ಉಡುಪಿ:ಸಹೋದ್ಯೋಗಿಯ ಜತೆ ಅಕ್ಕ ಪರಾರಿಯಾದ ಸುದ್ದಿ ಕೇಳಿ ಅಸ್ವಸ್ಥಗೊಂಡ ತಂಗಿ ಸಾವಿಗೀಡಾಗಿರುವ ಘಟನೆ ಕಾರ್ಕಳದ ಮಾಳ ಗ್ರಾಮದ ಮಂಜಲ್ತಾರ್ ಎಂಬಲ್ಲಿ ಗುರುವಾರ ನಡೆದಿದೆ.
ಆಹಾರ ಉತ್ಪಾದನಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾಳ ನಿವಾಸಿ ಸುರಕ್ಷಿತ ಎಂಬಾಕೆ ಎರಡು ದಿನಗಳಿಂದ ಕಾಣೆಯಾಗಿದ್ದಳು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪಾಲಕರು ದೂರು ದಾಖಲಿಸಿದ್ದರು. ಇಂದು ತಂಗಿಯ ಮೊಬೈಲ್​ಗೆ ಕರೆ ಮಾಡಿದ್ದ ಸುರಕ್ಷಿತ, ನನಗೆ ಮನೆಯಲ್ಲಿ ಗೊತ್ತು ಮಾಡಿದ ಯುವಕನ ಜತೆ ಮದುವೆಯಾಗಲು ಇಷ್ಟವಿಲ್ಲ. ನಾನು ಪ್ರೀತಿಸಿದ ಯುವಕನ ಜತೆ ಹೋಗಿರುತ್ತೇನೆ. ಕಂಪನಿಯ ಸಹೋದ್ಯೋಗಿ ಭುವನ್ ಜತೆಗೆ ಇದ್ದೇನೆ. ನನ್ನನ್ನು ಹುಡುಕುವ ಪ್ರಯತ್ನ ಮಾಡಬೇಡಿ ಎಂದಿದ್ದಾಳೆ.
ಇದನ್ನೂ ಓದಿ:ಮಗು ಸಮೇತ ಅಪಾರ್ಟ್​ಮೆಂಟ್​ನಿಂದ ಜಿಗಿದು ಟೆಕ್ಕಿ ಆತ್ಮಹತ್ಯೆ: ಮರಣೋತ್ತರ ವರದಿಯಲ್ಲಿ ಸ್ಪೋಟಕ ಟ್ವಿಸ್ಟ್​!
ಇತ್ತ ಅಕ್ಕನ ಮಾತು ಕೇಳಿ ಆಘಾತಕ್ಕೆ ಒಳಗಾದ ತಂಗಿ ಶ್ವೇತಾ ಮೃತಪಟ್ಟಿದ್ದಾಳೆ. ಮೊದಲೇ ಮೂರ್ಛೆ ರೋಗದ ಸಮಸ್ಯೆಯಿಂದ ಬಳಲುತ್ತಿದ್ದ ಶ್ವೇತಾಳಿಗೆ ಅಕ್ಕನ ಹೇಳಿಕೆ ತೀವ್ರ ಆಘಾತವನ್ನುಂಟು ಮಾಡಿದೆ. ಅಸ್ವಸ್ಥಗೊಂಡಿದ್ದ ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾಳೆ.
ಅಂದಹಾಗೆ ಸುರಕ್ಷಿತಳಿಗೆ ಲಾಕ್​ಡೌನ್​ ಸಂದರ್ಭದಲ್ಲಿ ಮದುವೆ ನಿಶ್ಚಿತಾರ್ಥವಾಗಿತ್ತು. ಆದರೆ, ಸುರಕ್ಷಿತ ತನ್ನ ಸಹೋದ್ಯೋಗಿ ಅಸ್ಸಾಂ ಮೂಲದ ಭುವನ್​ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇದೀಗ ಇಬ್ಬರು ಪರಾರಿಯಾಗಿದ್ದರೆ, ತಂಗಿ ಶ್ವೇತಾ ಅಕ್ಕನ ಸುದ್ದಿ ಕೇಳಿ ಮೃತಪಟ್ಟಿದ್ದಾಳೆ. ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಮಧ್ಯ ವಯಸ್ಕನ ಜತೆ ಬಾಲಕಿ ಮದ್ವೆ: ವೈರಲ್​ ಫೋಟೋ ಹಿಂದಿದೆ ಭಯಾನಕ ಸಂಚು, ಸತ್ಯಾಂಶ ಬಹಿರಂಗ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 2 =
Remember me
