ಚಿಕ್ಕೋಡಿ:ನಿನ್ನೆ (ಮೇ. 6) ಬಿಜೆಪಿ ಸಮಾವೇಶ ಮುಗಿಸಿ ಮನೆಗೆ ಮರಳುವಾಗ ಸಂಭವಿಸಿದ ಅಪಘಾತದಲ್ಲಿ ಯುವಕನೊರ್ವ ಮೃತಪಟ್ಟಿದ್ದು, 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಶನಿವಾರ (ಮೇ.6) ಅಥಣಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹೇಶ್​ ಕುಮಟಳ್ಳಿ ಪರ ಅಮಿತ್​ ಷಾ ಪ್ರಚಾರಕ್ಕೆಂದು ಅಥಣಿಗೆ ಆಗಮಿಸಿದ್ದರು. ಸಮಾವೇಶಕ್ಕೆ ಕೊಟ್ಟಲಗಿಯಿಂದ ಬಂದಿದ್ದ ಕೆಲವರು ಅಥಣಿಯಿಂದ ವಾಪಸ್​ ಮನೆಗೆ ಕ್ರೂಸರ್‌ನಲ್ಲಿ ತೆರಳುವಾಗ ಕೊಟ್ಟಲಗಿ – ಕಕಮರಿ ಮಧ್ಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕ್ರೂಸರ್ ಪಲ್ಟಿ ಹೊಡೆದಿದೆ.
ಇದನ್ನೂ ಓದಿ:ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 488 ಅಂಕ ಗಳಿಸಿದ 6ನೇ ತರಗತಿ ವಿದ್ಯಾರ್ಥಿನಿ!
ಅಪಘಾತದಲ್ಲಿ ಕೊಟ್ಟಲಗಿ ಗ್ರಾಮದ ಶಿವಪುತ್ರ ರಾಮು ಬಂಡರಬಟ್ಟಿ (20) ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಗಾಯಾಳುಗಳಾದ ಬಸು ಸಿದ್ದಪ್ಪ ಗುಂಡಗೇರಿ, ದುಂಡಪ್ಪ ಗುಂಡಗೇರಿ, ರಾಜು ಸಿದ್ದರಾಯ ಬಂಡರಬೇಟಿ, ಅಭಿಷೇಕ ಸಿಂಧೂರ ಎಂಬುವರನ್ನು ಅಥಣಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಐಗಳಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.(ದಿಗ್ವಿಜಯ ನ್ಯೂಸ್​)
ವಯಸ್ಸಾಯ್ತು ಮದುವೆ ಆಗಿಲ್ಲ ಅಂತ ಮನನೊಂದು ಪ್ರಾಣಬಿಟ್ಟ ಲೇಡಿ ಕಾನ್ಸ್​ಟೆಬಲ್​

‘ಚಾಂಪ್​​’ನನ್ನು ಕಳೆದುಕೊಂಡ ಬೇಸರದಲ್ಲಿ ರಮ್ಯಾ; ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಗೈರು

ಒಂದೇ ಸಮಯದಲ್ಲಿ ಗರ್ಭಿಣಿಯರಾದ ನಾಲ್ವರು ಸಹೋದರಿಯರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + four =
Remember me
