ಬೆಂಗಳೂರು:19 ವರ್ಷದ ಯುವತಿ ಹಾಗೂ 16 ವರ್ಷದ ಬಾಲಕನ ನಡುವಿನ ಪ್ರೀತಿ ವಿಚಾರ ತಿಳಿದ ಪಾಲಕರು, ಇಬ್ಬರಿಗೂ ಒತ್ತಾಯ ಪೂರ್ವಕವಾಗಿ ವಿವಾಹ ಮಾಡಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬನಶಂಕರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಚೇರಿ ಅಧಿಕಾರಿ ಹಾಗೂ ಪೊಲೀಸರು ಬಾಲ್ಯ ವಿವಾಹಿತರನ್ನು ಬೇರ್ಪಡಿಸಿದ್ದು, ಬಾಲಕನನ್ನು ಬಾಲಮಂದಿರಕ್ಕೆ ಕಳುಹಿಸಿದ್ದಾರೆ. ಯುವತಿ ಹಾಗೂ ಆತನ ಪಾಲಕರ ವಿರುದ್ಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ. ಬಾಲಕನ ತಂದೆ ಮಾನಸಿಂಗ್ ಮತ್ತು ತಾಯಿ ಲಕ್ಷ್ಮೀಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ರೋಹಿಣಿ ಸೆಪಟ್ ಕಟೋಚ್ ತಿಳಿಸಿದ್ದಾರೆ.
ಕೂಲಿ ಅರಸಿ ಬಂದಿದ್ದ ಕುಟುಂಬ:20 ವರ್ಷದ ಹಿಂದೆ ಕೂಲಿಗಾಗಿ ಬೆಂಗಳೂರಿಗೆ ಬಂದ ನೇಪಾಳ ಮೂಲದ ಮಾನಸಿಂಗ್ ಮತ್ತು ಲಕ್ಷ್ಮೀ ಸಿಂಗ್ ದಂಪತಿ ಮೈಕೋಲೇಔಟ್​ನ ಅರಕೆರೆಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಾನಸಿಂಗ್ ಆಟೋ ಚಾಲಕ, ಲಕ್ಷ್ಮೀ ಮನೆ ಕೆಲಸ ಮಾಡುತ್ತಿದ್ದಾರೆ. 8ನೇ ತರಗತಿ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳಿಸಿರುವ ಬಾಲಕ ಗ್ಯಾಸ್ ಏಜೆನ್ಸಿಯಲ್ಲಿ ಸಿಲಿಂಡರ್ ಡಿಲಿವರಿ ಕೆಲಸ ಮಾಡುತ್ತಿದ್ದ. ನೇಪಾಳ ಮೂಲದ ಯುವತಿಗೆ ತಂದೆ-ತಾಯಿ ಇಲ್ಲ. ಎಸ್ಸೆಸ್ಸೆಲ್ಸಿ ಓದಿರುವ ಈಕೆ ಮನೆ ಕೆಲಸ ಮಾಡಿಕೊಂಡು ಪುಟ್ಟೇನಹಳ್ಳಿಯಲ್ಲಿ ಅತ್ತೆ ಮನೆಯಲ್ಲಿ ನೆಲೆಸಿದ್ದಾಳೆ.
ಸ್ನೇಹ ಪ್ರೀತಿಗೆ ತಿರುಗಿತ್ತು…
ಈ ಎರಡು ಕುಟುಂಬಸ್ಥರು ದೂರದ ಸಂಬಂಧಿಕರಾಗಿದ್ದರಿಂದ ಒಡನಾಟವಿತ್ತು. ಯುವತಿ ಮತ್ತು ಹುಡುಗನ ನಡುವಿನ ಸ್ನೇಹ 6 ತಿಂಗಳ ಹಿಂದೆ ಪ್ರೀತಿಗೆ ತಿರುಗಿದೆ. ಈ ವಿಚಾರ ತಿಳಿದ ಹುಡುಗನ ಪಾಲಕರು ಫೆ.15ರಂದು ಯುವತಿಯನ್ನು ಮನೆಗೆ ಕರೆಸಿಕೊಂಡು ಇಬ್ಬರಿಗೂ ಒತ್ತಾಯಪೂರ್ವಕವಾಗಿ ಮದುವೆ ಮಾಡಿದ್ದಾರೆ. ಇದು ಫೆ.19ರಂದು ಸ್ಥಳೀಯರಿಗೆ ಗೊತ್ತಾಗಿ, ಮಕ್ಕಳ ಸಹಾಯವಾಣಿಗೆ ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಕನ ನಿವಾಸಕ್ಕೆ ಬಂದ ಅಧಿಕಾರಿಗಳ ತಂಡ, ಪೊಲೀಸರಿಗೆ ಬಾಲ್ಯವಿವಾಹ ನಡೆದಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − eight =
Remember me
