| ಕೆ.ಎನ್.ರಾಘವೇಂದ್ರ ಮಂಡ್ಯ
ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಅನುಕೂಲವಾಗಿದ್ದ ‘ವಿದ್ಯಾಗಮ’ ಯೋಜನೆ ಸ್ಥಗಿತಗೊಂಡಿದೆ. ಆದರೆ ಮಂಡ್ಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ಯಿಂದ ಯೂಟ್ಯೂಬ್​ನಲ್ಲಿಯೇ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ವಿಭಿನ್ನ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆಯೂ ವ್ಯಕ್ತವಾಗಿದೆ. ಇದು ರಾಜ್ಯದಲ್ಲಿಯೇ ಮಾದರಿ ಪ್ರಯತ್ನವಾಗಿದೆ.
23 ಶಿಕ್ಷಕರಿಂದ ಬೋಧನೆ: 2 ತಿಂಗಳ ಹಿಂದೆ ಈ ಪ್ರಯೋಗಕ್ಕೆ ಕೈ ಹಾಕಲಾಯಿತು. ಈ ಸಂಬಂಧ ಡಯಟ್​ನಿಂದ ಶಿಕ್ಷಕರಿಗೆ ಮಾಹಿತಿ ನೀಡಿ, ಸ್ವಯಂ ಪ್ರೇರಿತರಾಗಿ ಬೋಧಿಸಲು ಅವಕಾಶ ನೀಡಲಾಯಿತು. ಅದರಂತೆ 23 ಶಿಕ್ಷಕರು ಬೋಧನೆಗೆ ಸಿದ್ಧರಾದರು. ಮೊದಲು ಇವರಿಗೆಲ್ಲ ತರಬೇತಿ ನೀಡಲಾಯಿತು. ನಂತರ ಡಯಟ್​ನಿಂದಲೇ ಕ್ಯಾಮರಾ ಮತ್ತು ಲೈಟ್ ವ್ಯವಸ್ಥೆ ಮಾಡಿಕೊಂಡು, ಒಂದು ಕೊಠಡಿ ಮೀಸಲಿಡಲಾಯಿತು. ‘ಸವಿ ಮಂಡ್ಯ’ ಹೆಸರಿನಲ್ಲಿ ಯೂಟ್ಯೂಬ್ ಚಾನಲ್ ಪ್ರಾರಂಭಿಸಿ, ಮೊದಲ ಹಂತದಲ್ಲಿ ಪ್ರೋಮೋ ಸಿದ್ಧಪಡಿಸಿ ಎಲ್ಲರಿಗೂ ಪರಿಚಯಿಸಲಾಯಿತು. ಬಳಿಕ ಶಿಕ್ಷಕರು ಪಾಠ ಶುರು ಮಾಡಿದರು. 6 ಪಠ್ಯಪುಸ್ತಕದಲ್ಲಿರುವ ಎಲ್ಲ ಪಾಠಗಳನ್ನು ಬೋಧಿಸಿ, ಯೂಟ್ಯೂಬ್​ಗೆ ಅಪ್​ಲೋಡ್ ಮಾಡಲಾಗುತ್ತಿದೆ.
ಪ್ರಸಾರಕ್ಕೂ ಮುನ್ನ ಪರಿಶೀಲನೆ:ಶಿಕ್ಷಕರು ಬೋಧಿಸುವ ಪಾಠವನ್ನು ಮೊದಲು ಡಯಟ್​ನಲ್ಲಿಯೇ ಪರಿಶೀಲನೆ ನಡೆಸಲಾಗುತ್ತದೆ. ಪಾಠದಲ್ಲಿರುವ ವಿಷಯಗಳು ಸರಿಯಾಗಿರುವುದರ ಬಗ್ಗೆ ಖಚಿತಪಡಿಸಿಕೊಂಡು ನಂತರ ಅಪ್​ಲೋಡ್ ಮಾಡಲಾಗುತ್ತಿದೆ. ಅಪ್​ಲೋಡ್ ಬಳಿಕ ಅದರ ಲಿಂಕ್ ಅನ್ನು ಬಿಇಒ, ಬಿಆರ್​ಸಿ, ಬಿಆರ್​ಪಿ, ಮುಖ್ಯಶಿಕ್ಷಕರ ಮೂಲಕ ವಿದ್ಯಾರ್ಥಿಗಳಿಗೆ ಕಳುಹಿಸಲಾಗುತ್ತಿದೆ. ಚಾನಲ್​ಗೆ 959 ಜನ ನೋಂದಣಿಯಾಗಿದ್ದಾರೆ. ಜತೆಗೆ, ವಿಡಿಯೋ ಗಳನ್ನು ನೋಡಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಕರೊನಾದಿಂದಾಗಿ ಶಿಕ್ಷಣಕ್ಕೆ ಹಿನ್ನಡೆ ಯುಂಟಾಗಿರುವ ಇಂಥ ಸಂದರ್ಭದಲ್ಲಿ ಡಯಟ್​ನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಸರ್ಕಾರ ದಿಂದ ಅನುದಾನವಿಲ್ಲದಿದ್ದರೂ ಇರುವ ಹಣದಲ್ಲಿಯೇ ಕಾರ್ಯಕ್ರಮ ಆರಂಭಿಸ ಲಾಗಿದೆ. ವಿಡಿಯೋಗಳನ್ನು ಯೂಟ್ಯೂಬ್​ಗೆ ಹಾಕುವ ಮುನ್ನ ಮಾಡುವ ಮಿಕ್ಸಿಂಗ್ ಕೂಡ ಶಿಕ್ಷಕರೇ ಮಾಡುತ್ತಿದ್ದಾರೆ.
ಪಠ್ಯೇತರ ಚಟುವಟಿಕೆ ಶುರು
ಏಳನೇ ತರಗತಿ ಪಠ್ಯದ ಜತೆಗೆ, ಪಠ್ಯೇತರ ಚಟುವಟಿಕೆಯ ವಿಡಿಯೋಗಳನ್ನು ಮಾಡಿಸಿ ಅಪ್​ಲೋಡ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿತ್ರಕಲೆ ಹಾಗೂ ಯೋಗ ತರಗತಿಯ ವಿಡಿಯೋ ಮಾಡಿಸಿ ಯೂಟ್ಯೂಬ್​ಗೆ ಹಾಕಲಾಗುತ್ತಿದೆ. ಈ ಸಂಬಂಧ ಸಂಬಂಧಪಟ್ಟ ಶಿಕ್ಷಕರು ವಿಡಿಯೋ ಮಾಡಬೇಕಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 5 =
Remember me
