ಹುಬ್ಬಳ್ಳಿ:ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳಿಂದ ವಿದೇಶಿ ಯುವತಿಯೊಬ್ಬಳು ನಗರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಂಗತಿ ಬೆಳಕಿಗೆ ಬಂದಿದೆ.
ಆಸ್ಟ್ರೇಲಿಯಾ ನಿವಾಸಿ ಮೈಶಿಯಾನ್ ನಿಯಾಂಗ್ (30) ಯೋಗ ಮತ್ತು ಅಧ್ಯಾತ್ಮ ಸಾಧನೆಗಾಗಿ ಮೂರು ತಿಂಗಳ ಹಿಂದೆ ಹುಬ್ಬಳ್ಳಿಗೆ ಬಂದಿದ್ದಳು. ಲಾಕ್‌ಡೌನ್ ಹಿನ್ನೆಲೆಯಲ್ಲಿ ತವರಿಗೆ ಹೋಗಲಾಗದೇ ನಗರದಲ್ಲೇ ಉಳಿದಿದ್ದಳು. ಕೆಲ ದಿನಗಳ ಬಳಿಕ ಕೈಯಲ್ಲಿದ್ದ ಹಣ ಖಾಲಿಯಾಗಿ ಸಂಕಷ್ಟಕ್ಕೆ ಈಡಾಗಿದ್ದಳು. ನಗರದ ಹಳೇ ಬಸ್ ನಿಲ್ದಾಣದ ಎದುರಿನ ರೇಣುಕಾ ಲಾಡ್ಜ್‌ನಲ್ಲಿ ವಾಸ್ತವ್ಯ ಹೂಡಿದ್ದಳು.
ಇದನ್ನೂ ಓದಿನಿಗದಿತ ಅವಧಿಯಲ್ಲಿ ಕಾಮಗಾರಿ ಮುಗಿಸಿ
ಈಕೆ ಉತ್ತರ ಚೀನಾದಲ್ಲಿ ಬಳಸುವ ಮ್ಯಾಂಡರಿನ್ ಭಾಷೆ ಮಾತನಾಡುತ್ತಾಳೆ. ಆಂಗ್ಲ ಭಾಷೆಯೂ ಬರುವುದಿಲ್ಲ. ಹಾಗಾಗಿ, ಭಾಷಾ ಸಮಸ್ಯೆ ಉಂಟಾಗಿತ್ತು. ಮಾಧ್ಯಮ ಮತ್ತು ಕ್ಯಾಮರಾ ಕಂಡರೆ ತಪ್ಪಿಸಿಕೊಂಡು ಹೋಗುತ್ತಿದ್ದಳು.
ಈ ನಡುವೆ ವೀಸಾ ಅವಧಿಯೂ ಮುಗಿದು ಸಮಸ್ಯೆ ಉದ್ಭವಿಸಿತ್ತು. ಇದನ್ನು ಆಕೆ ಜಿಲ್ಲಾಧಿಕಾರಿ ಕಚೇರಿ ಗಮನಕ್ಕೂ ತಂದಿದ್ದಳು. ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಎಸ್‌ಪಿ ವರ್ತಿಕಾ ಕಟಿಯಾರ್ ಹಾಗೂ ಡಿಸಿಪಿ ಕೃಷ್ಣಕಾಂತ ಬಳಿ ಅಳಲು ತೋಡಿಕೊಂಡಿದ್ದಳು. ಯುವತಿಯ ವಿವರ ಪಡೆದ ಎಸ್‌ಪಿ, ಆಸ್ಟ್ರೇಲಿಯಾಕ್ಕೆ ತೆರಳಲು ವ್ಯವಸ್ಥೆ ಕಲ್ಪಿಸಿದ್ದಾರೆ.
ಇದನ್ನೂ ಓದಿಕ್ವಾರಂಟೈನ್​ ಕೇಂದ್ರದಲ್ಲಿ ಕಾಂಡೋಮ್ ರಾಶಿ!
ಹುಬ್ಬಳ್ಳಿಯಿಂದ ಬೆಂಗಳೂರುವರೆಗೆ ತೆರಳಲು ಕಾರು ಹಾಗೂ ಬೆಂಗಳೂರಿನಿಂದ ದೆಹಲಿಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ದೆಹಲಿಯಲ್ಲಿನ ಆಸ್ಟ್ರೇಲಿಯ ರಾಯಭಾರ ಕಚೇರಿಯಲ್ಲಿರುವ ತನ್ನ ಸ್ನೇಹಿತರೊಬ್ಬರನ್ನು ಸಂಪರ್ಕಿಸಿ ವೀಸಾ ಸಮಸ್ಯೆ ಬಗೆಹರಿಸಿ ಆಸ್ಟ್ರೇಲಿಯಾಕ್ಕೆ ತೆರಳಲು ಸಹಾಯ ಮಾಡುವಂತೆ ಎಸ್‌ಪಿ ವರ್ತಿಕಾ ಕೋರಿದ್ದಾರೆ.
