ತುಮಕೂರು:ಮೊಬೈಲ್​ ಚಾರ್ಜರ್​ ಕೊಡಲಿಲ್ಲವೆಂಬ ಕಾರಣಕ್ಕೆ ಮನನೊಂದು ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕುರು ಜಿಲ್ಲೆ ಪಾವಗಢ ತಾಲ್ಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಸಿಂಗರೆಡ್ಡಿ ಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಆಶಾ ಕಾರ್ಯಕರ್ತೆ ವರಲಕ್ಷ್ಮಮ್ಮ ಎಂಬುವವರ ಪುತ್ರ ನಿಖಿಲ್ ಗೌಡ (18) ಆತ್ಮಹತ್ಯೆಗೆ ಶರಣಾದ ಯುವಕ ಎಂದು ತಿಳಿದು ಬಂದಿದ್ದು, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಭಾನುವಾರ ರಜೆ ಇದ್ದ ಕಾರಣ ನಿಖಿಲ್​ ತನ್ನ ತಾಯಿಯ ಜೊತೆ ಮಾತನಾಡುವ ವೇಳೆ ನನಗೆ ಏನು ಕೊಡಿಸಿಲ್ಲ ಎಂದು ಗಲಾಟೆ ಮಾಡಿದ್ದಾನೆ. ಬಳಿಕ ಮೊಬೈಲ್​ ಚಾರ್ಜರ್​ ಕೊಡುವಂತೆ ಹೇಳಿದ್ದಾನೆ. ಆಗ ಅವರ ತಾಯಿ ನನ್ನ ಬಳಿ ಚಾರ್ಜರ್ ಇಲ್ಲವೆಂದು ಹೇಳಿ ನೆರೆ ಮನೆಗೆ ಹೂ ಕಟ್ಟಲೆಂದು ಹೋಗಿದ್ದಾರೆ.
ಇದನ್ನೂ ಓದಿ:ಸಹಪಾಠಿಯ ನೀರಿನ ಬಾಟಲಿಯಲ್ಲಿ ಮೂತ್ರ ಬೆರೆಸಿ ಬ್ಯಾಗಿನಲ್ಲಿ ಲವ್​ ಲೆಟರ್​ ಇಟ್ಟ ಕಿಡಿಗೇಡಿ; ವ್ಯಾಪಕ ಪ್ರತಿಭಟನೆ
ಸ್ವಲ್ಪ ಹೊತ್ತಿನ ಬಳಿಕ ಬಂದು ಮನೆಯ ಬಾಗಿಲು ಬಡಿದಾಗ ಒಳಗಿದ್ದ ನಿಖಿಲ್​ ಪ್ರತಿಕ್ರಿಯಿಸದೆ ಇದ್ದಾಗ ಗಾಬರಿಗೊಂಡ ಅವರ ತಾಯಿ ನೆರೆಹೊರೆಯವರನ್ನು ಕರೆದಿದ್ದಾರೆ. ಅವರ ಮನೆಯ ಬಾಗಿಲು ಮುರಿದು ಪರಿಶೀಲಿಸಿದಾಗ ನಿಖಿಲ್​ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ವೈ.ಎನ್​.ಹೊಸಕೋಟೆ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮೃತ ನಿಖಿಲ್​ ಗೌಡನ ತಾಯಿ ವರಲಕ್ಷ್ಮಮ್ಮನವರ ಹೇಳಿಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
