ತುಮಕೂರು:ಸಂವಿಧಾನ ಶಿಲ್ಪಿ ಡಾ. ಬಿ.ಆರ್​. ಅಂಬೇಡ್ಕರ್​ ವಿರುದ್ಧ ನಾಲಿಗೆ ಹರಿಬಿಟ್ಟಿದ್ದ ಯುವತಿಯನ್ನು ತುಮಕೂರು ಪೊಲೀಸರು ಬಂಧಿಸಿದ್ದಾರೆ.
ವೇದಾವತಿ (22) ಬಂಧಿತ ಯುವತಿ. ಈಕೆ ಕ್ಯಾತಸಂದ್ರ ಸಮೀಪದ ಕಲ್ಲಹಳ್ಳಿ ಗ್ರಾಮದ ನಿವಾಸಿ.‌ ನನಗೆ ಅನ್ಯಾಯವಾಗಿದೆ. ಇದಕ್ಕೆ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನ ಕಾರಣ ಎನ್ನುತ್ತಾ ಅವಾಚ್ಯ ಶಬ್ದಗಳಿಂದ ಅಂಬೇಡ್ಕರ್​ ಅವರನ್ನು ನಿಂದಿಸಿ, ವಿಡಿಯೋ ಹರಿಬಿಟ್ಟಿದ್ದಳು.
ಇದನ್ನೂ ಓದಿ:ಸಚಿವ ಸ್ಥಾನಕ್ಕಾಗಿ ಕಸರತ್ತು: ಸಿದ್ದು-ಡಿಕೆಶಿಗೂ ಮುನ್ನವೇ 3 ತಂಡಗಳಾಗಿ ದೆಹಲಿಗೆ ಹಾರಿದ ಶಾಸಕರು
ವಿಡಿಯೋ ವೈರಲ್​ ಆದ ಬಳಿಕ ವೇದಾವತಿ ವಿರುದ್ಧ ಎನ್.ಇ.ಪಿ.ಎಸ್ ಪೊಲೀಸ್ ಠಾಣೆಗೆ ಶ್ರೀನಿವಾಸ್​ ಎಂಬುವರು ದೂರು ನೀಡಿದ್ದರು. ಇದರ ಆಧಾರದ ಮೇಲೆ ವೇದಾವತಿಯನ್ನು ಬಂಧಿಸಲಾಗಿದೆ. ಪಿಟಿ ಮೇಷ್ಟ್ರು ಮೇಲಿನ ದ್ವೇಷಕ್ಕೆ ಅಂಬೇಡ್ಕರ್​ರನ್ನು ನಿಂದನೆ ಮಾಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
9ನೇ ತರಗತಿ ಓದುತ್ತಿದ್ದಾಗ ವೇದಾವತಿ ತನ್ನ ಶಾಲೆಯ ದೈಹಿಕ ಶಿಕ್ಷಕನನ್ನು ಪ್ರೀತಿ ಮಾಡುತ್ತಿದ್ದಳು. ಆದರೆ, ದೈಹಿಕ ಶಿಕ್ಷಕ ವಂಚನೆ ಮಾಡಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ಸಂಬಂಧ ವೇದಾವತಿ ತುಮಕೂರು ಮಹಿಳಾ ಠಾಣೆಗೆ ದೂರು ನೀಡಿದ್ದಳು. ಬಳಿಕ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಆದರೆ, ನ್ಯಾಯಾಲಯದಲ್ಲಿ ದಾಖಲೆ ಹಾಗೂ ಸಾಕ್ಷಿ ಕೇಳಲಾಗಿತ್ತು.
ಇದನ್ನೂ ಓದಿ:ಮದುವೆ ದಿನವೇ ವಿಷ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ ನೂತನ ದಂಪತಿ; ದುರದೃಷ್ಟವಶಾತ್ ವರ ಯಶಸ್ವಿ…
ಸಾಕ್ಷಿ ಕೇಳಿದ್ದರಿಂದ ಬೇಸತ್ತ ವೇದಾವತಿ ಸಂವಿಧಾನ ಬರೆದ ಡಾ. ಬಿ.ಆರ್ ಅಂಬೇಡ್ಕರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ವಿಡಿಯೋ ಹರಿಬಿಟ್ಟಿದ್ದಳು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದ ಬಳಿಕ ಶ್ರೀನಿವಾಸ್​ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ವೇದಾವತಿಯನ್ನು ಬಂಧಿಸಲಾಗಿದೆ.(ದಿಗ್ವಿಜಯ ನ್ಯೂಸ್​)
ನಾಳೆಯಿಂದ ಸಿಇಟಿ ಪರೀಕ್ಷೆ ಆರಂಭ | ವೃತ್ತಿಪರ ಕೋರ್ಸುಗಳಿಗೆ ಎಂದಿನಂತೆ ಭಾರಿ ಸ್ಪರ್ಧೆ

ಮದುವೆ ದಿನವೇ ವಿಷ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ ನೂತನ ದಂಪತಿ; ದುರದೃಷ್ಟವಶಾತ್ ವರ ಯಶಸ್ವಿ…

ನಾಳೆ ನೂತನ ಸಿಎಂ ಪ್ರಮಾಣವಚನ; ಬೇರೆ ರಾಜ್ಯಗಳ ಸಿಎಂಗಳಿಗೆ ಕಾಂಗ್ರೆಸ್ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 5 =
Remember me
