ಕಲಬುರಗಿ:ಯುವಕನೊಬ್ಬನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಇರಿದಿದ್ದಲ್ಲದೆ, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊನೆಗೆ ಶವವನ್ನು ಗುಂಡಿಯೊಂದಕ್ಕೆ ಹಾಕಿ ಹೋಗಿದ್ದಾರೆ. ಕಲಬುರಗಿ ನಗರದ ದುಬೈ ಕಾಲನಿ ನಿವಾಸಿ ವೀರೇಶ್​ ಬೀಮಳ್ಳಿ (28) ಕೊಲೆಯಾದ ಯುವಕ.
ನಗರದ ಸೂಪರ್ ಮಾರ್ಕೆಟ್​​ನ ಬಾಂಡೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೀರೇಶ್​, ನಿನ್ನೆ ಮುಂಜಾನೆ ಎಂದಿನಂತೆ ಕೆಲಸಕ್ಕೆ ಹೋಗಿದ್ದ. ಆದರೆ ಸಂಜೆ ಮನೆಗೆ ಮರಳಿರಲಿಲ್ಲ. ನಿನ್ನೆ ಮಧ್ಯಾಹ್ನದಿಂದಲೇ ಆತ ನಾಪತ್ತೆಯಾಗಿದ್ದ ಎನ್ನಲಾಗಿದ್ದು, ಚೌಕ್ ಠಾಣಾ ಪೊಲೀಸರಿಗೆ ಹೆತ್ತವರು ಮಾಹಿತಿ ನೀಡಿದ್ದರು. ಆದರೆ ನಿನ್ನೆಯಿಂದ ಕಾಣೆಯಾಗಿದ್ದ ವೀರೇಶ್​, ಇಂದು ಶವವಾಗಿದ್ದು, ಕಲಬುರಗಿಯ ಸಿಂದಗಿ ಗ್ರಾಮದ ಹೊರವಲಯದ ಗುಂಡಿಯೊಂದರಲ್ಲಿ ಮೃತದೇಹ ಪತ್ತೆಯಾಗಿದೆ.
ನಿನ್ನೆ ಮಧ್ಯಾಹ್ನವೇ ಮೂವರು ಅಂಗಡಿಗೆ ಬಂದು ಆತನನ್ನು ಕರೆದೊಯ್ದಿದ್ದರು. ಬಳಿಕ ಆತನಿಗೆ ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ, ನಂತರ ಶವವನ್ನು ಗುಂಡಿಗೆ ಎಸೆದಿದ್ದರು. ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಕಲಬುರಗಿ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ತನ್ನನ್ನು ಜೀವಂತ ಹೂತು ಬಿಡಿ ಎಂದು ಮನೆಯವರಿಂದಲೇ ಮಣ್ಣು ಹಾಕಿಸಿಕೊಂಡ ಮಹಿಳೆ!; ಎಲ್ಲ ಶಿವನನ್ನು ಮೆಚ್ಚಿಸಲು…

ಈ ಥರ ಸಾಯಿಸೋ ಪ್ರಯತ್ನ ಇದುವರೆಗೂ ಯಾರೂ ಮಾಡಿರ್ಲಿಲ್ಲ! ಖತರ್ನಾಕ್​ ಸೇಲ್ಸ್​ಮ್ಯಾನ್​ ಕೊನೆಗೂ ಫೇಲಾದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
