ಜಗತ್ತಿನಲ್ಲಿ ಶಿಕ್ಷಕರಿಗಿಂತ ಪವಿತ್ರ ವೃತ್ತಿ ಬೇರೊಂದಿಲ್ಲ. ತಾವು ಕಷ್ಟ-ಕಾರ್ಪಣ್ಯಗಳ ಬೆಂಕಿಯಲ್ಲಿ ಬೇಯುತ್ತಿದ್ದರೂ ಮಕ್ಕಳನ್ನು ಪುಟಕ್ಕಿಟ್ಟ ಚಿನ್ನದಂತೆ ರೂಪಿಸುವ ಮಹಾನುಭಾವರು ಅವರು. ಸಂಬಳಕ್ಕಾಗಿ ದುಡಿಯದೆ, ಮಕ್ಕಳ ಭವಿಷ್ಯ ರೂಪಿಸುವ ನಿಸ್ವಾರ್ಥ ಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವ ವಿಶಿಷ್ಟ ಸಮುದಾಯವೇ ಶಿಕ್ಷಕರು. ಕರೊನಾ ಸಂಕಷ್ಟದ ಸಂದರ್ಭದಲ್ಲೂ ಮಕ್ಕಳ ಭವಿಷ್ಯ ಮನೆಯ ನಾಲ್ಕು ಗೋಡೆಗಳ ನಡುವೆ ಮುರುಟಿಹೋಗದಂತೆ ಶಿಕ್ಷಕರು ವಹಿಸಿದ ಕಾಳಜಿ ಎಂದೆಂದಿಗೂ ಸ್ಮರಣೀಯ. ಕರೊನಾ ಕಾಲದಲ್ಲಿ ಅನೇಕ ಸವಾಲುಗಳನ್ನು ಮೆಟ್ಟಿನಿಂತು ನವನವೀನ ಪ್ರಯತ್ನ, ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳನ್ನು ತಲುಪಿದ ಅನುಭವಗಳನ್ನು ನಾಡಿನ ಸಾವಿರಾರು ಶಿಕ್ಷಕರು ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ವಿಜಯವಾಣಿ ಜತೆ ಹಂಚಿಕೊಂಡಿದ್ದು, ಕೆಲವು ಆಯ್ದ ಅನುಭವಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ನಾಡಿನ ಎಲ್ಲ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನದ ಶುಭಾಶಯಗಳು.
ಕೈ ಹಿಡಿದ ಯೂಟ್ಯೂಬ್!
ಕರೊನಾ ಬರಸಿಡಿಲಿನಿಂದ ಖಾಸಗಿ ಶಾಲೆ ಶಿಕ್ಷಕರ ಪಡಿಪಾಟಲು ಹೇಳತೀರದು. ಅಷ್ಟರಲ್ಲಾಗಲೇ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಆರಂಭವಾಗಿದ್ದ ‘ಆನ್​ಲೈನ್’ ಕ್ಲಾಸ್​ಗಳು ನನ್ನನ್ನು ಹೊಸ ಸವಾಲಿಗೆ ತೆರೆದುಕೊಳ್ಳುವಂತೆ ಮಾಡಿದವು. ಲೋ ಬಜೆಟ್ ಹಾಗೂ ಸರ್ಕಾರಿ ಶಾಲೆ ಮಕ್ಕಳಿಗಾಗಿ ಮೇ 25ರಂದು ಒಂದು ‘ಯೂಟ್ಯೂಬ್’ ಚಾನಲ್ ಆರಂಭಿಸಿದೆ. ಆರಂಭದಲ್ಲಿ ತಾಂತ್ರಿಕವಾಗಿ ನೈಪುಣ್ಯತೆ ಸಾಧಿಸಲು, ಶಾಲೆ ವಾತಾವರಣ ಇಲ್ಲದೆ ಪಾಠ ಮಾಡಲು ಹರಸಾಹಸ ಪಟ್ಟೆ. ನನ್ನಲ್ಲಿದ್ದ ಸ್ಮಾರ್ಟ್​ಫೋನ್​ನಲ್ಲೇ ಪಠ್ಯಗಳನ್ನು ಚಿತ್ರೀಕರಿಸಿ ಎಡಿಟ್ ಮಾಡಿ ಯೂಟ್ಯೂಬ್​ಗೆ ಅಪ್​ಲೋಡ್ ಮಾಡಿದೆ. ನನ್ನ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿತು. 1 ರಿಂದ 10ನೇ ತರಗತಿವರೆಗಿನ ಕನ್ನಡ ಭಾಷೆಯ ಪಾಠಗಳನ್ನು ಮಾಡುವ ಮೂಲಕ ಫೀ ಕಟ್ಟಲಾಗದೆ ಆನ್​ಲೈನ್ ಶಿಕ್ಷಣ ಸಿಗದ ಮಕ್ಕಳನ್ನು ತಲುಪಿದೆ. ಮೂರು ತಿಂಗಳಲ್ಲೇ 30 ಸಾವಿರ ಮಂದಿ ಚಾನಲ್​ಗೆ ಸಬ್​ಸ್ಕ್ರೈಬ್ ಆಗಿದ್ದಾರೆ. ಸುಮಾರು 3 ಲಕ್ಷ ಮಂದಿ 10ನೇ ತರಗತಿ ಪಠ್ಯಗಳನ್ನು ವೀಕ್ಷಿಸಿದ್ದು, ಗ್ರಾಮೀಣ ಮಕ್ಕಳನ್ನು ಹೆಚ್ಚಿಗೆ ತಲುಪಿರುವ ಆತ್ಮತೃಪ್ತಿ ನನಗಿದೆ. ಯೂಟ್ಯೂಬ್ ಚಾನಲ್ ಈಗ ನನ್ನ ದುಡಿಮೆಗೂ ಆಧಾರವಾಗಿದೆ.
| ಸಿ.ತೇಜಸ್ವಿನಿ ಕನ್ನಡ ಶಿಕ್ಷಕಿ, ತುಮಕೂರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 1 =
Remember me
