಪೊಲೀಸ್​ ಅಧಿಕಾರಿ ನೆರವು

ತನುಜಾ ಚಿತ್ರ ವೀಕ್ಷಿಸಿದ ಸುತ್ತೂರು ಶ್ರೀ; ಮಠದ 4 ಸಾವಿರ ವಿದ್ಯಾರ್ಥಿಗಳೊಂದಿಗೆ ವೀಕ್ಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
