ನವದೆಹಲಿ:ಜನಪ್ರಿಯ ವಿಡಿಯೋ ಸ್ಟ್ರೀಮಿಂಗ್ ತಾಣಗಳಲ್ಲಿ ಒಂದಾಗಿರುವ ಯೂಟ್ಯೂಬ್​ನಲ್ಲಿ ಇಂದು ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಎಲ್ಲೆಡೆ ಯೂಟ್ಯೂಬ್​​ ಸರ್ವರ್​ ಡೌನ್​​​ ಆಗಿದ್ದು, ಬಳಕೆದಾರರು ಹಾಗೂ ಕಂಟೆಂಟ್​​ ಕ್ರಿಯೆಟರ್​ಗಳಿಗೆ​ ಅಡಚಣೆ ಉಂಟಾಗಿದೆ.
ಇಂದು ಜಗತ್ತಿನಾದ್ಯಂತ YouTube ಬಳಕೆದಾರರು ಹಾಗೂ ಕಂಟೆಂಟ್​​ ಕ್ರಿಯೆಟರ್​ಗಳಿಗೆ​ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ. ಬಳಕೆದಾರರು ಯೂಟ್ಯೂಬ್​ಗೆ ಪ್ರವೇಶಿಸಲು, ವಿಡಿಯೋಗಳನ್ನು ವೀಕ್ಷಿಸಲು ಮತ್ತು ವಿಷಯವನ್ನು ಅಪ್‌ಲೋಡ್ ಮಾಡುವಲ್ಲಿ ಕೆಲವು ಸಮಯ ಸಮಸ್ಯೆಯನ್ನು ಎದುರಿಸಿದ್ದಾರೆ.
ಯೂಟ್ಯೂಬ್​ ಸರ್ವರ್​ ಡೌನ್​​​ ಆಗಿರುವ ಕುರಿತಾಗಿ ನೆಟ್ಟಿಗರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನನ್ನ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನಗೆ ವಿಡಿಯೋಗಳನ್ನು ವೀಕ್ಷಿಸಲು ಆಗುತ್ತಿಲ್ಲ ಎಂದು ಟ್ವೀಟ್​​ ಮಾಡಿದ್ದಾರೆ. ಈ ಕುರಿತಾಗಿ ಯೂಟ್ಯೂಬ್​ ಕಂಪನಿಯು ಟ್ವೀಟ್​​ ಮಾಡಿ ಸ್ಪಷ್ಟನೆ ನೀಡಿದೆ.
creators – we’re aware that some of you are experiencing difficulties uploading or processing your videos atm. our team is currently working on the fix – you can follow this thread for more updates:https://t.co/7JMlSWJJRl
— TeamYouTube (@TeamYouTube)May 18, 2023

ಯೂಟ್ಯೂಬ್ ಅಧಿಕೃತ ಖಾತೆ ಮೂಲಕವಾಗಿ ಕಂಪನಿ, “ಯೂಟ್ಯೂಬ್​ ಬಳಕೆದಾರರು ಹಾಗೂ ಕಂಟೆಂಟ್​​ ಕ್ರಿಯೆಟರ್​ಗಳು ವಿಡಿಯೋ ಅಪ್‌ಲೋಡ್ ಮಾಡಲು ಅಥವಾ ಯೂಟ್ಯೂಬ್​​ ವೀಕ್ಷಿಸಲು ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ. ನಮ್ಮ ತಂಡವು ಪ್ರಸ್ತುತ ಸರಿಪಡಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚಿನ ಮಾಹಿತಿಗಾಗಿ ನೀವು ಈ ಲಿಂಕ್​​ ಅನುಸರಿಸಬಹುದು” ಎಂದು ಹೇಳಿದೆ.
ದಯವಿಟ್ಟು ನಮ್ಮನ್ನು ಕ್ಷಮಿಸಿ..ಪಕ್ಷ ಸೋತು ಅಪಾಯಕ್ಕೆ ಸಿಲುಕಿರುವುದು ಕಾರ್ಯಕರ್ತರೇ ಹೊರತು ಯಾವ ನಾಯಕನೂ ಅಲ್ಲ: ಪ್ರತಾಪ್ ಸಿಂಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 2 =
Remember me
