ಬೆಂಗಳೂರು:ನಾಗರಪಂಚಮಿಯ ದಿನದಂದು ಅಲ್ಲಲ್ಲಿ ನಾಗರಹಾವು ದರ್ಶನವಾಗುವುದು ಸಹಜ. ಅಂಥ ಕೆಲವು ಸನ್ನಿವೇಶ ಪ್ರತಿ ನಾಗರಪಂಚಮಿಯಂದು ಕಾಣಸಿಗುತ್ತದೆ. ಪಂಚಮಿಯ ಮುನ್ನ ದಿನವಾದ ನಿನ್ನೆ ವಿಧಾನಸೌಧದಲ್ಲೇ ನಾಗರಹಾವು ಕಾಣಿಸಿಕೊಂಡಿತ್ತು.
ಹೀಗೆ ನಾಗರಪಂಚಮಿ ದಿನ ಇಲ್ಲೊಂದು ಕಡೆ ಕೂಡ ನಾಗರಹಾವು ಕಾಣಿಸಿಕೊಂಡಿದೆ. ಅಷ್ಟೇ ಆಗಿದ್ದರೆ ಈ ವಿಷಯ ಅಂಥ ಗಮನ ಸೆಳೆದಿರುತ್ತಿರಲಿಲ್ಲ. ಆದರೆ ಇಲ್ಲೊಂದಷ್ಟು ಯುವಕರು ಈ ನಾಗರಹಾವಿನ ಮುಂದೆ ಕೇಕ್ ಇಟ್ಟು ಹ್ಯಾಪಿ ಬರ್ತ್​ಡೇ ಎಂದಿದ್ದಾರೆ. ಈ ಮೂಲಕ ಪಂಚಮಿಯನ್ನೂ ಬರ್ತ್​ಡೇ ರೀತಿ ಆಚರಿಸಿದ್ದಾರೆ.
ಇದನ್ನೂ ಓದಿ:ಪತಿ ಯಾವುದೇ ಕ್ಷಣದಲ್ಲೂ ನಮ್ಮನ್ನು ಕೊಲ್ಲಬಹುದು: ಮಕ್ಕಳಿಬ್ಬರ ಸಹಿತ ವಿಡಿಯೋ ಮಾಡಿ ಸಹಾಯ ಕೇಳಿದ ಪತ್ನಿ
ಬಯಲಿನಂಥ ಜಾಗದಲ್ಲಿ ಕಾಣಿಸಿಕೊಂಡ ನಾಗರಹಾವಿನ ಮುಂದೆ ಬರ್ತ್​ಡೇ ಕೇಕ್ ಇಟ್ಟ ಇವರು, ‘ನಗುತ ನಗುತ ಬಾಳು ನೀನು ನೂರು ವರುಷ..’ ಎಂಬ ಹಾಡನ್ನು ಹೇಳಿದ್ದು, ಅದರಲ್ಲೊಬ್ಬ ಹಾವಿನ ಹೆಡೆ ಮೇಲೆ ಕೈ ಇರಿಸಿ ಕೆಳಕ್ಕೆ ಅದುಮಿ ಕೇಕ್ ತಿನ್ನಿಸಲು ಯತ್ನಿಸಿದ್ದೂ ಚಿತ್ರೀಕರಣಗೊಂಡಿದೆ. ಈ ಕುರಿತ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ಘಟನೆ ಎಲ್ಲಿಯದ್ದು ಎನ್ನುವ ಕುರಿತು ಖಚಿತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.
ನಾಗರಹಾವಿನ ಮುಂದೆ ಕೇಕ್​ ಇಟ್ಟು ಬರ್ತ್​ಡೇ ರೀತಿ ಪಂಚಮಿ ಆಚರಣೆ !ಯುವಕರ ಗುಂಪಿನ ಈ ವರ್ತನೆಯ ವಿಡಿಯೋ ವೈರಲ್ವಿವರಗಳಿಗೆhttps://t.co/YaFZZchMRhನೋಡಿ..pic.twitter.com/qlmAR00Kcp
— Vijayavani Digital (@Vijayavani_Digi)August 21, 2023

ಚಂದ್ರಯಾನ-3: ತಿರುಪತಿಯಲ್ಲಷ್ಟೇ ಅಲ್ಲ, ಕುಕ್ಕೆ ಸುಬ್ರಹ್ಮಣ್ಯದಲ್ಲೂ ಪೂಜೆ!

ಆಣೆ ಮಾಡುವ ಹಂತಕ್ಕೆ ತಲುಪಿತು ಸೌಜನ್ಯಾ ಪ್ರಕರಣ; ಇಬ್ಬರ ಮಧ್ಯೆ ಆರೋಪ, ದೇವರ ಮುಂದೆ ಪ್ರಮಾಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + eight =
Remember me
