ಬೆಂಗಳೂರು:ಒಂದು ಸಾವಿನ ಕುರಿತಂತೆ ಪೊಲೀಸರು ಆರಂಭಿಸಿದ ತನಿಖೆ ಈಗ ಮತ್ತೊಂದು ಸಾವಿನ ಹಂತಕ್ಕೆ ಬಂದು ತಲುಪಿದೆ. ಯುವತಿಯೊಬ್ಬಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆಂದು ಕರೆಸಿದ್ದ ಯುವಕ ಠಾಣೆ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆ ಹಿಂಭಾಗ ಈ ಪ್ರಕರಣ ನಡೆದಿದೆ. ನಂದಕುಮಾರ್ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡವ. ಜು. 16ರಂದು ಅಕ್ಷಯ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈತನನ್ನು ವಿಚಾರಣೆಗೆ ಕರೆಸಿದ್ದರು.
ಇದನ್ನೂ ಓದಿ:ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸಿಎಂ-ಡಿಸಿಎಂ, ಸಚಿವರು ಸಂಸದರ ಶುಭಾಶಯ: ಬೆಂಗಳೂರಲ್ಲಿ 23ರಂದು ಆಚರಣೆ
ಅಕ್ಷಯ ಪಾಲಕರು ನಂದಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಈತನನ್ನು ವಿಚಾರಣೆಗೆ ಕರೆಸಿದ್ದರು. ಪೊಲೀಸರು ಕೊಟ್ಟ ನೋಟಿಸ್​​ನಂತೆ ಠಾಣೆಗೆ ಬಂದ ನಂದಕುಮಾರ್, ವಿಚಾರಣೆ ಎದುರಿಸಿದ ಬಳಿಕ ಠಾಣೆ ಹಿಂಭಾಗಕ್ಕೆ ಹೋಗಿ ಶೂ ಲೇಸ್​ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ಕುರಿತಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ತಂದೆ-ತಾಯಿಯಿಂದ ದೂರ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆ ಮಾಡಿಸಲು ಮುಂದಾದ ಪತಿ: ಆರು ತಿಂಗಳ ಬಳಿಕ ಆಗಿದ್ದೇನು?

ಎದೆಹಾಲಿನಿಂದಲೇ ಗಿನ್ನೆಸ್ ದಾಖಲೆ ಮಾಡಿದ ಮಹಾತಾಯಿ!; ಇಷ್ಟೊಂದು ಎದೆಹಾಲು ಇದುವರೆಗೆ ಯಾರೂ ಕೊಟ್ಟಿಲ್ಲ!

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:one × four =
Remember me