ಮಾರ್ಚ್ ಆರಂಭದಲ್ಲಿ ಈ ಯುವತಿ ಲಾಡ್ಜ್ ಮಾಲೀಕರೊಂದಿಗೆ ಜಗಳ ಮಾಡಿಕೊಂಡು ಚನ್ನಮ್ಮ ವೃತ್ತದಲ್ಲಿ ಬಂದು ಪೊಲೀಸರ ಎದುರು ಕಣ್ಣೀರಿಟ್ಟಿದ್ದಳು. ವಿದೇಶಿ ಮಹಿಳೆಯಾದ್ದರಿಂದ ಲಾಡ್ಜ್ ಮಾಲೀಕರು ಹೊರಗೆ ಹಾಕಿದ್ದರು. ಆಕೆ ಮುಂಡಗೋಡ ಟಿಬೆಟಿಯನ್ ಶಿಬಿರದ ಸ್ನೇಹಿತನೊಂದಿಗೆ ದಿಕ್ಕು ತೋಚದೇ ಚನ್ನಮ್ಮ ವೃತ್ತದಲ್ಲಿ ಬಂದು ಕುಳಿತಿದ್ದಳು.
ಇದನ್ನೂ ಓದಿಕಲಬುರಗಿಯಲ್ಲಿ ಐದು ಪಾಸಿಟಿವ್ ಪ್ರಕರಣ
ಆಕೆಯ ಸಮಸ್ಯೆ ಆಲಿಸಿದ್ದ ಉಪ ನಗರ ಠಾಣೆ ಪೊಲೀಸರು ಹಳೇ ಬಸ್ ನಿಲ್ದಾಣದ ಎದುರಿನ ರೇಣುಕಾ ಲಾಡ್ಜ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು. ಲಾಡ್ಜ್ ಮಾಲೀಕ ಈವರೆಗೆ ವಸತಿ ವ್ಯವಸ್ಥೆ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೈಶಿಯಾನ್ ಸತತ ಮೂರು ತಿಂಗಳ ಕಾಲ ಒಂಟಿ ಜೀವನ ಮತ್ತು ನರಕಯಾತನೆ ಅನುಭವಿಸಿದ್ದಾಳೆ. ಹಣವೂ ಇಲ್ಲದೇ ಊಟಕ್ಕೂ ಸಮಸ್ಯೆ ಅನುಭವಿಸಿದ್ದಾಳೆ. ಹೀಗಿದ್ದರೂ ಕರೊನಾ ಪರಿಹಾರ ನಿಧಿಗೆ 5 ಸಾವಿರ ರೂ. ದೇಣಿಗೆ ನೀಡಿದ್ದಳು! ಆಕೆ ಹಣ್ಣು- ಹಂಪಲು ತಿಂದೇ ದಿನ ಕಳೆಯುತ್ತಿದ್ದಳು ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಮೈಶಿಯಾನ್ ನಿಯಾಂಗ್ ಮೂಲತಃ ದಕ್ಷಿಣ ಕೊರಿಯಾ ಪ್ರಜೆ. ಹುಟ್ಟಿದ್ದು, ಬೆಳೆದದ್ದು ಚೀನಾದಲ್ಲಿ. ಬಳಿಕ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಳು. ಯೋಗ ಕಲಿಕೆಗಾಗಿ ಭಾರತಕ್ಕೆ ಆಗಮಿಸಿದ್ದಳು. ಹುಬ್ಬಳ್ಳಿಯಿಂದ ಹೊರಡುವ ಮೊದಲು ಈ ಯುವತಿಯು ಎಸ್‌ಪಿ ವರ್ತಿಕಾ ಮತ್ತು ಡಿಸಿಪಿ ಕೃಷ್ಣಕಾಂತ ಅವರ ಕಾಲಿಗೆರಗಿದಳು!
ಗೋಮಾಂಸ, ಹಿಂದುದ್ವೇಷ… ಭಾರತೀಯರು ‘ಪಾತಾಳಲೋಕ’ ವಿರೋಧಿಸುತ್ತಿರುವುದಕ್ಕೆ ಇಲ್ಲಿವೆ ಕಾರಣಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − nine =
Remember me
