ಚಿಕ್ಕಬಳ್ಳಾಪುರ:ಹುಡುಗಾಟಿಕೆಯಿಂದಲೋ ಅಥವಾ ಇನ್ಯಾರನ್ನೋ ಮೆಚ್ಚಿಸಲೋ ನಾನಾ ಸಾಹಸ ಮಾಡುವ ಕೆಲವು ಯುವಕರ ಸಾಲಿಗೆ ಈತನೂ ಸೇರಿದ್ದಾನೆ. ಮಾತ್ರವಲ್ಲ, ಈಗ ನೋವನುಭವಿಸುವ ಜತೆಗೆ ನಗೆಪಾಟಲಿಗೂ ಒಳಗಾಗುವಂಥ ಪರಿಸ್ಥಿತಿಗೆ ತಲುಪಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ಯುವಕನೊಬ್ಬ ಇಂಥ ಹುಚ್ಚಾಟಕ್ಕೆ ಮುಂದಾಗಿ ಫಜೀತಿಗೆ ಸಿಲುಕಿದ್ದಾನೆ. ಆತ ಸಾಹಸ ಮಾಡಲು ಹೋದ ಜಾಗ ಬೇರಾವುದೂ ಅಲ್ಲ, ಜಲಾಶಯ. ಹೌದು.. ಶ್ರೀನಿವಾಸಸಾಗರ ಜಲಾಶಯದಲ್ಲಿ ಸಾಹಸ ಮಾಡಲು ಹೋಗಿ ಈತ ಎಡವಟ್ಟು ಮಾಡಿಕೊಂಡಿದ್ದಾನೆ.
ಈತ ಜಲಾಶಯವನ್ನು ಏರಲು ಹೋಗಿ ಅರ್ಧದವರೆಗೆ ತಲುಪಿದ್ದ. ಬಳಿಕ ಅಲ್ಲಿಂದ ದಿಢೀರ್ ಜಾರಿ ಬಿದ್ದಿದ್ದಾನೆ. ಹೀಗೆ ಈತ ಜಾರಿ ಬೀಳುವ ದೃಶ್ಯ ಸಾರ್ವಜನಿಕರ ಮೊಬೈಲ್​ಫೋನ್​ನಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಲಾರಂಭಿಸಿದೆ. ಯುವಕನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ‌ ನಡೆದಿದೆ. ಯುವಕನ ಹೆಸರು ಇತ್ಯಾದಿ ಮಾಹಿತಿ ಇನ್ನಷ್ಟೇ ಬಹಿರಂಗಗೊಳ್ಳಬೇಕಿದೆ.
ಜಲಾಶಯದಲ್ಲಿ ಸಾಹಸ ಮೆರೆಯಲು ಹೋದ, ಜಾರಿ ಬಿದ್ದು ಆಸ್ಪತ್ರೆ ಸೇರಿದ…ವಿವರಗಳಿಗೆhttps://t.co/YaFZZchf1Jನೋಡಿ.pic.twitter.com/p2xWXxI6WY— Vijayavani (@VVani4U)May 22, 2022
ಜಲಾಶಯದಲ್ಲಿ ಸಾಹಸ ಮೆರೆಯಲು ಹೋದ, ಜಾರಿ ಬಿದ್ದು ಆಸ್ಪತ್ರೆ ಸೇರಿದ…ವಿವರಗಳಿಗೆhttps://t.co/YaFZZchf1Jನೋಡಿ.pic.twitter.com/p2xWXxI6WY
ಕಾರು-ಬೈಕ್ ಭೀಕರ ಅಪಘಾತ; ಅಪ್ಪಳಿಸಿದ ಹೊಡೆತಕ್ಕೆ ಕಾರಿನ ಟಾಪ್​ಗೆ ನೆಗೆದುಬಿದ್ದ ಶವ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × three =
Remember me
