ಬೆಂಗಳೂರು:ಕೇವಲ ಒಂದು ಸಣ್ಣ ಆ್ಯಕ್ಸಿಡೆಂಟ್​ನಿಂದ ಯುವಕನ ಮೆದುಳು ನಿಷ್ಕ್ರಿಯಗೊಂಡು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇದನ್ನೂ ಓದಿ:ಥಮ್ಸಪ್​ ಬಾಟಲ್​ನಲ್ಲಿ ಮದ್ಯ ತುಂಬಿ ವರನಿಗೆ ಕುಡಿಸಿದ ಸ್ನೇಹಿತರು! ಮುಂದೇನಾಯ್ತು ನೀವೇ ನೋಡಿ….
ರಾಜಾಜಿನಗರ ಕ್ಷೇತ್ರದ ಬಸವೇಶ್ವರ ನಗರದ ಭೋವಿ ಕಾಲೋನಿಯ ರೋಹಿತ್(26) ಮೃತ ದುರ್ದೈವಿಯಾಗಿದ್ದು, ಒಂದು ವಾರ ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಟ ಮಾಡುತ್ತಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ನಿನ್ನೆ ಸಾಯಂಕಾಲ ಬ್ರೈನ್ ಡೆಡ್ ಎಂದು ವೈದ್ಯರು ಘೋಷಿಸಿದ್ದಾರೆ.
ಇನ್ನು, ಯುವಕ ಮೆದುಳು ನಿಷ್ಕ್ರಿಯಗೊಂಡು ಸಾವಿನ ಮನೆಯ ಕದ ತಟ್ಟಿದ್ದು, ಆತನ ಕುಟುಂಬಸ್ಥರು ಸಾರ್ಥಕತೆ ಮೆರೆದು ಯುವಕನ ಕಣ್ಣು, ಕಿಡ್ನಿ, ಲಿವರ್, ಲಂಗ್ಸ್ ಹಾಗೂ ಹೃದಯವನ್ನು ದಾನ ಮಾಡಿದ್ದಾರೆ. ಅಂಗಾಂಗಗಳ ದಾನದ ಮೂಲಕ ಮೃತ ರೋಹಿತ್ ಇನ್ನೊಬ್ಬರ ಬಾಳಿಗೆ ಬೆಳಕಾಗಿದ್ದಾನೆ.
ಘಟನೆ ಹಿನ್ನೆಲೆ:ಕಳೆದ ಭಾನುವಾರದಂದು ಎರಡು ಬೈಕ್​ಗಳ ನಡುವೆ ಆ್ಯಕ್ಸಿಡೆಂಟ್ ಸಂಭವಿಸಿತ್ತು. ತದನಂತರ ರೋಹಿತ್​ನನ್ನು ವಿಜಯನಗರ ಆಸ್ಪತ್ರೆಗೆ ದಾಖಲಿಸಿ 8 ದಿನಗಳ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಆದರೆ ವಿಜಯನಗರ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಾಗಿ ಯುವಕನನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಬ್ರೈನ್ ಡೆಡ್ ಆಗಿದೆ ಎಂದು ಘೋಷಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − five =
Remember me
