ಬೆಳಗಾವಿ:ಲಾಕ್​ಡೌನ್​ ಸಮಯದಲ್ಲಿ ಏನಾದರೂ ನೆಪವಿಟ್ಟು ಪೊಲೀಸರಿಗೆ ಸುಳ್ಳುಸುಳ್ಳೇ ಹೇಳಿ ವಾಹನದಲ್ಲಿ ಓಡಾಡುವವರಿಗೇನೂ ಕಡಿಮೆ ಇಲ್ಲ. ‘ಉದರನಿಮಿತ್ತಂ ಬಹುಕೃತವೇಷಂ’ ಎನ್ನುವ ಹಾಗೆ ಲಾಕ್​ಡೌನ್ ಅವಧಿಯಲ್ಲಿ ಹೊರಗಡೆ ವಾಹನದಲ್ಲಿ ನಾನಾ ಸೋಗಿನಲ್ಲಿ ಸುತ್ತಾಡುವವರು ಪೊಲೀಸರಿಗೆ ಕೈಗೆ ಸಿಕ್ಕಿಬೀಳುತ್ತಿದ್ದಾರೆ. ಅಂಥದ್ದೇ ಒಂದು ಸಾಹಸ ಮಾಡಲು ಹೋಗಿ ಇಲ್ಲೊಬ್ಬ ಯುವಕ ಕೊನೆಗೆ ಮನೆಗೆ ನಡೆದುಕೊಂಡೇ ತೆರಳುವಂತಾಗಿದೆ.
ವೈದ್ಯರ ಏಪ್ರನ್ ಧರಿಸಿ ಹೋದರೆ ಡಾಕ್ಟರ್ ಅಥವಾ ವೈದ್ಯಕೀಯ ಸಿಬ್ಬಂದಿ ಎಂದುಕೊಂಡು ಪೊಲೀಸರು ಸುಮ್ಮನೆ ಬಿಡುತ್ತಾರೆ ಎಂದುಕೊಂಡು ಈ ಯುವಕ ಏಪ್ರನ್ ಧರಿಸಿ, ತಾಯಿಯನ್ನು ಕೂರಿಸಿಕೊಂಡು ದ್ವಿಚಕ್ರವಾಹನದಲ್ಲಿ ಹೋಗಿದ್ದಾನೆ. ಆದರೆ ರಸ್ತೆ ಮಧ್ಯೆ ತಪಾಸಣೆ ಮಾಡಿದ ಪೊಲೀಸರಿಗೆ ಸೂಕ್ತ ದಾಖಲೆ/ಗುರುತಿನ ಚೀಟಿ ಕೊಡಲಾಗದೆ ಸಿಕ್ಕಿಬಿದ್ದಿದ್ದಾನೆ. ಬೆಳಗಾವಿಯಲ್ಲಿ ಇಂಥದ್ದೊಂದು ಘಟನೆ ನಡೆದಿದೆ.
ತಾಯಿಯನ್ನು ಕೂರಿಸಿಕೊಂಡು ತರಕಾರಿಗೆ ಬಂದು ಸಿಕ್ಕಿ ಹಾಕಿಕೊಂಡ ಈತ, ನಮ್ಮ ಅಣ್ಣನ ಏಪ್ರನ್​ ಇದು, ಮರೆತು ಹಾಕಿಕೊಂಡು ಬಂದಿದ್ದೇನೆ, ಬಿಟ್ಟು ಬಿಡಿ ಸರ್ ಎಂದು ಗೋಗರೆದಿದ್ದಾನೆ. ಆಯ್ತು ಪರವಾಗಿಲ್ಲ ಎಂದ ಪೊಲೀಸರು ಮನೆಗೆ ಹೋಗಿ ಐಡಿ ತೆಗೆದುಕೊಂಡು ಬಾ ಎಂದು ಗಾಡಿ ಜಪ್ತಿ ಮಾಡಿಕೊಂಡಿದ್ದಾರೆ. ರಸ್ತೆಬದಿಯಲ್ಲಿ ಎಲ್ಲರೆದುರು ನಗೆಪಾಟಲಿಗೀಡಾದ ಈ ಯುವಕ ಕೊನೆಗೆ ತರಕಾರಿ ಹೊತ್ತುಕೊಂಡು ನಡೆದೇ ಮನೆ ಕಡೆಗೆ ಸಾಗುವಂತಾಯಿತು.

ಸೋಂಕಿತ ತಾಯಿ ತೀರಿಹೋದ ಮೂರೇ ದಿನಕ್ಕೆ ಅಣ್ಣ-ತಮ್ಮನೂ ಕರೊನಾಗೆ ಬಲಿ; ಅಮ್ಮಂದಿರ ದಿನವೇ ಇಬ್ಬರೂ ಏಕಕಾಲಕ್ಕೇ ನಿಧನ!

‘ತಂದೆ ಕಾಣೆಯಾಗಿದ್ದಾರೆ, ಹುಡುಕಿಕೊಡಿ ಪ್ಲೀಸ್​.. ಲಾಕ್​ಡೌನ್​ನಿಂದ ಹೊರಗೆ ಹೋಗಲಾಗುತ್ತಿಲ್ಲ, ಸಹಾಯ ಮಾಡಿ: ಪುತ್ರನ ವಿನಂತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 13 =
Remember me
