ಮಾಗಡಿ:ಪ್ರೀತಿಯ ವಿಚಾರವಾಗಿ ಯುವತಿಯ ಸಂಬಂಧಿಕರು ಆಕೆಯ ಪ್ರಿಯಕರನನ್ನು ಸಂಬಂಧಿ ಎದುರೇ ಮಂಗಳವಾರ ಹತ್ಯೆ ಮಾಡಿದ್ದಾರೆ.
ನೆಲಮಂಗಲದ ಬಸವನಹಳ್ಳಿ ನಿವಾಸಿ ಲಕ್ಷ್ಮೀಪತಿ (24) ಮೃತ. ಈತನ ಪ್ರೇಯಸಿ ಸಂಬಂಧಿ ಗಳಾದ ನಿಜಾಮುದ್ದೀನ್ ಮತ್ತು ಸಿಕಂದರ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ. ಲಕ್ಷ್ಮೀಪತಿ ಹಾಗೂ ನೆಲಮಂಗಲ ಬಳಿಯ ಇಸ್ಲಾಂಪುರ ಗ್ರಾಮದ ಯುವತಿ 3 ವರ್ಷಗಳಿಂದ ಗಾರ್ವೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ಯುವತಿ ಮನೆಯವರ ವಿರೋಧವಿತ್ತು. ಲಕ್ಷ್ಮೀಪತಿಗೆ ಯುವತಿಯಿಂದ ಕರೆ ಮಾಡಿಸಿದ ಸಂಬಂಧಿಗಳು ಮದುವೆ ವಿಷಯ ಮಾತನಾಡಲು ಸೋಲೂರು ಬಳಿ ಬರುವಂತೆ ತಿಳಿಸಿದ್ದಾರೆ. ನಟರಾಜ್ ಎಂಬುವರ ಜತೆ ಲಕ್ಷ್ಮೀಪತಿ ಹೋಗಿದ್ದಾನೆ.
ಕಂಕೇನಹಳ್ಳಿ ಲಾಯಾ ದರ್ಗಾ ಬಳಿ ಲಕ್ಷ್ಮೀಪತಿಯ ಕೈಕಾಲು ಕಟ್ಟಿ ಆತನ ಸೊಂಟದಲ್ಲಿದ್ದ ಬೆಲ್ಟ್ ತೆಗೆದು ಕುತ್ತಿಗೆಗೆ ಬಿಗಿದು, ಮದ್ಯದ ಬಾಟಲಿಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಈ ವಿಚಾರವನ್ನು ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ನಟರಾಜ್​ಗೆ ಬೆದರಿಸಿ ಪರಾರಿಯಾಗಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
